ಶೃಂಗೇರಿ ಶ್ರೀ ಸನ್ಯಾಸತ್ವಕ್ಕೆ 50 ವರ್ಷ: 1.5 ಲಕ್ಷ ಜನರಿಂದ ನಮಃ ಶಿವಾಯ ಸ್ತೋತ್ರ- ದಾಖಲೆ
1.5 ಲಕ್ಷಕ್ಕೂ ಹೆಚ್ಚಿನ ಜನರು ಏಕಕಾಲಕ್ಕೆ ನಮಃ ಶಿವಾಯ ಸ್ತೋತ್ರ ಪಾರಾಯಣ ಮಾಡಿದರು. ಇದು ದಾಖಲೆಯಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾಯಿತು. ಅದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ತಂಡವು ವಿಧುಶೇಖರ ಭಾರತೀ ಶ್ರೀಗಳಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಬೆಂಗಳೂರು(ಅ.27): ಶ್ರೀಮಂತ ಸಂಸ್ಕೃತಿ ಹೊಂದಿರುವ ಭಾರತ ಈಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಿ ನಮ್ಮ ಸಂಸ್ಕೃತಿ, ಧರ್ಮ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಕರೆ ನೀಡಿದರು.
ಅರಮನೆ ಮೈದಾನದಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠ ಮತ್ತು ವೇದಾಂತ ಭಾರತಿ ಶನಿವಾರ ಆಯೋಜಿಸಿದ್ದ ಶೃಂಗೇರಿ ಶಾರದಾ ಪೀಠಾಧ್ಯಕ್ಷ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಮಹಾಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಧನಕರ್ ಮಾತನಾಡಿದರು.
ಶೃಂಗೇರಿಯಲ್ಲಿ ಶಾರದಾಂಬಾ ರಥೋತ್ಸವದ ಸಂಭ್ರಮ
ಹಿಂದೂ ಸಂಸ್ಕೃತಿ ಎಲ್ಲವನ್ನೂ ಒಳಗೊಂಡಿದೆ. ಮನು ಪ್ಯರ ಸಂತಸದ ಮೂಲ ಸಂಪತ್ತಲ್ಲ, ಸತ್ಯ ಮಾರ್ಗದಲ್ಲಿ ನಡೆಯುವುದರಿಂದ ಸಿಗುತ್ತದೆ. ಪೆನ್, ಪೆನ್ ಡ್ರೈವ್ ಇಲ್ಲದ ಕಾಲದಲ್ಲಿಯೂ ವೇದ ಮಂತ್ರಗಳನ್ನು ಉಳಿ ಸಿಕೊಂಡು ಬರಲಾಗಿದೆ. ಇದು ನಮ್ಮ ಪೂರ್ವಿಕರ ಶಕ್ತಿ ಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಶ್ರೀಮಂತ ಸಂಸ್ಕೃತಿಗೆ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದು, ನಿರ್ಲಕ್ಷಿಸಬಾರದು. ಸೈನಿಕರು ಬೇಕಿಲ್ಲ, ಕಟ್ಟಡ ನಾಶಅಗತ್ಯವಿಲ್ಲ, ಆದರೆ, ಸಂಸ್ಕೃತಿ ನಾಶಕ್ಕೆ ಅವಕಾಶ ನೀಡದಂತೆ ಎಲ್ಲರೂ ಒಟ್ಟಾಗಿ ಮುನ್ನ ಡೆಯಬೇಕು ಎಂದರು.
ಭಾರತೀ ಶ್ರೀಗಳಿಂದ ಧರ್ಮ ಉಳಿಸುವ ಕೆಲಸ:
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಭಾರತೀ ತೀರ್ಥರು ಧರ್ಮ ಉಳಿಸುವ ಕೆಲಸ ಮಾಡು ತ್ತಿದ್ದಾರೆ. ಕೆಲವೊಮ್ಮೆ ನಾವು ಮಾಡುವ ಪ್ರಯತ್ನಗಳಿಗೆ ಸೋಲಾಗಬಹುದು. ಆದರೆ, ನಮ್ಮ ಪ್ರಾರ್ಥನೆ ನಿಷ್ಪಲವಾಗುವುದಿಲ್ಲ, ಹಾಗೆಯೇ, ಧರ್ಮ ಕಾರ್ಯಗಳ ಮೂಲಕ ಜನರ ಗೌರವ ಉಳಿಸಿಕೊಂಡಿರುವ ಮತಗಳಲ್ಲಿ ಶೃಂಗೇರಿ ಮಠವು ಮುಂಚೂಣಿಯಲ್ಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಟಾದ್ ಜೋಶಿ, ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ, ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಇತರರಿದ್ದರು.
ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ನಮಃ ಶಿವಾಯ ಸ್ತೋತ್ರ
ಕಾರ್ಯಕ್ರಮದಲ್ಲಿ 1.5 ಲಕ್ಷಕ್ಕೂ ಹೆಚ್ಚಿನ ಜನರು ಏಕಕಾಲಕ್ಕೆ ನಮಃ ಶಿವಾಯ ಸ್ತೋತ್ರ ಪಾರಾಯಣ ಮಾಡಿದರು. ಇದು ದಾಖಲೆಯಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾಯಿತು. ಅದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ತಂಡವು ವಿಧುಶೇಖರ ಭಾರತೀ ಶ್ರೀಗಳಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಚಿಕ್ಕಮಗಳೂರು: ಶೃಂಗೇರಿ, ಹೊರನಾಡಿನಲ್ಲಿ ಶರನ್ನವರಾತ್ರಿಗೆ ಚಾಲನೆ, ದೇವಿ ದರ್ಶನ ಪಡೆದ ಭಕ್ತರು!
ಪ್ರಧಾನಿ ಸಂದೇಶ
ಶ್ರೀ ಶೃಂಗೇರಿ ಶಾರದಾ ಪೀಠಾಧ್ಯಕ್ಷ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಮಹಾ ಸ್ವಾಮೀಜಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ಕಳುಹಿಸಿದ್ದರು. ಧಾರ್ಮಿಕತೆ ಮತ್ತು ಧರ್ಮ ರಕ್ಷಣೆಯಲ್ಲಿ ಶ್ರೀಗಳ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಭಾರತೀ ತೀರ್ಥ ಶ್ರೀಗಳು ನಡೆದಾಡುವ ಶಾರದೆ: ವಿಧುಶೇಖರ ಸ್ವಾಮೀಜಿ
ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿಗಳು ನಡೆದಾಡುವ ಶಾರದೆ ಇದ್ದ ಹಾಗೆ. ಅವರು ಸನ್ಯಾಸ ಸ್ವೀಕರಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜನೋಪಯೋಗಿ ಕಾರ್ಯಕ್ರಮ ಆಯೋಜಿಸುವುದು ನಮ್ಮ ಆಸೆಯಾಗಿತ್ತು. ಗುರುಗಳಿಗೆ ಕೂಡ ಜನರಿಗೆ ಅನುಕೂಲವಾಗುವಂತಹ ಕಾರ್ಯ ಮಾಡುವುದು ಇಷ್ಟವಾಗಿದೆ. ಲೋಕಕಲ್ಯಾಣಕ್ಕಾಗಿ ಸ್ತೋತ್ರ ಪಠಣ ಕಾರ್ಯಕ್ರಮ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ. ಎಲ್ಲರೂ ಒಟ್ಟಾಗಿ ಅದ್ಭುತವಾಗಿ ಶ್ಲೋಕ ಪಾರಾಯಣ ಮಾಡಿದ್ದೀರಿ. ಪ್ರತಿ ಶ್ಲೋಕವೂ ಒಂದು ಮಂತ್ರಕ್ಕೆ ಸಮವಾದದ್ದಾಗಿದೆ ಎಂದು ತಿಳಿಸಿದರು. ಧರ್ಮದ ಮೇಲೆ ಎಷ್ಟೇ ದಾಳಿಗಳಾಗಿದ್ದರೂ ಈಗಲೂ ದೃಢವಾಗಿದೆ. ಅದಕ್ಕೆ ಶಂಕರಾಚಾರ್ಯರ ಧರ್ಮದ ಸ್ಥಾಪನೆಯೇ ಕಾರಣ. ಲೌಖಿಕ, ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿ ಕಾಣಬೇಕೆಂದರೆ ದೇವರ, ಗುರುಗಳ ಅನುಗ್ರಹ ಬೇಕು ಎಂದರು.