ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಮತ್ತು ಸಹಾಯಕಿ ನೇಮಕಾತಿ, ಜಿಲ್ಲೆ ಯಾವುದು?
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ನೇಮಕಾತಿ ನಡೆಯುತ್ತಿದ್ದು ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ನೇಮಕಾತಿ ನಡೆಯುತ್ತಿದ್ದು ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಿಬ್ಲ್ಯೂಸಿ ಡಿ), ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಒಟ್ಟು 6 ಜಿಲ್ಲೆಗಳಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದು.
10ನೇ ತರಗತಿ ಓದಿದವರಿಗೆ ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ
ಯಾವ್ಯಾವ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳ ನೇಮಕಾತಿ
ಬೆಂಗಳೂರು ಗ್ರಾಮೀಣ ಜಿಲ್ಲೆ
ಬೆಂಗಳೂರು ನಗರ ಜಿಲ್ಲೆ
ಬೆಳಗಾವಿ
ಬೀದರ್
ಹಾವೇರಿ
ತುಮಕೂರು
ಹುದ್ದೆಯ ವಿವರ
1. ಅಂಗನವಾಡಿ ಕಾರ್ಯಕರ್ತೆ -39 ಹುದ್ದೆ
2. ಅಂಗನವಾಡಿ ಸಹಾಯಕಿ - 113 ಹುದ್ದೆ
ಪ್ರಮುಖ ದಿನಾಂಕಗಳು
ಆಫ್‌ಲೈನ್ ಅಪ್ಲಿಕೇಷನ್‌ಗೆ ಕೊನೆಯ ದಿನಾಂಕ : 15-02-2024
ವಯಸ್ಸಿನ ಮಿತಿ
ಕನಿಷ್ಠ ವಯಸ್ಸಿನ ಮಿತಿ: 19ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯೂಟಿ ಮ್ಯಾನೇಜರ್ ನೇಮಕಾತಿ
ಶೈಕ್ಷಣಿಕ ವಿದ್ಯಾರ್ಹತೆ
1. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು ಮತ್ತು ಎಸ್‌ಎಸ್‌ಎಲ್‌ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
2.ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸಂದರ್ಭದಲ್ಲಿ ಸರ್ಕಾರದ ಅಂಗೀಕೃತ ಸಂಸ್ಥೆಯಿಂದ ಡಿಎಸ್ಇಆರ್‌ಟಿ ಯಿಂದ ಇಸಿಸಿಇ ಡಿಪ್ಲೊಮಾ ಕೋರ್ಸ್, ಜೆಒಸಿ ಕೋರ್ಸ್, ಎನ್‌ಟಿಟಿ ಕೋರ್ಸ್‌ಗಳನ್ನು ಹಾಗೂ ಅಂಗನವಾಡಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ನ್ಯೂಟ್ರಿಷಿಯನ್ , ಹೋಂ ಸೈನ್ಸ್ ಸರ್ಟಿಫಿಕೆಟ್ ಕೋರ್ಸ್ ಒಂದು ವರ್ಷದ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿದವರಿಗೆ ಮೊದಲ ಆದ್ಯತೆ ನೀಡುವುದು ಹಾಗೂ ಬೋನಸ್ +5 ಅಂಕಗಳನ್ನು ನೀಡಲಾಗುತ್ತದೆ.
2. ಅಂಗನವಾಡಿ ಸಹಾಯಕಿ ಹುದ್ದೆ
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಬೋನಸ್ ಅಂಕಗಳ ಮಾಹಿತಿ
ಅಂಗನವಾಡಿ ಕಾರ್ಯಕರ್ತೆ / ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಆಸಿಡ್ ದಾಳಿಗೆ ತುತ್ತಾದವರು, ವಿಧವೆ, ಇಲಾಖೆಯ ಸಂಸ್ಥೆಗಳ ನಿವಾಸಿಗಳು, ಅಂಗವಿಲಕರು, ಮಾಜಿ ದೇವದಾಸಿಯರ ಮಗಳು, ಯೋಜನಾ ನಿರಾಶ್ರಿತ ಮಹಿಳೆಯರಿಗೆ + 5 ಬೋನಸ್ ಅಂಕಗಳನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: https://anganwadirecruit.kar.nic.in/