ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯ ಬೆಂಗಳೂರು ಇಲ್ಲಿ ಖಾಲಿ ಇರುವ ಗ್ರೂಪ್‌ –ಬಿ ಮತ್ತು ಗ್ರೂಪ್‌ ಸಿ ವಿಭಾಗದ 44 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್‌ 25 ಕೊನೆಯ ದಿನವಾಗಿದೆ.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯ ಬೆಂಗಳೂರು ಇಲ್ಲಿ ಖಾಲಿ ಇರುವ ಗ್ರೂಪ್‌ –ಬಿ ಮತ್ತು ಗ್ರೂಪ್‌ ಸಿ ವಿಭಾಗದ 44 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್‌ 25 ಕೊನೆಯ ದಿನವಾಗಿದೆ.

ಹುದ್ದೆಯ ವಿವರ:

1. ಜೂನಿಯರ್‌ ಪ್ರೋಗಾಮರ್‌ : 05 ಹುದ್ದೆ

2. ಸಹಾಯಕ ಇಂಜಿನಿಯರ್‌ : 01 ಹುದ್ದೆ

3. ಸಹಾಯಕ ಗ್ರಂಥಪಾಲಕ : 01 ಹುದ್ದೆ

4. ಸಹಾಯಕ ( ಗ್ರೂಪ್‌ ಸಿ) : 12 ಹುದ್ದೆ

5. ಕಿರಿಯ ಸಹಾಯಕ : 25 ಹುದ್ದೆ

ಇವರೇ ನೋಡಿ ಈ ಬಾರಿ 2024ರ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಟಾಪ್‌ 10 ಶ್ರೀಮಂತರು!

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-4-2024

ವಯೋಮಿತಿ

ಕನಿಷ್ಟ ವಯಸ್ಸಿನ ಮಿತಿ : 18 ವರ್ಷಗಳು

ಗರಿಷ್ಟ ವಯಸ್ಸಿನ ಮಿತಿ : 35 ವರ್ಷಗಳು

ಶೈಕ್ಷಣಿಕ ವಿದ್ಯಾರ್ಹತೆ

1. ಜೂನಿಯರ್‌ ಪ್ರೋಗಾಮರ್‌ : ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ / ಎಂಸಿಎ ಪದವಿ ಪಡೆದಿರಬೇಕು

2. ಸಹಾಯಕ ಇಂಜಿನಿಯರ್‌ : ಅಭ್ಯರ್ಥಿಗಳು ಸಿವಿಲ್‌ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.

3. ಸಹಾಯಕ ಗ್ರಂಥಪಾಲಕ : ಅಭ್ಯರ್ಥಿಗಳು ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

4. ಸಹಾಯಕ ( ಗ್ರೂಪ್‌ ಸಿ) : ಅಭ್ಯರ್ಥಿಗಳು ಯಾವುದೇ ಪದವಿಯನ್ನು ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು

5. ಕಿರಿಯ ಸಹಾಯಕ : ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪದವಿ ಪೂರ್ವ ವಿಶ್ವವಿದ್ಯಾಲಯ ನಡೆಸುವ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ದೇಶದಲ್ಲೇ ಮೊದಲ ಬಾರಿಗೆ ಹೊಸ ಸಾಧನೆ ಮಾಡಿದ ಅದಾನಿ ಕಂಪೆನಿ!

ಅರ್ಜಿ ಶುಲ್ಕ :

ಸಾಮಾನ್ಯ/2ಎ/2ಬಿ/3ಎ/3ಬಿ ವರ್ಗದವರಿಗೆ : ರೂ.750

ಎಸ್‌ ಸಿ/ಎಸ್‌ ಟಿ/ಪ್ರವರ್ಗ-1 : ರೂ.500

ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿ: ಈ ಮೇಲ್ಕಂಡ ಹುದ್ದೆಗಳಿಗೆ ಓಎಂಆರ್‌ ಆಫ್‌ಲೈನ್‌ ಪರೀಕ್ಷೆಯನ್ನು ನಡೆಸಲಾಗುತ್ತದೆ. ವಿವಿಧ ಹುದ್ದೆಗೆ ಅನುಗುಣವಾಗಿ ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆ ಎಂಬ 200 ಅಂಕಗಳ ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ವಸ್ತುನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿ ಇದ್ದು, ಎರಡು ಗಂಟೆಯ ಅವಧಿಯಲ್ಲಿ ನಡೆಸಲಾಗುತ್ತದೆ. ತಪ್ಪು ಉತ್ತರಕ್ಕೆ ನಾಲ್ಕನೇ ಒಂದು ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಹುದ್ದೆಗಳ ವರ್ಗೀಕರಣ, ಪರೀಕ್ಷಾ ಕೇಂದ್ರ ಹಾಗೂ ಇನ್ನಿರತ ಮಾಹಿತಿಗಾಗಿ http://kea.kar.nic.in ವೀಕ್ಷಿಸಿರಿ