ಸ್ಪರ್ಧಾತ್ಮಕ ಪರೀಕ್ಷೆ ಅಕ್ರಮದ ಹಿಂದೆ ಖಾಕಿ ಕೈ..?
* ಸ್ಪರ್ಧಾತ್ಮಕ ಪರೀಕ್ಷೆ ಅಕ್ರಮದ ಹಿಂದೆ ಪೊಲೀಸರು?
* ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ ಎಂಬ ಆರೋಪ
* 14 ಜನರ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ(ನ.01): ಇತ್ತೀಚೆಗೆ ಪೊಲೀಸ್ ಪೇದೆ, ಪಿಎಸ್‌ಐ ಹಾಗೂ ಎಸ್‌ಡಿಎ ಹುದ್ದೆಗಳಿಗೆ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್(Bluetooth) ಉಪಯೋಗಿಸಿ ನಕಲು ಮಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಈ ಪ್ರಕರಣದ ಹಿಂದಿರುವ ಪ್ರಮುಖ ಕಿಂಗ್‌ಪಿನ್‌ನನ್ನು(Kingpin) ಇದುವರೆಗೆ ಪೊಲೀಸರು ಪತ್ತೆಹಚ್ಚದಿರುವುದು ಇದೀಗ ಸಾರ್ವಜ ನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕೆಪಿಎಸ್‌ಸಿ(KPSC) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ(Karnataka Examination Authority) ಪೊಲೀಸ್ ಪೇದೆ(Police Constable), ಪಿಎಸ್‌ಐ(PSI), ಎಸ್‌ಡಿಎ(SDA) ಹಾಗೂ ಎಫ್‌ಡಿಎ(FDA) ಹುದ್ದೆಗಳಿಗೆ ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ(Competitive Exam) ಅತ್ಯಾಧುನಿಕ ತಂತ್ರಜ್ಞಾನಯುಳ್ಳ(Advanced Technology) ಬ್ಲೂಟೂತ್ ಉಪಯೋಗಿಸಿ ನಕಲು ಮಾಡುತ್ತಿರುವ ಪ್ರಕರಣ ಕಬಂಧ ಬಾಹುನಂತೆ ಚಾಚುತ್ತಿದೆ. ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಅಂದಾಜು ನಾಲ್ಕೈದು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ವೇಳೆ ಹಲವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು(Police), ಈ ಅಕ್ರಮದ ಹಿಂದಿರುವ ಕಿಂಗ್ ಪಿನ್ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲವಾಗುತ್ತಿ ರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ: ಬ್ಲೂಟೂತ್ ಬಳಸಿ ಪೇದೆ ಪರೀಕ್ಷೆಯಲ್ಲಿ ನಕಲು..!
ಅಕ್ರಮದ ಹಿಂದೆ ಕಾಣದ ಖಾಕಿ ಕೈ?:
ಸರ್ಕಾರಿ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆದರೆ ಸಾಕು, ಪರಿಶೀಲನೆ ನಡೆಸಿದರು. ಅಕ್ರಮ(Illegal) ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಮೊದಲಿಗೆ ಮೂಡಲಗಿ ಹಾಗೂ ಗೋಕಾಕ(Gokak) ತಾಲೂಕಿನ ಸುತ್ತಮುತ್ತಲ್ಲಿನ ಗ್ರಾಮಗಳ ಪರೀಕ್ಷಾರ್ಥಿಗಳ ಹೆಸರುಗಳು ಕೇಳಿಬರುತ್ತಿವೆ. ಆದರೂ ಇದುವರೆಗೆ ತನಿಖಾಧಿಕಾರಿಗಳು ಮಾತ್ರ ಮೂಲ ರೂವಾರಿಯನ್ನು ಪತ್ತೆ ಹಚ್ಚದಿರುವುದು ಇದೀಗ ಯಕ್ಷಪ್ರಶ್ನೆಯಾಗಿದೆ. ಆದರೆ ಮೂಲಗಳ ಪ್ರಕಾರ ಈ ಅಕ್ರಮ ದಂಧೆ ಹಿಂದೆ ಪ್ರಮುಖ ರೂವಾರಿ ಎಂದು ಸುತ್ತಮುತ್ತಲಿನ ಜನರಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎನ್ನಲಾಗುತ್ತಿದೆ.
ಗೋಕಾಕ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ಪೇದೆ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು ನಡೆಸಲು ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್, ಮೊಬೈಲ್(Mobile), ಲ್ಯಾಪಟಾಪ್(Laptop) ಹಾಗೂ ಡಿವೈಸ್ ಸೇರಿದಂತೆ ಅಕ್ರಮಕ್ಕೆ ಅಗತ್ಯವಾಗಿರುವ ಎಲ್ಲ ಸಾಮಗ್ರಿಗಳನ್ನು ಈತನೇ ಪೂರೈಕೆ ಮಾಡುತ್ತಾನೆ. ಅಲ್ಲದೇ ಇತನ ಕೆಳಗೆ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್ ಇಲಾಖೆಯಲ್ಲಿನ ಪ್ರತಿಯೊಂದು ಮಾಹಿತಿಯನ್ನು ನೀಡಿ, ತನಿಖೆ ವೇಳೆ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳುತ್ತಾನೆ. ಈ ಬಗ್ಗೆ ಅ.24 ರಂದು ನಡೆದ ಪೊಲೀಸ್ ಪೇದೆ ಪರೀಕ್ಷೆಗಳಲ್ಲಿ ನಕಲು ಮಾಡಲು ಹೋಗಿ ಸಿಕ್ಕಿರುವ ಪರೀಕ್ಷಾರ್ಥಿಗಳು ಹಾಗೂ ಅಕ್ರಮ ದಂಧೆ ಗ್ಯಾಂಗ್ ತನಿಖೆ ವೇಳೆ ಕಿಂಗ್‌ಪಿನ್ ವೇಳೆ ಈ ದಂಧೆಹಿಂದೆ ಕಾಣದ ಖಾಕಿ ಕೈ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಅಕ್ರಮದ ಹಿಂದೆ ಪೊಲೀಸ್ ಇರುವ ಬಗ್ಗೆ ಮಾಹಿತಿ ಲಭ್ಯವಾದರೂ ಇದುವರೆಗೂ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪ(Allegation) ಹೊತ್ತಿರುವ ತಮ್ಮ ಅಧೀನ ಸಿಬ್ಬಂದಿಯ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಚಪ್ಪಲಿಯ ಒಳಗೆ ಬ್ಲ್ಯೂಟೂತ್ ಯಂತ್ರ ಇಟ್ಟು ಪರೀಕ್ಷೆಯಲ್ಲಿ ಅಕ್ರಮ!
ನಕಲು ಮಾಡಲು ಸಹಕರಿಸುತ್ತಿರುವ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ ಎಂಬ ಆರೋಪ
ಪೊಲೀಸ್ ಪೇದೆ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಸಮಯದಲ್ಲಿ ಬ್ಲೂಟೂತ್ ಡಿವೈಸ್ ಮೂಲಕ ನಕಲು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು(Investigation) ಎಲ್ಲ ಆಯಾಮಗಳಲ್ಲಿಯೂ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಯಾರೇ ಇದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಳಗಾವಿ(Belagavi) ನಗರ ಪೊಲೀಸ್ ಆಯುಕ್ತರು ಡಾ.ಕೆ.ತ್ಯಾಗರಾಜನ್ ತಿಳಿಸಿದ್ದಾರೆ.
14 ಜನರ ವಿರುದ್ಧ ಪ್ರಕರಣ ದಾಖಲು
ಪೊಲೀಸ್ ಪೇದೆ ನೇಮಕಾತಿ(Recruitment) ಪರೀಕ್ಷೆಗೆ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್ ಉಪಯೋಗಿಸಿ ನಕಲು ಸಹಾಯ ಮಾಡುತ್ತಿದ್ದ 12 ಜನ ಹಾಗೂ ನಕಲು ಮಾಡುತ್ತಿದ್ದ ಓರ್ವ ಮಹಿಳಾ ಹಾಗೂ ಓರ್ವ ಪುರುಷ ಅಭ್ಯರ್ಥಿ ಸೇರಿ ಒಟ್ಟು 14 ಜನರ ವಿರುದ್ಧ ಪ್ರತ್ಯೇಕ ಪ್ರಕರಣ(Case) ದಾಖಲಾಗಿವೆ. ರಾಮತೀರ್ಥ ನಗರದ ಒಂದು ಕೊಠಡಿಯಲ್ಲಿ ಪರೀಕ್ಷೆಗೆ ನಕಲು ಮಾಡಲು ಸಹಾಯ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ(Raid) ಮಾಡಿ 12 ಜನರನ್ನು ಬಂಧಿಸಿದ್ದರು. ಬಂಧಿತರಿಂದ(Arrest) 33 ಮೊಬೈಲ್, 9 ಮಾಸ್ಟರ್ ಕಾರ್ಡ್ ಡಿವೈಸರ್, 19 ಬ್ಲೂಟೂತ್, 3 ಟ್ಯಾಬ್, 1 ಲ್ಯಾಪ್‌ಟಾಪ್, ಒಂದು ಪ್ರಿಂಟರ್, ಒಂದು ವಾಹನ, 3 ಬೈಕ್ ವಶಪಡಿಸಿಕೊಂಡಿದ್ದಾರೆ.