ಬ್ಯಾಂಕ್ ಆಫ್ ಬರೋಡಾ 250 ಸೀನಿಯರ್ ಮ್ಯಾನೇಜರ್ ಎಂ ಎಸ್‌ ಎಂ ಇ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು. ಆಸಕ್ತ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಬ್ಯಾಂಕ್ ಆಫ್ ಬರೋಡಾನಲ್ಲಿ 250 ಸೀನಿಯರ್ ಮ್ಯಾನೇಜರ್ ಹುದ್ದೆಯ ನೇಮಕಾತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ 06-12-2023 ಆಗಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ 26-12-2023 ಆಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಹಾಕಲು ಕೋರಿದೆ.

ಹುದ್ದೆಯ ವಿವರ

ಸೀನಿಯರ್ ಮ್ಯಾನೇಜರ್ –ಎಂ ಎಸ್‌ ಎಂ ಇ (ಎಂ ಎಂ ಜಿ- III) – 250 ಹುದ್ದೆಗಳು

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ 06-12-2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 26-12-2023

ಅರ್ಜಿ ಶುಲ್ಕ

ಸಾಮಾನ್ಯ/ಇಡಬ್ಲ್ಯೂಎಸ್/‌ ಓಬಿಸಿ ಅಭ್ಯರ್ಥಿಗಳಿಗೆ ರು. 600

ಎಸ್‌ ಸಿ/ ಎಸ್‌ ಟಿ/ ಇಡಬ್ಲ್ಯೂಎಸ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರು. 100

ವಯಸ್ಸಿನ ಮಿತಿ (01-12-2023)

ಕನಿಷ್ಠ ವಯಸ್ಸಿನ ಮಿತಿ 28 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ 37 ವರ್ಷಗಳು

ಸ್ಟಾಫ್ ಸೆಲೆಕ್ಷನ್ ಕಮಿಷನ್ 26146 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ

1.ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಪಡೆದಿರಬೇಕು.

2.ಜೊತೆಗೆ ಎಂ ಎಸ್‌ ಎಂ ಇ ಬ್ಯಾಂಕಿಂಗ್‌ನ ಯಾವುದೇ ಬ್ಯಾಂಕ್/ ಎನ್‌ ಬಿಎಫ್‌ಸಿ /ಹಣಕಾಸು ಕ್ರೆಡಿಟ್ ಮ್ಯಾನೇಜ್‌ಮೆಂಟ್‌ನ ವಿಭಾಗದಲ್ಲಿ ಕನಿಷ್ಠ 8 ವರ್ಷಗಳ ಅನುಭವವಿರಬೇಕು.

3.ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ / ಮಾರ್ಕೆಟಿಂಗ್ ಮತ್ತು ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಪಡೆದಿರಬೇಕು.

4.ಎಂಎಸ್‌ಎಂಇ ಬ್ಯಾಂಕಿಂಗ್‌ನ ಯಾವುದೇ ಬ್ಯಾಂಕ್/ಎನ್‌ ಬಿ ಎಫ್‌ ಸಿ /ಹಣಕಾಸು ಕ್ರೆಡಿಟ್ ಮ್ಯಾನೇಜ್‌ಮೆಂಟ್‌ನ ವಿಭಾಗದಲ್ಲಿ ಕನಿಷ್ಠ 6 ವರ್ಷ ಅನುಭವವಿರಬೇಕು.

ವೇತನ ಶ್ರೇಣಿ

ರು. 63840 x 1990 (5) – 73790 x 2220 (2) – 78230 ಪರೀಕ್ಷಾವಧಿ ಆಯ್ಕೆಯಾದ ಅಭ್ಯರ್ಥಿಯು ಅವನು/ಅವಳು ಬ್ಯಾಂಕ್‌ಗೆ ಸೇರಿದ ದಿನಾಂಕದಿಂದ 12 ತಿಂಗಳ (-1- ವರ್ಷ) ಸಕ್ರಿಯ ಸೇವೆಯ ಅವಧಿಗೆ ಪ್ರೊಬೇಷನ್‌ನಲ್ಲಿರುತ್ತಾರೆ.

ಆಯ್ಕೆ ವಿಧಾನ

1. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆಯ ಮೂಲಕ ನಡೆಸಲಾಗುವುದು.

2. ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಗುಂಪು ಚರ್ಚೆ, ಸಂದರ್ಶನ ನಡೆಸಲಾಗುವುದು.

ಆನ್‌ಲೈನ್ ಪರೀಕ್ಷೆಯ ಮಾಹಿತಿ

ಆನ್‌ಲೈನ್ ಪರೀಕ್ಷೆಯು ರೀಸನಿಂಗ್, ಇಂಗ್ಲಿಷ್ ಭಾಷೆ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ವೃತ್ತಿಪರ ಜ್ಞಾನಕ್ಕೆ ಸಂಬಂಧಿಸಿದ 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 225 ಅಂಕಗಳಿದ್ದು 150 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಗಗನಸಖಿ ಆಗೋ ಕನಸು ನಿಮ್ಮದೇ, ಏರ್‌ ಹೋಸ್ಟೆಸ್‌ ಆಗುವುದು ಹೇಗೆ?

ಕನಿಷ್ಠ ಅರ್ಹತೆ

ಆನ್ ಲೈನ್‌ ಅರ್ಹತಾ ಪರೀಕ್ಷೆಯಲ್ಲಿ ಸಾಮಾನ್ಯ ಮತ್ತು ಇಡಬ್ಲ್ಯೂಎಸ್‌ ವರ್ಗದ ಅಭ್ಯರ್ಥಿಗಳು ಶೇಕಡಾ 40 ಅಂಕ ಮತ್ತು ಕಾಯ್ದಿರಿಸಿದ ವರ್ಗಗಳಿಗೆ ಶೇ.35 ಅಂಕ ಪಡೆಯಲೇಬೇಕು. ಇಲ್ಲದಿದ್ದರೆ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದಿಲ್ಲ.

ಆನ್‌ಲೈನ್ ಪರೀಕ್ಷೆ/ಜಿಡಿ/ಸಂದರ್ಶನದ ಪರೀಕ್ಷಾ ಕೇಂದ್ರ ಭಾರತದ್ಯಾದಂತ ಇರುವ ಪ್ರಮುಖ ನಗರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಪರೀಕ್ಷಾ ಕೇಂದ್ರವಾಗಿರುತ್ತದೆ.

ಸೇವಾ ಬಾಂಡ್ ಮಾಹಿತಿ

ಈ ಮೇಲ್ಕಂಡ ಹುದ್ದೆಗೆ ಆಯ್ಕೆಯಾದವರು ಸೇವೆಗೆ ಸೇರಿದ ನಂತರ ಬ್ಯಾಂಕ್‌ನಲ್ಲಿ ಕನಿಷ್ಠ -3 ವರ್ಷಗಳ ಅವಧಿಗೆ ಸೇವೆ ಸಲ್ಲಿಸಬೇಕು. ಒಂದು ವೇಳೆ ತಪ್ಪಿದ್ದಲ್ಲಿ ಅದರ ಬದಲಾಗಿ ರು.1.5 ಲಕ್ಷ ಮೊತ್ತ ದಂಡ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ : https://www.bankofbaroda.in/