ಬಳ್ಳಾರಿ ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಸಿಎಚ್‌ಓ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನ.8 ಆಗಿರುತ್ತದೆ. ಆನ್ ಲೈನ್ ಪರೀಕ್ಷೆ ದಿನಾಂಕ ನ.19 ಆಗಿರುತ್ತದೆ.
ಬಳ್ಳಾರಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ,ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್‌ಓ) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಲ್. ಜನಾರ್ಧನ ತಿಳಿಸಿದ್ದಾರೆ. ಬಿ.ಎಸ್‌ಸಿ ಮತ್ತು ಪೋಸ್ಟ್ ಬಿಎಸ್‌ಸಿ ವಿದ್ಯಾರ್ಹತೆ ಹೊಂದಿರುವ ಇಚ್ಚೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ಸಂಭಾವನೆ .24,200/- ಹೆಚ್ಚಿನ ಆದ್ಯತೆವುಳ್ಳ ಜಿಲ್ಲೆಗಳು ಹಾಗೂ .22ಸಾವಿರ ಆದ್ಯತೆ ಹೊರತುಪಡಿಸಿದ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ಬಯಸುವವರಿಗೆ ನೀಡಲಾಗುವುದು.ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪೋ›ತ್ಸಾಹ ಧನ .8ಸಾವಿರವರೆಗೆ ನೀಡಲಾಗುವುದು.
ವಯೋಮಿತಿ: ಸಾಮಾನ್ಯ ಅಭ್ಯರ್ಥಿ 35 ವರ್ಷ, ಎಸ್‌ಸಿ ಮತ್ತು ಎಸ್‌ಟಿ ಪ್ರ.ವರ್ಗ 1 ಹಾಗೂ ಮಾಜಿ ಸೈನಿಕ 40 ವರ್ಷ, 2ಎ,2ಬಿ,3ಎ,3ಬಿ ಹಾಗೂ ಇತರೆ ಹಿಂದುಳಿದ ವರ್ಗ (ರಾಜ್ಯ) 38 ವರ್ಷ ತುಂಬಿರಬೇಕು.
ಸೂಚನೆ: 6ನೇ ನೇಮಕಾತಿ ಪ್ರಕಟಣೆಯಾದ್ದರಿಂದ ಕಲ್ಯಾಣ ಕರ್ನಾಟಕ (ಏಓ) ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ರೋಸ್ಡರ್ ನಿಯಮಾನುಸಾರ ಇತರೆ (NHO) ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟು ಹುದ್ದೆಗಳು: 15 ಹುದ್ದೆಗಳು (371 (ಜೆ) ಅನ್ವಯ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತವೆ.) ಅರ್ಜಿಯನ್ನು ಕೇವಲ ಆನ್‌ಲೈನ್ ಮುಖಾಂತರ ಸಂಬಂಧಪಟ್ಟದಾಖಲಾತಿಗಳೊಂದಿಗೆ ಸಲ್ಲಿಸಬೇಕು ಹಾಗೂ ಪರೀಕ್ಷೆಯನ್ನು ಆನ್‌ಲೈನ್ ಮುಖಾಂತರ ನಡೆಸಲಾಗುವುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನ.8 ಆಗಿರುತ್ತದೆ. ಆನ್ ಲೈನ್ ಪರೀಕ್ಷೆ ದಿನಾಂಕ ನ.19 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ .https://karunadu.karnataka.gov.in/Pages/karunadu.aspx ಹಾಗೂ ದೂ 08392-274033 ಗೆ ಸಂಪರ್ಕಿಸಬಹುದಾಗಿದೆ.
ನಿಮ್ಮ ಸಂಬಳವೆಷ್ಟು ಎಂದು ಕೇಳಿದ್ರೆ ಸತ್ಯ ಹೇಳುವವರೆಷ್ಟು : ಇಲ್ಲಿದೆ ಸಮೀಕ್ಷೆ ಫಲಿತಾಂಶ
ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
ಬಳ್ಳಾರಿ: ಕುರೇಕುಪ್ಪ ಪುರಸಭೆಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಮುನಿಸಿಪಾಲಿಟಿ ಯೋಜನೆ ಹಂತ-4ರಲ್ಲಿ ವಿವಿಧ ಸೌಲಭ್ಯಗಳಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರೇಕುಪ್ಪ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾಯ್ದಿರಿಸಿದ ಶೇ.7.25 ಮತ್ತು ಶೇ.5 ಅನುದಾನದಲ್ಲಿ ಶೇ.40ರಷ್ಟುವೈಯಕ್ತಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಅನುದಾನಕ್ಕೆ ಸಂಬಂಧಿಸಿದಂತೆ ಕುರೇಕುಪ್ಪ ಪಟ್ಟಣದಲ್ಲಿ ಖಾಲಿ ನಿವೇಶನ ಹೊಂದಿದ ಹಿಂದುಳಿದ ವರ್ಗದ ಅರ್ಹ ಫಲಾನುಭವಿಗಳಿಗೆ ಪಕ್ಕಾ ಮನೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯಧನ ಮತ್ತು ವಿಕಲಚೇತನರಿಗೆ ಸರ್ಕಾರವು ಹೆಸರಿಸಿದ ಜೀವ ವಿಮೆ/ಆರೋಗ್ಯ ವಿಮೆ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ಅರ್ಹ ಅರ್ಜಿದಾರರು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಿ ಅರ್ಜಿಗಳನ್ನು ಪಡೆದು ನ. 10ರೊಳಗಾಗಿ ಕಚೇರಿಗೆ ಸಲ್ಲಿಸತಕ್ಕದ್ದು.
CENTRAL SILK BOARD RECRUITMENT 2022: ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೇಕಾದ ದಾಖಲೆಗಳು: ಅರ್ಜಿ ನಮೂನೆ,ಆಧಾರ ಕಾರ್ಡ್,ವೋಟರ್‌ಐಡಿ, ರೇಷನ್‌ಕಾರ್ಡ್, ನಿವೇಶನಕ್ಕೆ ಸಂಬಂಧಿಸಿದ ಆಸ್ತಿ ದಾಖಲಾತಿಗಳು,ವಿಕಲಚೇತನರಾಗಿದ್ದರೆ ವಿಕಲಚೇತನ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಚ್ ಸೈಜ್ 2-ಭಾವಚಿತ್ರ.ಅರ್ಜಿದಾರರು ಹಾಗೂ ಕುಟುಂಬದವರ ಹೆಸರಿನಲ್ಲಿ ಯಾವುದೇ ಮನೆ ಇಲ್ಲವೆಂದು ಕೋರ್ಚ್ ಅಫಿಡೇವಿಟ್ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕುರೆಕುಪ್ಪ ಪುರಸಭೆ ಕಚೇರಿ ಹಾಗೂ ದೂ.08392-295601ಗೆ ಸಂಪರ್ಕಿಸಬಹುದಾಗಿದೆ.