Asianet Suvarna News Asianet Suvarna News

Mangalore University Recruitment 2022: ನ್ಯಾಯವಾದಿ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ  ನ್ಯಾಯವಾದಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.  ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 25 ಕೊನೆಯ ದಿನವಾಗಿದೆ.

Mangalore University Recruitment 2022 notification for Advocate gow
Author
Bengaluru, First Published Feb 11, 2022, 8:00 PM IST

ಬೆಂಗಳೂರು(ಫೆ.11): ಮಂಗಳೂರು ವಿಶ್ವವಿದ್ಯಾಲಯದಲ್ಲಿ (Mangalore University) ಖಾಲಿ ಇರುವ  ನ್ಯಾಯವಾದಿ ಹುದ್ದೆಗಳನ್ನು   ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.  ಅರ್ಹ ಮತ್ತು  ಆಸಕ್ತರು ಫೆಬ್ರವರಿ 25ರೊಳಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗೆ ಆಸಕ್ತರು mangaloreuniversity.ac.in ಗೆ ಭೇಟಿ ನೀಡಬಹುದು. ನೋಟಿಫಿಕೇಶನ್ ಬಗ್ಗೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ https://mangaloreuniversity.ac.in/sites/default/files/notification-and-Terms-and-conditions-Panel-of-Advocates-Revision.pdf

ಶೈಕ್ಷಣಿಕ ವಿದ್ಯಾರ್ಹತೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ನ್ಯಾಯವಾದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು  ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ವಿದ್ಯಾರ್ಹತೆಯನ್ನು  ಪಡೆದಿರಬೇಕು.  ಜೊತೆಗೆ ವೃತ್ತಿ ಅನುಭವವನ್ನು ಹೊಂದಿರಬೇಕು.

BARC RECRUITMENT 2022: ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇತರ ಅರ್ಹತೆಗಳು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ನ್ಯಾಯವಾದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಗಿನ ಮಾನದಂಡಗಳನ್ನು ಹೊಂದಿರಬೇಕು
-ಬಾರ್ ಕೌನ್ಸಿಲ್ ಆಫ್ ಇಂಡಿಯಾ / ಸ್ಟೇಟ್ ಬಾರ್ ಕೌನ್ಸಿಲ್‌ಗಳಲ್ಲಿ ನೋಂದಣಿ ಹೊಂದಿರಬೇಕು.
-ಕನಿಷ್ಠ ವೃತ್ತಿಪರ/ಕೋರ್ಟ್ ಅಭ್ಯಾಸ ಅನುಭವವನ್ನು ಹೊಂದಿರಬೇಕು
-ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಡ್ವೊಕೇಟ್ಸ್ ಆನ್ ರೆಕಾರ್ಡ್ (AOR)/ ಹಿರಿಯ ವಕೀಲರು / ಎಂಪನೆಲ್‌ಮೆಂಟ್‌ಗಾಗಿ ವಕೀಲರಾಗಿ ಕನಿಷ್ಠ ಹತ್ತು ವರ್ಷಗಳ ಅನುಭವ ಇರಬೇಕು.
-ಕರ್ನಾಟಕ ಹೈಕೋರ್ಟ್‌ನಲ್ಲಿ ಎಂಪನೆಲ್‌ಮೆಂಟ್‌ಗಾಗಿ ವಕೀಲಾತಿ ಅಭ್ಯಾಸ ಮಾಡಿ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು.

East Coast Railway Apprentice Recruitment 2022: ಬರೋಬ್ಬರಿ 756 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ನ್ಯಾಯವಾದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಯಮಾನುಸಾರ ವಯೋಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಧಿಕಾರಾವಧಿ ಮತ್ತು ನಿಯಮಗಳು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ನ್ಯಾಯವಾದಿ ಹುದ್ದೆಗಳಿಗೆ  ಆಯ್ಕೆಯಾದ ಅಭ್ಯರ್ಥಿಗಳನ್ನು ಐದು ವರ್ಷಗಳ ಅವಧಿ ವರೆಗೆ  ನೇಮಕ ಮಾಡಲಾಗುತ್ತದೆ.  ಮಾತ್ರವಲ್ಲ ಅಭ್ಯರ್ಥಿಯ ಸೇವಾವಧಿ ಇಷ್ಟವಾದರೆ, ದೋಷಪೂರಿತವಾಗಿ ಇರದಿದ್ದರೆ . ಸೇವಾ ಅವಧಿಯನ್ನು  ವಿಶ್ವವಿದ್ಯಾಲಯ ನವೀಕರಿಸಬಹುದು.  ವಕೀಲ ಹುದ್ದೆಗೆ ಆಯ್ಕೆಯಾದವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮೀಸಲಾದ ನೋಟಿಸ್ ಸ್ವೀಕರಿಸಬೇಕು ಮತ್ತು ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಮತ್ತು ನ್ಯಾಯಾಲಯಗಳಲ್ಲಿ ಇರುವ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿ ದಾವೆಗಳಿಗೆ ಹಾಜರಾಗಬೇಕು.

INDIA UNEMPLOYED PEOPLE: 2020ರ ಲಾಕ್‌ಡೌನ್ ಮೊದಲ 3 ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರು 23 ಲಕ್ಷ ಮಂದಿ!

ಅರ್ಜಿ ಸಲ್ಲಿಸುವ ವಿಧಾನ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ನ್ಯಾಯವಾದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://mangaloreuniversity.ac.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಫೆಬ್ರವರಿ 25,2022ರೊಳಗೆ ಅರ್ಜಿಯನ್ನು ತಲುಪಿಸಬೇಕು. ಅಭ್ಯರ್ಥಿಗಳು ಅರ್ಜಿಯನ್ನು registrarmangaloreuniversity@gmail.com, dhnaik63@gmail.com, mulegalcell@gmail.com ವಿಳಾಸಕ್ಕೆ ಮೇಲ್ ಮಾಡುವ ಮೂಲಕ ಕೂಡ ಅರ್ಜಿ  ಸಲ್ಲಿಸಬಹುದು.

ಕಚೇರಿ ವಿಳಾಸ :
Registrar
Mangalore University
Mangalagangothri
Konaje
Dakshina Kannada District
Mangalore - 574199
Karnataka

HAL Recruitment 2022: ಮ್ಯಾನೇಜ್​ಮೆಂಟ್ ಟ್ರೇನಿ ಸೇರಿ 85 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Follow Us:
Download App:
  • android
  • ios