ಪೊಲೀಸ್ ನೇಮಕಾತಿ ಲಿಖಿತ ಪರೀಕ್ಷೆ; ಅಭ್ಯರ್ಥಿಗಳಿಗೆ ಮಹತ್ವದ ಸೂಚನೆಗಳು

ಕೋವಿಡ್ ಭೀತಿಯ ನಡುವೆಯೇ ಸಿವಿಲ್ ಪೊಲೀಸ್ ನೇರ ನೇಮಕಾತಿ ಪರೀಕ್ಷೆಗೆ ದಿನಾಂಕ ಪ್ರಕಟಿಸಿದೆ. ಇದರ ಜೊತೆಗೆ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳಿಗೆ ಸೂಚನೆಗಳನ್ನು ಸಹ ನೀಡಿದ್ದು, ಅವು ಈ ಕೆಳಗಿನಂತಿವೆ. 

Mandya police recruitment written examination instructions to candidates rbj

ಮಂಡ್ಯ, (ಸೆ.16): ಮಂಡ್ಯ ಜಿಲ್ಲಾ ಪೊಲೀಸ್‌ ಘಟಕದಲ್ಲಿ ಖಾಲಿ ಇರುವ 50 ಸಿವಿಲ್‌ ಪೊಲೀಸ್‌ ಹುದ್ದೆಗಳ ನೇರ ನೇಮಕಾತಿ ಲಿಖಿತ ಪರೀಕ್ಷೆ ದಿನಾಂಕ ಪ್ರಕಟಿಸಿದೆ.  

ಕೋವಿಡ್ ಭೀತಿಯ ನಡುವೆಯೇ ಮಂಡ್ಯ ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ನೇರ ನೇಮಕಾತಿ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 20ರಂದು ಪರೀಕ್ಷೆ ನಿಗದಿಯಾಗಿದೆ. 

ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

ಲಿಖಿತ ಪರೀಕ್ಷೆಗೆ ಹಾಜರಾಗುವ ಸಂಬಂಧ ಕರೆಪತ್ರಗಳನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ http://www.ksp.gov.inನಿಂದ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳಿಗೆ ಸೂಚನೆಗಳನ್ನು ಸಹ ನೀಡಿದ್ದು, ಅವು ಈ ಕೆಳಗಿನಂತಿವೆ.

ಸೂಚನೆಗಳು
*ಅಭ್ಯರ್ಥಿಗಳಿಗೆ ಕೋವಿಡ್ 19 ಸೋಂಕಿನ ಯಾವುದಾದರೂ ಲಕ್ಷಣಗಳು ಇದ್ದರೆ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿನ ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಬೇಕು.
* ಕೋವಿಡ್ 19 ಸಮುದಾಯಕ್ಕೆ ಹಡುವುದನ್ನು ತಡೆಗಟ್ಟಲು ಅಭ್ಯರ್ಥಿಗಳೇ ವಯಕ್ತಿಕ ಜವಾಬ್ದಾರಿಯನ್ನು ವಹಿಸಬೇಕು.
* ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿಯು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯಲಿದೆ.
* ಅಭ್ಯರ್ಥಿಗಳಿಗೆ ಕೋವಿಡ್ 19 ಸೋಂಕಿನ ಯಾವುದಾದರೂ ಲಕ್ಷಣಗಳು ಇದ್ದರೆ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿನ ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಬೇಕು.
* ಕೋವಿಡ್ 19 ಸಮುದಾಯಕ್ಕೆ ಹಡುವುದನ್ನು ತಡೆಗಟ್ಟಲು ಅಭ್ಯರ್ಥಿಗಳೇ ವಯಕ್ತಿಕ ಜವಾಬ್ದಾರಿಯನ್ನು ವಹಿಸಬೇಕು.

Latest Videos
Follow Us:
Download App:
  • android
  • ios