ಬೆಂಗಳೂರು, (ಮಾ.16): ಕೆಎಸ್‌ಟಿಡಿಸಿ ನಿಗಮದ ಯುಗಚಿ ಘಟಕದಲ್ಲಿ ಖಾಲಿ ಇರುವ 18 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಸಕ್ತ ಹಾಗೂ ಅರ್ಹ  ಅಭ್ಯರ್ಥಿಗಳು ಮಾರ್ಚ್ 20, 2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳು: ಸಹಾಯಕ ವ್ಯವಸ್ಥಾಪಕರು (ಹೋಟೆಲ್), ಸ್ವಾಗತಗಾರರು, ಉಗ್ರಾಣಿಕರು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು/ಬಿಲ್/ಕ್ಲರ್ಕ್/ಕ್ಯಾಷಿಯರ್, ಅಡುಗೆಯವರು ಮತ್ತು ಅಡುಗೆ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಜಾಬ್ಸ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಹುದ್ದೆಗಳಿಗೆ ತಕ್ಕಂತೆ 7ನೇ ತರಗತಿ, ಪಿಯುಸಿ, ಡಿಪ್ಲೋಮಾ, ಪದವಿ ಇತ್ಯಾದಿ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು. ಕೆಲ ಹುದ್ದೆಗಳಿಗೆ ಕೆಲಸದ ಅನುಭವವನ್ನೂ ಹೊಂದಿರಬೇಕು.

ಮೇಲೆ ತಿಳಿಸಲಾಗಿರುವ ಹುದ್ದೆಗಳಿಗೆ ಅಭ್ಯರ್ಥಿಗಳು ಉತ್ತಮ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಹಾಗೂ ಸಂಘಟನಾ ಕೌಶಲ ಹೊಂದಿರಬೇಕು.

ರಾಜ್ಯದ ಯಾವುದೇ ಭಾಗಕ್ಕೆ ನಿಯೋಜನೆಗೊಂಡರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಈ ನೇಮಕದ ಕುರಿತು ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Karnataka State Tourism Development Corporation,
Executive Office, Ground Floor, Yeshwantpur TTMC, BMTC Bus Stop,Yeshwantpur Circle, Bengaluru – 560022,
Karnataka