ಕರ್ನಾಟಕ ಪ್ರವಾಸೋದ್ಯಮ ನಿಗಮ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಜ.24): ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕರ್ನಾಟಕದ ವಿವಿಧ ಘಟಕಗಳಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಒಟ್ಟು 76 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 3/2/2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಗ್ರಾಮಲೆಕ್ಕಾಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೇ ನೇರ ನೇಮಕಾತಿ
ಯಾವ-ಯಾವ ಹುದ್ದೆಗಳು
ವ್ಯವಸ್ಥಾಪಕರು (ಹೋಟೆಲ್) 4, ಸಹಾಯಕ ವ್ಯವಸ್ಥಾಪಕರು (ಹೋಟೆಲ್) 4, ಸ್ವಾಗತಗಾರರು 4, ದ್ವಿತೀಯ ದರ್ಜೆ ಸಹಾಯಕರು/ಬಿಲ್/ಕ್ಲರ್ಕ್/ಕ್ಯಾಷಿಯರ್ 7, ಹೌಸ್ ಕೀಪಿಂಗ್ ಸೂಪರ್ ವೈಸರ್ 4, ಉಗ್ರಾಣಿಕರು 4, ಅಡುಗೆಯವರು 6, ಸಹಾಯಕ ಅಡುಗೆಯವರು 6, ಅಡುಗೆ ಸಹಾಯಕರು 10, ಸಾಮಾನ್ಯ ಉಪಯೋಗಿ ಕೆಲಸಗಾರರು (ರೂಂ ಬಾಯ್/ಮಾಣಿ/ ಸ್ವೀಪರ್/ಕ್ಲೀನರ್/ ಗಾರ್ಡನರ್) 28 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ನಿಗಧಿತ ನಮೂನೆಯಲ್ಲಿ ತಮ್ಮ ಸ್ವವಿವರವನ್ನು ಭರ್ತಿ ಮಾಡಿ, ವಿದ್ಯಾರ್ಹತೆ ಮತ್ತು ಸೇವಾ ಅನುಭವ ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ: 03.02.2020 ರೊಳಗೆ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಮತ್ತಷ್ಟು ಜಾಬ್ಸ್ ಸದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಬೇಕಾದ ವಿಳಾಸ
ವ್ಯವಸ್ಥಾಪಕರು (ಆಡಳಿತ) ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ., ಕಾರ್ಯನಿರ್ವಾಹಕ ಕಛೇರಿ, ನೆಲಮಹಡಿ, ಯಶವಂತಪುರ ಟಿಟಿಎಂಸಿ, ಬಿ.ಎಂ.ಟಿ.ಸಿ ಬಸ್ ನಿಲ್ದಾಣ, ಯಶವಂತಪುರ ವೃತ್ತ, ಬೆಂಗಳೂರು-560 022.
ಷರತ್ತು ಮತ್ತು ನಿಬಂಧನೆಗಳು
* ಅಭ್ಯರ್ಥಿಗಳು ದಾಖಲಾತಿಗಳನ್ನೊಳಗೊಂಡ ಅರ್ಜಿಯನ್ನು ಮುಚ್ಚಿದ ಲಕೋಟೆ ಸ್ಪೀಡ್ ಪೋಸ್ಟ್/ರಿಜಿಸ್ಟರ್
ಪೋಸ್ಟ್/ ಕೋರಿಯರ್ ಅಥವಾ ನೇರವಾಗಿ ಮೇಲೆ ತಿಳಿಸಿದ ವಿಳಾಸಕ್ಕೆ ಬಂದು ಸಲ್ಲಿಸಬಹುದಾಗಿದೆ.
* ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಪದನಾಮವನ್ನು ಲಕೋಟೆ/ಪೋಸ್ಟ್ ಕವರ್‍ನ ಮೇಲೆ
ನಮೂದಿಸತಕ್ಕದ್ದು, ತಪ್ಪಿದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
* ದಿನಾಂಕ: 03.02.2020 ರ ನಂತರದಲ್ಲಿ ಸ್ವೀಕೃತಗೊಂಡ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
* ನಿಗಮವು ಯಾವುದೇ ಕಾರಣವನ್ನು ನೀಡದೆ ಅರ್ಜಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನು
ಹೊಂದಿರುತ್ತದೆ.
* ನಿಗಮವು ನೀಡಿರುವ ನಮೂನೆಯಲ್ಲದೇ, ಇತರೆ ಯಾವುದೇ ನಮೂನೆಯಲ್ಲಿ ಸ್ವವಿವರವನ್ನು ಸಲ್ಲಿಸಿದರೆ ಯಾವುದೇ ಕಾರಣಕ್ಕೂ
ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.
* ಅಭ್ಯರ್ಥಿಗಳು ಕರ್ನಾಟಕದ ಯಾವುದೇ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು.
ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ