Asianet Suvarna News Asianet Suvarna News

ಸಾರಿಗೆ ನೌಕಕರ ಬಹುದಿನದ ಬೇಡಿಕೆ ಈಡೇರಿಸಿದ ಕೆಎಸ್‌ಆರ್‌ಟಿಸಿ; ಸರ್ಕಾರಿ ನೌಕರರಂತೆ ವೇತನ ಸೌಲಭ್ಯ

ಸಾರಿಗೆ ಇಲಾಖೆ ನೌಕರರಿಗೂ ಕೂಡ ಸರ್ಕಾರಿ ನೌಕರರಿಗೆ ವೇತನ ಪಾವತಿಸುವ ಮಾದರಿಯಲ್ಲಿಯೇ ಹೆಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ವೇತನ ಪಾವತಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.

KSRTC fulfills long standing demand of transport employees then facilities like govt staff sat
Author
First Published Aug 7, 2024, 4:22 PM IST | Last Updated Aug 7, 2024, 4:22 PM IST

ಬೆಂಗಳೂರು (ಆ.07): ರಾಜ್ಯದ ಎಲ್ಲ ಸಾರಿಗೆ ಇಲಾಖೆ ನೌಕರರಿಗೂ ಕೂಡ ಸರ್ಕಾರಿ ನೌಕರರಿಗೆ ವೇತನ ಪಾವತಿಸುವ ಮಾದರಿಯಲ್ಲಿಯೇ ಹೆಚ್‌ಆರ್‌ಎಂಎಸ್ (human resource management system-HRMS) ತಂತ್ರಾಂಶದ ಮೂಲಕ ವೇತನ ಪಾವತಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮುಂದಾಗಿದೆ.

ಕೆಎಸ್‌ಆರ್‌ಟಿಸಿಯ ಎಲ್ಲ ನೌಕರರಿಗೆ ಆಗಸ್ಟ್ ತಿಂಗಳಿಂದ HRMS ತಂತ್ರಾಂಶದನ್ವಯ ವೇತನ ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಹೆಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ದಾಖಲಾಗುವ ಹಾಜರಾತಿ ಮತ್ತು ರಜೆ ಮಂಜೂರಾತಿಯನ್ವಯ ವೇತನ ಪಾವತಿ ಕಡ್ಡಾಯ. HRMS ವೇತನ ಹೊರತುಪಡಿಸಿ ಬೇರೆ ಮಾದರಿಯ ವೇತನ ಬಿಲ್ಲು ತಯಾರಿಸಲು ಅವಕಾಶವಿಲ್ಲ. ಹೆಚ್‌ಆರ್‌ಎಂಎಸ್ ಅಡಿಯಲ್ಲಿ ಸಂಬಳ ನೀಡುವಂತೆ 2020 ರಿಂದ ನೌಕರರು ಮಾಡುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ಬಹುದಿನಗಳ ನೌಕರರ ಬೆಡಿಕೆಯನ್ನು ಈಡೇರಿಸಲಾಗಿದೆ. ಆಗಸ್ಟ್‌ ತಿಂಗಳ ವೇತನದಿಂದಲೇ ಹೊಸ ತಂತ್ರಾಂಶದ ಮೂಲಕ ವೇತನ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.

ಉಡುಪಿಯಲ್ಲಿ ನಿಂತಲ್ಲೇ ಅಲ್ಲಾಡುತ್ತಿದ್ದ ಕಾರು; ಜನರಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ರತಿಕ್ರೀಡಾ ಜೋಡಿ!

ಹೆಚ್‌ಆರ್‌ಎಂಎಸ್ ಸೌಲಭ್ಯಗಳೇನು?

  • ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು (Pay Slip) ಅನ್ನು ಪಡೆಯಬಹುದು.
  • ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸಬಹುದು.
  • ನೌಕರರು ಸಾಲ ಅಥವಾ ಮುಂಗಡದ ವಿವರಗಳನ್ನು ವೀಕ್ಷಿಸಬಹುದು.
  • ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ (IT), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್‌ಪಿಎಸ್, ಮುಂತಾದವುಗಳನ್ನು ನೋಡಬಹುದು.
  • ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಪ್ ಮುಂತಾದ ವಿವರಗಳನ್ನು ಸಹ ವೀಕ್ಷಿಸಬಹುದು.
  • ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (ESR) ಯಲ್ಲಿ ಅಪ್‌ಲೋಡ್ ಮಾಡಿ ಪಬ್ಲಿಷ್ ಮಾಡಿದ ಇ-ಸೇವಾ ಪುಸ್ತಕವನ್ನು ಈ ಪರದೆಯಲ್ಲಿ ನೋಡಬಹುದು.

ನಮ್ಮ ಮೆಟ್ರೋ 12 ವರ್ಷದ ಬಳಿಕ ದಾಖಲೆಯ ರೈಡರ್‌ಶಿಪ್; ಒಂದೇ ದಿನ 8.26 ಲಕ್ಷ ಪ್ರಯಾಣಿಕರ ಸಂಚಾರ

  • ಆಫೀಸ್ ಗೆ 50 ಮೀಟರ್ ಇರುವಾಗಲೇ HRMS ತಂತ್ರಾಂಶ ಸ್ವಯಂಚಾಲಿತವಾಗಿ ಲಾಗಿನ್ ಆಗಲಿದೆ.
  • ಆಫೀಸ್ ನಿಂದ ನೌಕರರು ದೂರ ಹೋದ್ರೆ ಆಟೋಮೆಟಿಕ್ ಲಾಗ್ಔಟ್ ಆಗಲಿದೆ.
  • ನೌಕರರು ಹೆಚ್‌ಆರ್‌ಎಂಎಸ್‌ನಲ್ಲಿ ಸೃಜಿಸಿದ ಟಿಕೆಟ್‌ ನ ವಿವರಗಳನ್ನು ವೀಕ್ಷಿಸಬಹುದು.

KSRTC fulfills long standing demand of transport employees then facilities like govt staff sat

Latest Videos
Follow Us:
Download App:
  • android
  • ios