ಸಾರಿಗೆ ಇಲಾಖೆ 13 ಸಾವಿರ ಉದ್ಯೋಗ ನೇಮಕಾತಿಗೆ ಶೀಘ್ರ ಚಾಲನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಇಲಾಖೆಯ ಕೆಎಸ್‌ಆರ್‌ಟಿಸಿ ನಿಗಮಗಳಿಗೆ 13 ಸಾವಿರ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.
ಬೆಂಗಳೂರು (ಸೆ.14): ರಾಜ್ಯದ ಸಾರಿಗೆ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆಯಿದೆ. ಹೀಗಾಗಿ, ಶೀಘ್ರವೇ ಸಾರಿಗೆ ಇಲಾಖೆಯ ಕೆಎಸ್‌ಆರ್‌ಟಿಸಿ ನಿಗಮಗಳಿಗೆ 13 ಸಾವಿರ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೂಡಲೇ ಸಿಬ್ಬಂದಿ ನೇಮಕಾತಿಯಾಗುತ್ತದೆ. ಒಟ್ಟು 13 ಸಾವಿರ ಸಿಬ್ಬಂದಿ ನೇಮಕ ಮಾಡ್ತೀವಿ. ಖಾಸಗಿ ಬಸ್ಸುಗಳು ಹೆಚ್ಚು ದರ ತೆಗೆದುಕೊಳ್ಳುತ್ತಿರುವ ವಿಚಾರವಾಗಿ ನನ್ನ ಗಮನಕ್ಕೆ ಬಂದಿದೆ, ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಆ ರೀತಿ ಹೆಚ್ಚಿನ ದರ ತೆಗೆದುಕೊಳ್ತಿದ್ರೇ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಗಣೇಶನ ಹಬ್ಬ, ದಸರಾ ಹಬ್ಬಕ್ಕೆ ಸರ್ಕಾರಿ ಸಾರಿಗೆ ನಿಮಗಳಿಂದಲೂ ಸಹ ಹೆಚ್ಚು ಬಸ್ಸುಗಳನ್ನ ಸಂಚಾರ ಮಾಡಿಸ್ತೀವಿ ಎಂದು ಮಾಹಿತಿ ನೀಡಿದರು.
ಇನ್ನು ರಾಜ್ಯದಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಜೊತೆಗೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಸೋಮಶೇಖರ್ ಬರ್ತೀನಿ ಅಂದ್ರೆ ಆಮೇಲೆ ಯೋಚನೆ ಮಾಡೋಣ. ಸಧ್ಯ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.