ಕರ್ನಾಟಕ ಜೈಲರ್, ವಾರ್ಡರ್ ಹುದ್ದೆ: ಲಿಖಿತ ಪರೀಕ್ಷೆಗೆ ಹೊಸ ದಿನಾಂಕ ಪ್ರಕಟ

 662 ಜೈಲರ್ ಮತ್ತು ವಾರ್ಡರ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷಾ ದಿನಾಂಕವನ್ನು ಕರ್ನಾಟಕ ಕಾರಾಗೃಹ ಇಲಾಖೆ  ಪ್ರಕಟಿಸಿದೆ.

KSP Announces Jailor warder Posts exam date

ಬೆಂಗಳೂರು, (ಮೇ.29): ಜೈಲರ್ ಮತ್ತು ವಾರ್ಡರ್ ಹುದ್ದೆಗಳ ನೇಮಕಾತಿಗೆ ಪರಿಸ್ಕೃತ ಲಿಖಿತ ಪರೀಕ್ಷಾ ದಿನಾಂಕ ಪ್ರಕಟವಾಗಿದೆ.

 662 ಜೈಲರ್ ಮತ್ತು ವಾರ್ಡರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮೇ 19,2019 ರಂದು ಪರೀಕ್ಷಾ ದಿನಾಂಕವನ್ನು ನಿಗದಿ ಪಡಿಸಲಾಗಿತ್ತು. ಕಾರಣಾಂತರಗಳಿಂದ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿತ್ತು.

ಕರ್ನಾಟಕ ಕಾರಾಗೃಹದ ಜೈಲರ್, ವಾರ್ಡರ್ ಹುದ್ದೆಯ ಲಿಖಿತ ಪರೀಕ್ಷೆ ಮುಂದೂಡಿಕೆ

ಇದೀಗ ಪರೀಕ್ಷಾ ದಿನಾಂಕವನ್ನು ನಿಗದಿ ಪಡಿಸಲಾಗಿದ್ದು, ಸದರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳು ಇದೇ ಜೂನ್ 23,2019 ರಂದು ನಡೆಯಲಿವೆ. 

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ,ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios