ಕರ್ನಾಟಕ ಲೆಕ್ಕ ಪರಿಶೋಧನೆ, ಲೆಕ್ಕ ಪತ್ರ ಇಲಾಖೆಯಲ್ಲಿ ನೇಮಕಾತಿ, 1 ಲಕ್ಷದವರೆಗೆ ವೇತನ
ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ ಗ್ರೂಪ್-ಎ ಸಹಾಯಕ ನಿಯಂತ್ರಕರು ಮತ್ತು ಗ್ರೂಪ್-ಬಿ ಆಡಿಟ್ ಆಫೀಸರ್ ಹುದ್ದೆಯ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 97 ಗ್ರೂಪ್-ಎ ಸಹಾಯಕ ನಿಯಂತ್ರಕರು ಮತ್ತು ಗ್ರೂಪ್-ಬಿ ಆಡಿಟ್ ಆಫೀಸರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹದು.
ಹುದ್ದೆಯ ವಿವರ:
1. ಸಹಾಯಕ ನಿಯಂತ್ರಕರು (ಗ್ರೂಪ್-ಎ) : 43 ಹುದ್ದೆ
2. ಆಡಿಟ್ ಆಫೀಸರ್ (ಗ್ರೂಪ್- ಬಿ) : 54 ಹುದ್ದೆ
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ: 18-03-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 17-04-2024
ಪೂರ್ವಭಾವಿ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): 02-06-2024
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 600
ಪ್ರವರ್ಗ 2 ಎ, 2 ಬಿ, 3 ಎ ಮತ್ತು 3 ಬಿ ಅಭ್ಯರ್ಥಿಗಳಿಗೆ: ರೂ. 300
ಮಾಜಿ ಸೈನಿಕರಿಗೆ: ರೂ.50
ಎಸ್ ಸಿ/ ಎಸ್ ಟಿ/ ಪ್ರವರ್ಗ-೧/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕವಿಲ್ಲ
ವಯಸ್ಸಿನ ಮಿತಿ (17-04-2024 ರಂತೆ):
ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
ವೇತನ ಶ್ರೇಣಿ:
1. ಸಹಾಯಕ ನಿಯಂತ್ರಕರು (ಗ್ರೂಪ್-ಎ) : ರೂ.52650 -97100
2. ಆಡಿಟ್ ಆಫೀಸರ್ (ಗ್ರೂಪ್- ಬಿ) : ರೂ.43100-83900
ಶೈಕ್ಷಣಿಕ ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ವಾಣಿಜ್ಯಶಾಸ್ರ್ತದಲ್ಲಿ ಸ್ನಾತಕೋತ್ತರ ಪದವಿ (ಎಂ.ಕಾಂ) ಅಥವಾ ಎಂಬಿಎ (ಆರ್ಥಿಕ) ಅಥವಾ ಎಂಬಿಎ (ಆರ್ಥಿಕ ನಿರ್ವಹಣೆ) ಅಥವಾ ಎಂ.ಕಾಂ/ ಎಂಬಿಎ ( ವಿಶ್ಲೇಷಣೆ ) ಅಥವಾ ಯುಜಿಸಿ ಯು ಆರ್ಥಿಕ ಎಂಬುದನ್ನು ಒಂದು ವಿಷಯವನ್ನಾಗಿ ಅಭ್ಯಸಿಸಿರುವ ಅಧಿಸೂಚನೆ ಹೊರಡಿಸಿರುವ ಯಾವುದೇ ಇತರ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
ಅಥವಾ
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರು ಅಥವಾ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರು ಆಗಿರತಕ್ಕದ್ದು.
ನೇಮಕಾತಿ ವಿಧಾನ:
1. ಪೂರ್ವಭಾವಿ ಪರೀಕ್ಷೆ : ಇಲ್ಲಿ ವಾಣಿಜ್ಯ ಶಾಸ್ರ್ತಮತ್ತು ನಿರ್ವಹಣೆ ಹಾಗೂ ಸಾಮಾನ್ಯ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ 450 ಪ್ರಶ್ನೆಗಳಿಗೆ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪರೀಕ್ಷೆಯನ್ನು 4 ಗಂಟೆಯ ಅವಧಿಗೆ ನಡೆಸಲಾಗುತ್ತದೆ. ಇದರಲ್ಲಿ 1:20 ಅನುಪಾತದಂತೆ ಅರ್ಹ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.
2. ಮುಖ್ಯ ಪರೀಕ್ಷೆ : ಇದು ಲಿಖಿತ ಪರೀಕ್ಷೆಯನ್ನು ಒಳಗೊಂಡಿದ್ದು ಒಟ್ಟು 7 ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆ ೧ ಮತ್ತು ೨ ಮಾತ್ರ ೧೫೦ ಅಂಕಗಳಿಗೆ ಹಾಗೂ 3 ರಿಂದ 7 ಪತ್ರಿಕೆಯು 300 ಅಂಕಗಳಿಗೆ ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ: https://www.kpsc.kar.nic.in/