KSSIDC Recruitment 2022: ರಾಜ್ಯ ಸಣ್ಣ ಕೈಗಾರಿಕಾ ಬ್ಯಾಂಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ಗಳಲ್ಲಿ ಸಹಾಯಕ ಮ್ಯಾನೇಜರ್‌ಗಳ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್ ವತಿಯಿಂದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರಲ್ಲಿರುವ ಪ್ರಮುಖ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು (ಡಿ.17): ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ಗಳಲ್ಲಿ ಸಹಾಯಕ ಮ್ಯಾನೇಜರ್‌ಗಳ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್ ವತಿಯಿಂದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರಲ್ಲಿರುವ ಪ್ರಮುಖ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಹುದ್ದೆಗಳ ಮಾಹಿತಿ ಹೀಗಿದೆ: ಅಭ್ಯರ್ಥಿಯು ಎಲ್‌ಎಲ್‌ಬಿ, ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್/ಯಾವುದೇ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕಿದ್ದು,ಕನಿಷ್ಠ 21 ವರ್ಷ ಹಾಗೂ ಗರಿಷ್ಠ 28 ವರ್ಷದವರಾಗಿರಬೇಕು. ಒಬಿಸಿ ಅಭ್ಯರ್ಥಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗೆ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗೆ 10ರಿಂದ 15 ವರ್ಷಗಳ ರಿಯಾಯಿತಿ ನೀಡಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳು 1,100 ರುಪಾಯಿ ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಎಸ್‌ಸಿ/ಎಸ್ಟಿಅಭ್ಯರ್ಥಿಗಳು 175 ರುಪಾಯಿ ಪಾವತಿಸಬೇಕು. ಅಭ್ಯರ್ಥಿಯು ಅರ್ಜಿ ಜೊತೆಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಿದ್ದು, ಇದರ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಅರ್ಜಿದಾರನ ಆಯ್ಕೆಯು ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ನಡೆಯಲಿದೆ. ನೇಮಕವಾದ ಹೊಸ ಅಭ್ಯರ್ಥಿಗೆ ತಿಂಗಳಿಗೆ 28,150 ರು.ಇಂದ 70 ಸಾವಿರ ರುಪಾಯಿವರೆಗೆ ವೇತನ ನೀಡಲಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಹಾಗೂ ಶುಲ್ಕ ಪಾವತಿಗೆ 2023ರ ಜನವರಿ 3ರಂದು ಕೊನೆಯ ದಿನವನ್ನಾಗಿ ನಿಗದಿ ಮಾಡಲಾಗಿದೆ. ಸಂದರ್ಶನ ಹಾಗೂ ಆನ್‌ಲೈನ್ ಪರೀಕ್ಷೆಯ ಸಂಭಾವ್ಯ ದಿನವು ಫೆಬ್ರವರಿಯಲ್ಲಿ ಬರಲಿದೆ. ಹೆಚ್ಚಿನ ಮಾಹಿತಿಗಾಗಿ https://www.kssidc.co.in/RTIinfokan.html
WOMEN RIGHTS: ಸಮಾನ ಸಂಬಳಕ್ಕೆ ಮಹಿಳೆಯರ ಹೋರಾಟ ಹೀಗಿರಲಿ..
ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕ
ಖಾನಾಪುರ: ತಾಲೂಕಿನ ಘಷ್ಟೊಳ್ಳಿ ದಡ್ಡಿ ಗ್ರಾಮದ ಮಲ್ಲಸರ್ಜ ಮಾರಿಹಾಳ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಂಡಿದ್ದಾರೆ. ಡೆಹರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪೂರೈಸಿರುವ ಮಲ್ಲಸರ್ಜ ನವದೆಹಲಿಯ ಭಾರತೀಯ ಸೈನ್ಯದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಥ ಸಂಚಲನದಲ್ಲಿ ಭಾಗವಹಿಸಿ ಲೆಫ್ಟಿನೆಂಟ್ ಅಧಿಕಾರ ವಹಿಸಿಕೊಂಡಿದ್ದಾರೆ.
1 ಕೋಟಿಗೂ ಹೆಚ್ಚು ಪ್ಯಾಕೇಜ್ ಪಡೆದ ಪ್ರತಿಷ್ಠಿತ ಐಐಟಿ ಬಾಂಬೆ ವಿದ್ಯಾರ್ಥಿಗಳು
ಮಲ್ಲಸರ್ಜ ತಮ್ಮ ಅಜ್ಜಿಯ ಊರಾದ ಘಷ್ಟೊಳ್ಳಿ ದಡ್ಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಕಕ್ಕೇರಿಯ ಬಿಷ್ಠಾದೇವಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಟ್ಟಣದ ಕೆಎಲ್‌ಇ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯು ಶಿಕ್ಷಣ ಪೂರೈಸಿ 2013ರಲ್ಲಿ ಭಾರತೀಯ ಸೇನೆಯಲ್ಲಿ ತಮ್ಮ ಪ್ರಥಮ ಪ್ರಯತ್ನದಲ್ಲಿ ಶುಶ್ರೂತಾ ಚಿಕಿತ್ಸಕರಾಗಿ ನೇಮಕಗೊಂಡಿದ್ದರು. ಸೈನ್ಯದಲ್ಲಿದ್ದುಕೊಂಡೇ ಪದವಿ ವ್ಯಾಸಂಗದೊಂದಿಗೆ ಎಸಿಸಿ ಮತ್ತು ಎಸ್‌ಎಸ್‌ಬಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿದ್ದರು. ಲೆಫ್ಟಿನೆಂಟ್ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕದ 6 ಕೆಟೆಡ್‌ಗಳೊಂದಿಗೆ ಎದುರಿಸಿದ್ದ ಮಲ್ಲಸರ್ಜ ಅಂತಿಮ ಹಂತದಲ್ಲಿ ಹೆಚ್ಚಿನ ಅಂಕಗಳೊಂದಿಗೆ ಲೆಫ್ಟಿನೆಂಟ್ ಹುದ್ದೆಯನ್ನು ಅಲಂಕರಿಸಿದ್ದಾರೆ.