ಕೆಪಿಎಸ್‌ಸಿ ನಡೆಸಿದ ಕೆಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುದ್ರಿತ ಲಕೋಟೆ ತೆರೆದಿತ್ತು ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಮೇಲ್ವಿಚಾರಕರು ಪರೀಕ್ಷಾ ಕೊಠಡಿಗೆ ತರುವ ಮುನ್ನವೇ ಲಕೋಟೆ ತೆರೆದಿತ್ತು ಎನ್ನಲಾಗಿದೆ. ಮೈಸೂರು ರಸ್ತೆಯ ಬಿಬಿಎಂಪಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಅಭ್ಯರ್ಥಿಗಳು ಕೆಪಿಎಸ್‌ಸಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ. ಕೆಪಿಎಸ್‌ಸಿಯ ಪದೇ ಪದೇ ಎಡವಟ್ಟಿನಿಂದ ತಮ್ಮ ಭವಿಷ್ಯ ಹಾಳಾಗುತ್ತಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮೇ 05): ಕರ್ನಾಟಕ ಲೋಕಸೇವಾ ಆಯೋಗದಿಂದ (Karnataka Public Service Commission- KPSC) ವತಿಯಿಂದ ನಡೆಸಲಾದ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಳೆದ 2 ದಿನಗಳ ಹಿಂದೆಲೇ ಲೀಕ್ ಆಗಿದೆ ಎಂದು ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ. ಪರೀಕ್ಷಾ ಕೊಠಡಿಗೆ ಪ್ರಶ್ನೆ ಪತ್ರಿಕೆಯ ಬಂಡಲ್ ಅನ್ನು ತರುವ ಮುನ್ನವೇ ಅದನ್ನು ಓಪನ್ ಮಾಡಿಕೊಂಡು ಬಂದಿದ್ದು, ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, KAS ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್? ಆಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಇಂದು ನಡೆದ 2ನೇ ದಿನದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಂಡಲ್‌ನ ಸೀಲ್ ಮೊಲದೇ ಓಪನ್ ಆಗಿತ್ತು. ಇನ್ನು ಪರೀಕ್ಷಾ ಕೊಠಡಿಗೆ ಪ್ರಶ್ನೆ ಪತ್ರಿಕೆಯನ್ನು ತಂದಿರುವ ಮೇಲ್ವಿಚಾರಕರು ಪ್ರಶ್ನೆ ಪತ್ರಿಕೆ ಬಂಡಲ್ ಅನ್ನು ಮೊದಲೇ ಓಪನ್ ಮಾಡಿಕೊಂಡು ತಂದಿದ್ದಾರೆ. ಈ ಘಟನೆ ಮೈಸೂರು ರಸ್ತೆಯ ಬಿಬಿಎಂಪಿ ಪಿಯು ಕಾಲೇಜಿನಲ್ಲಿ ನಡೆದಿದೆ. ಈ ಬಗ್ಗೆ ಅಭ್ಯರ್ಥಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಮೂಲಕ ಪದೇ ಪದೇ ಕೆಪಿಎಸ್‌ಎಸ್‌ ಮಾಡುತ್ತಿರುವ ಎಡವಟ್ಟಿನಿಂದ ನಮ್ಮ ಜೀವನವೇ ಹಾಳಾಗುತ್ತಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎಎಸ್ ಪರೀಕ್ಷೆ ಮಾರ್ಚ್- ಏಪ್ರಿಲ್ ನಲ್ಲಿ ನಡೆಯಬೇಕಾಗಿತ್ತು. ಆದರೆ, ಮೇ 03 ರಂದು ಅರ್ಹತಾ ಪರೀಕ್ಷೆ ನಡೆದಿತ್ತು. ಇಂದು ದೀರ್ಘಾವಧಿ ಉತ್ತರವನ್ನು ಬಯಸಲುವ ಪ್ರಬಂಧಗಳ ಕುರಿತಾದ ಪರೀಕ್ಷೆ ನಡೆದಿತ್ತು. ಕೇವಲ ಎರಡು ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆ ಪತ್ರಿಕೆ ಇದಾಗಿದೆ. ಆದರೆ ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆಯ ಸೀಲ್ ಮೊದಲೇ ತೆಗೆಯುವಂತಿಲ್ಲ ಎಂಬ ನಿಯಮ ಇದೆ. ಪರೀಕ್ಷಾ ನಿಯಮಾವಳಿಗಳ ಪ್ರಕಾರ ಪ್ರಶ್ನೆ ಪತ್ರಿಕೆಗಳು ಎರಡು ಮತ್ತು ಮೂರು ಸೀಲ್ ಕವರ್ಗಳನ್ನು ಒಳಗೊಂಡಿರುತ್ತದೆ. ಆದರೆ ಇಂದು ನಡೆದ ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಬಂಧ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಇರುವ ಬಂಡಲ್ ಹೊರಗಡೆಯ ಕವರ್ ಮಾತ್ರ ಮುಚ್ಚಿಲಾಗಿತ್ತು ಎಂದು ತಿಳಿಸಿದರು.

ಇನ್ನು ಪ್ರಶ್ನೆ ಪತ್ರಿಕೆಯ ಬಂಡಲ್‌ನ ಒಳಗಡೆ ಇರುವ ಕವರ್ ಮೊದಲೇ ಹರಿದಿದ್ದರು ಎಂದು ಪರೀಕ್ಷಾ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ. ಈ ಘಟನೆ ಮೈಸೂರು ರಸ್ತೆ ಬಿಬಿಎಂಪಿ ಪಿಯು ಕಾಳೇಜಿನ ಕೊಠಡಿ ಸಂಖ್ಯೆ 04 ಮತ್ತು 6ರಲ್ಲಿ ನಡೆದಿದೆ. ಪರೀಕ್ಷಾ ಕೊಠಡಿಗೆ ತರುವ ಮುನ್ನವೇ ನೀವು ಹೇಗೆ ಪ್ರಶ್ನೆ ಪತ್ರಿಕೆ ಓಪನ್ ಮಾಡಿದ್ದೀರಿ? ಇದನ್ನು ಅಭ್ಯರ್ಥಿಗಳ ಸಹಿ ಪಡೆಯದೇ ತೆರೆಯಲು ಅವಕಾಶವೇ ಇಲ್ಲವಲ್ಲ? ಎಂದು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ಅಭ್ಯರ್ಥಿಗಳು ಪ್ರಾಥಮಿಕವಾಗಿ ದೂರು ನೀಡಿದ್ದಾರೆ. ಇದೀಗ ಕೆಪಿಎಸ್‌ಸಿಗೂ ಪತ್ರ ಬರೆದು, ತನಿಖೆ ನಡೆಸುವಂತೆ ಆಗ್ರಹ ಮಾಡಿದ್ದಾರೆ.