ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಸಂದರ್ಶನದ ಮೂಲಕ ನೇರ ನೇಮಕಾತಿ!

ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಏಪ್ರಿಲ್ 11 ರಂದು ಬೆಳಗ್ಗೆ 11 ಗಂಟೆಗೆ ಅರ್ಹ ಅಭ್ಯರ್ಥಿಗಳು ಹಾಜರಾಗಬಹುದು.

Karnataka Health Department direct recruitment by interview to fill vacant posts sat

ಬೆಂಗಳೂರು (ಏ.08): ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ನೇರ ಸಂದರ್ಶನದ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಏ.11ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ರಾಷ್ಟ್ರೀಯ ಆರೋಗ್ಯ ಆಭಿಯಾನದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸುತ್ತಿದೆ. ಹುದ್ದೆಗಳು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದಲ್ಲಿರುತ್ತದೆ. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ www.hfwcom.karnataka.gov.in ಮತ್ತು nhm.karnataka.gov.in ನಲ್ಲಿ ಲಾಗಿನ್ ಆಗಿ ಮಾಹಿತಿ ಪಡೆಯಬಹುದು. 

ನೇರ ಸಂದರ್ಶನದ ದಿನಾಂಕ 11.04.2025 ರಂದು ಬೆಳಿಗ್ಗೆ 11.00 ಗಂಟೆಗೆ ಮುಖ್ಯ ಆಡಳಿತಾಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಚೇರಿ 1ನೇ ಮಹಡಿ, ಪಶ್ಚಿಮ ವಿಭಾಗ, ಆರೋಗ್ಯ ಸೌಧ, ಮಾಗಡಿ ರಸ್ತೆ, 1ನೇ ಕ್ರಾಸ್, ಬೆಂಗಳೂರು - 560023 ಇಲ್ಲಿ ನಿಗದಿಪಡಿಸಲಾಗಿದೆ. ಆರೋಗ್ಯ ಇಲಾಖೆಯ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ವಿಭಾಗದಲ್ಲಿ ಖಾಲಿ ಇರುವ 5 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ. ಈ ಎಲ್ಲ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಯಾವುದೇ ಮೀಸಲಾತಿಯನ್ನು ನಿಗದಿಪಡಿಸಿಲ್ಲ. ಇನ್ನು ಸಂದರ್ಶನಕ್ಕೆ ನಿಗದಿತ ಸಮಯದ ನಂತರ ಬಂದ ಅಭ್ಯರ್ಥಿಗಳನ್ನು ಅನುಮತಿಸಲಾಗುವುದಿಲ್ಲ.

ಇದನ್ನೂ ಓದಿ: ಐಡಿಬಿಐ ಬ್ಯಾಂಕ್‌ ನಲ್ಲಿ ಖಾಲಿ ಇರುವ 119 ಕೇಡರ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 2ಲಕ್ಷದವರೆಗೆ ವೇತನ!

ನೇಮಕಾತಿ ಹುದ್ದೆಗಳ ವಿವರ

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ
(Digital and Social Media Manager)
01
ಮಾಧ್ಯಮ ಸಹಾಯಕ ವ್ಯವಸ್ಥಾಪಕ
(Media Assistant Manager)
01
ಕನ್ನಡ ಮತ್ತು ಇಂಗ್ಲಿಷ್ ವಿಷಯ ಬರಹಗಾರರು
(Content Writer Kannada & English)
01
ಗ್ರಾಫಿಕ್ ಡಿಸೈನರ್ ಕಮ್ ವಿಡಿಯೋ ಎಡಿಟರ್
(Graphic Designer cum Video Editor)
01
ಸ್ಟುಡಿಯೋ ಮ್ಯಾನೇಜರ್ ಮತ್ತು ಛಾಯಾಗ್ರಹಣ ಮತ್ತು ವಿಡಿಯೋಗ್ರಾಫರ್
(Studio Manager & Photo cum Videographer)
01

Karnataka Health Department direct recruitment by interview to fill vacant posts sat

Latest Videos
Follow Us:
Download App:
  • android
  • ios