Asianet Suvarna News Asianet Suvarna News

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ 320 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಫಾರ್ಮಸಿ ಆಫೀಸರ್​, ಕಿರಿಯ ಆರೋಗ್ಯ ಸಹಾಯಕ ಸೇರಿದಂತೆ ಒಟ್ಟು 320 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 28 ಸೆಪ್ಟೆಂಬರ್​ ಕೊನೆಯ ದಿನವಾಗಿದೆ.

karnataka health and family welfare department recruitment notification for various paramedical posts gow
Author
Bengaluru, First Published Aug 26, 2022, 6:52 PM IST

ಬೆಂಗಳೂರು (ಆ.26): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಫಾರ್ಮಸಿ ಆಫೀಸರ್​, ಕಿರಿಯ ಆರೋಗ್ಯ ಸಹಾಯಕ ಸೇರಿದಂತೆ ಒಟ್ಟು 320 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 28 ಸೆಪ್ಟೆಂಬರ್​ ಆಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ತಾಣ https://karunadu.karnataka.gov.in/ ಗೆ ಭೇಟಿ ನೀಡಿ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್​, ಬಳ್ಳಾರಿ ಮತ್ತು ವಿಜಯನಗರದಲ್ಲಿ ಖಾಲಿ ಇವರು ಅರೆ ವೈದ್ಯಕೀಯ ಮತ್ತು ಬ್ಯಾಕ್​ಲಾಗ್​ ಹುದ್ದೆಗಳು ಇದಾಗಿವೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ. 

ಒಟ್ಟು 320 ಹುದ್ದೆಗಳ ಮಾಹಿತಿ ಇಂತಿದೆ:
ಮನಶಾಸ್ತ್ರಜ್ಞ: 3 ಹುದ್ದೆಗಳು    
ಸೈಕಿಯಾಟ್ರಿಸ್ಟ್​ ಸೋಶಿಯಲ್​ ವರ್ಕ್​ : 1 ಹುದ್ದೆ    
ಮೈಕ್ರೋಬಾಯಾಲಾಜಿಸ್ಟ್​​: 6 ಹುದ್ದೆಗಳು    
ಕೀಟಶಾಸ್ತ್ರ ಸಹಾಯಕ:  1 ಹುದ್ದೆ 
ಪಿಜಿಯೋಥೆರಪಿಸ್ಟ್​: 5 ಹುದ್ದೆಗಳು    
ಡೆಂಟಲ್​ ಮೆಕಾನಿಕ್: 3 ಹುದ್ದೆಗಳು    
ಕಿರಿಯ ಲ್ಯಾಬ್​ ಟೆಕ್ನಿಶಿಯನ್​: 54 ಹುದ್ದೆಗಳು        
ನೇತ್ರಾಧಿಕಾರಿ: 15 ಹುದ್ದೆಗಳು        
ಫಾರ್ಮಸಿಸ್ಟ್​​:    98 ಹುದ್ದೆಗಳು        
ಇಸಿಜಿ ಟೆಕ್ನಿಷಿಯನ್​: 5 ಹುದ್ದೆಗಳು          
ಡಯಾಲಿಸಿಸ್​ ಟೆಕ್ನಿಷಿಯನ್​:    2 ಹುದ್ದೆಗಳು         
ಕಿರಿಯ ಆರೋಗ್ಯ ಸಹಾಯಕರು (ಮಹಿಳೆ): 126 ಹುದ್ದೆಗಳು         
ಎಲೆಕ್ಟ್ರಿಷಿಯನ್:​ 2 ಹುದ್ದೆಗಳು

ವೇತನ ವಿವರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಲು ಅಭ್ಯರ್ಥಿಗಳು ಮಾಸಿಕ  23,500 ರೂ. ನಿಂದ 83,900 ರೂ. 

ವಯೋಮಿತಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಲು ಅಭ್ಯರ್ಥಿಗಳು  18 ರಿಂದ 35 ವರ್ಷದ ಒಳಗಿರಬೇಕು. 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ತಿಂಗಳಲ್ಲಿ 15,000 ಶಿಕ್ಷಕರ ಆಯ್ಕೆ ಪಟ್ಟಿ: ಸಚಿವ ನಾಗೇಶ್‌

ಅರ್ಜಿ ಶುಲ್ಕ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಲು  ಸಾಮಾನ್ಯ ಅಭ್ಯರ್ಥಿಗಳು 700 ರೂ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು 400 ರೂ. ಮಾಜಿ ಸೈನಿಕ ಅಭ್ಯರ್ಥಿಗಳು 200 ರೂ ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಕೆಪಿಟಿಸಿಎಲ್‌ ಅಕ್ರಮ: ಬಂಧಿತರ ಸಂಖ್ಯೆ 13ಕ್ಕೇ ಏರಿಕೆ

ಆಯ್ಕೆ ಪ್ರಕ್ರಿಯೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Follow Us:
Download App:
  • android
  • ios