ಸಾರ್ವಜನಿಕ ವಲಯದ ನೌಕರರಿಗೆ ಮಹತ್ವದ ಸೂಚನೆ ಹೊರಡಿಸಿದ ರಾಜ್ಯ ಸರ್ಕಾರ

ಸಾರ್ವಜನಿಕ ವಲಯದ ನೌಕರರಿಗೆ ರಾಜ್ಯ ಸರ್ಕಾರ ಮಹತ್ವದ ಸೂಚನೆ ಹೊರಡಿಸಿ ಆದೇಶ ಹೊರಡಿಸಿದೆ.

Karnataka govt issues circular For Who Worked in Public Employee

ಬೆಂಗಳೂರು, (ಅ.05): ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ನೌಕರರು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಮುಷ್ಕರ, ಅಸಹಕಾರ, ಅವಿಧೇಯತೆ ಅಥವಾ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತ ಕೆಲಸಗಳನ್ನು ನಿರ್ವಹಿಸಲು ನಿರಾಕರಿಸುವಂತಿಲ್ಲ. ಮೇಲಧಿಕಾರಿಗಳ ಆದೇಶಗಳನ್ನು ಅನುಪಾಲನೆ ಮಾಡದಿರುವುದನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತಂತೆ ಇಂದು (ಸೋಮವಾರ) ಆದೇಶ ಹೊರಡಿಸಿರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್, ಸಾಮಾನ್ಯವಾಗಿ ಎಲ್ಲಾ ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಂದಿ (Public Servants) ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಖಾಯಂ, ಗುತ್ತಿಗೆ ಆಧಾರದ ಸಿಬ್ಬಂದಿ, ಹೊರಗುತ್ತಿಗೆ ಆಧಾರದ ಸಿಬ್ಬಂದಿ ಅಥವಾ ಸಾಮಾಜಿಕ ಆರೋಗ್ಯ ಕಾರ್ಯಕರ್ತರುಗಳಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ, ನಿರ್ಬಂಧಿಸುವ ಪ್ರಾಥಮಿಕ ಗುರಿಯನ್ನು ಸಾಧಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ, ನಾಯಕರಿಗೆ ಅಂಟಿಕೊಂಡ ಪಕ್ಷಾಂತರ ಗಾಳಿ; ಅ.5ರ ಟಾಪ್ 10 ಸುದ್ದಿ! 

ಇಂತಹ ನೌಕರರು ಮೇಲಧಿಕಾರಿಯಿಂದ ನೀಡಲಾದ ಜವಾಬ್ದಾರಿಯನ್ನು ನಿರ್ವಹಿಸದೇ, ನಿರಾಕರಿಸುವುದನ್ನು ನಿಬಂಧನೆಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ನಿರ್ದಿಷ್ಟ ಕಾಯ್ದೆಯಲ್ಲಿ ತಿಳಿಸಿರುವ ನಿಬಂಧನೆಗಳ ಅನ್ವಯ ದಂಡ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ( ಮುಷ್ಕರಗಳ ನಿಯಂತ್ರಣ) ಕಾಯ್ದೆ 1966 ( 1966ರ ಕರ್ನಾಟಕ ಕಾಯ್ದೆ ಸಂಖ್ಯೆ 30) ಯಾವುದು ಅನ್ವಯವಾಗುತ್ತೋ ಅದರಂತೆ ದಂಡ ನಿಬಂಧನೆಗಳನ್ನು ವಿಧಿಸಲಾಗುತ್ತದೆ.

ಪ್ರಸ್ತುತ, ಆದ್ದರಿಂದ ಭಾಗ 20ರಲ್ಲಿ ನೀಡಲಾದ ಅಧಿಕಾರಗಳ ಅನ್ವಯ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ, 2005 ( 2005ರ ಕೇಂದ್ರೀಯ ಕಾಯ್ದೆ ಸಂಖ್ಯೆ 53)ರ ನಿಬಂಧನೆಗಳ ಅಹ್ವಾನದಂತೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020( 2020ರ ಕರ್ನಾಟಕ ಸುಗ್ರೀವಾಜ್ಞೆ ಸಂಖ್ಯೆ 7)ರ ಓದಲಾದ ಭಾಗ 4, 5 ಹಾಗೂ 8ರ ಅನ್ವಯ, ರಾಜ್ಯ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರಾಗಿರುವ ನಾನು, ತಮ್ಮ ಸಾಮರ್ಥ್ಯದಲ್ಲಿ ಯಾವುದೇ ನೌಕರರು ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಿಂದಿ, ಆರೋಗ್ಯ ಸಿಬ್ಬಂದಿ, ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು, ಸಾರ್ವಜನಿಕ ಆರೋಗ್ಯದ ಹಿತದೃಷ್ಠಿಯಿಂದ ಈ ಮೂಲಕ ಮುಷ್ಕರಗಳು, ಅಸಹಕಾರ, ಅವಿಧೇಯತೆ ಅಥವಾ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತ ಕೆಲಸಗಳನ್ನು ನಿರ್ವಹಿಸಲು ನಿರಾಕರಿಸುವಂತಿಲ್ಲ. ವರದಿಗಳನ್ನು ಸಲ್ಲಿಸದಿರುವುದು, ಮೇಲಧಿಕಾರಿಗಳ ಆದೇಶಗಳನ್ನು ಅನುಪಾಲನೆ ಮಾಡದಿರುವುದನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶಿಸಿದ್ದಾರೆ. 

ಈ ಮೂಲಕ ರಾಜ್ಯದ ಯಾವುದೇ ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಂದಿಗಳು ಮುಷ್ಕರ ನಡೆಸದಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ.

Latest Videos
Follow Us:
Download App:
  • android
  • ios