4000 ಪೇದೆ, 592 PSI ಹುದ್ದೆ ನೇಮಕಾತಿಗೆ ಸರ್ಕಾರ ಗ್ರೀನ್‌ ಸಿಗ್ನಲ್

2020-21ನೇ ಸಾಲಿನ  4 ಸಾವಿರ ಪೇದೆ ಹಾಗೂ 592 PSI ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಈ ಮೂಲ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಕೊಟ್ಟಂತಾಗಿದೆ. 

Karnataka Govt green Signal To 4 thousand constable and 592 PSI Post

ಬೆಂಗಳೂರು, (ಫೆ.29): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್​ಇನ್​ಸ್ಪೆಕ್ಟರ್ ಮತ್ತು ಪೇದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. 

1279 ದ್ವಿತೀಯ ದರ್ಜೆ ಹುದ್ದೆ ಭರ್ತಿಗೆ KPSC ಅಧಿಸೂಚನೆ ಪ್ರಕಟ 

ಈ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ 592 ಪಿಎಸ್​ಐ/ಆರ್​ಎಸ್​ಐ ಮತ್ತು 4 ಸಾವಿರ ಸಿವಿಲ್/ಡಿಎಆರ್/ಕೆಎಸ್​ಆರ್​ಪಿ ಪೇದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

* ಬೆಂಗಳೂರು ನಗರಕ್ಕೆ 74 ಪಿಎಸ್​ಐ, 1 ಆರ್​ಎಸ್​ಐ, 
* ಮೈಸೂರು ನಗರಕ್ಕೆ 3 ಆರ್​ಎಸ್​ಐ, 
* ಹುಬ್ಬಳ್ಳಿ-ಧಾರವಾಡ ನಗರಕ್ಕೆ 2 ಆರ್​ಎಸ್​ಐ, 
* ಬೆಳಗಾವಿ ನಗರಕ್ಕೆ 19 ಪಿಎಸ್​ಐ, 3 ಆರ್​ಎಸ್​ಐ, 
* ಕೇಂದ್ರ ವಲಯ (ಬೆಂಗಳೂರು) 92 ಪಿಎಸ್​ಐ, 2 ಆರ್​ಎಸ್​ಐ
* ಪೂರ್ವವಲಯ (ದಾವಣಗೆರೆ) 40 ಪಿಎಸ್​ಐ, 10 ಆರ್​ಎಸ್​ಐ, 
* ಪಶ್ವಿಮ ವಲಯ 39 ಪಿಎಸ್​ಐ, 2 ಆರ್​ಎಸ್​ಐ, 
* ಉತ್ತರ ವಲಯ 74 ಪಿಎಸ್​ಐ, 10 ಆರ್​ಎಸ್​ಐ, 
* ದಕ್ಷಿಣ ವಲಯ 93 ಪಿಎಸ್​ಐ, 7 ಆರ್​ಎಸ್​ಐ, 
* ಕೆಎಸ್​ಐಎಸ್​ಎಫ್ 51 ಪಿಎಸ್​ಐ, ಸಿಐಡಿಗೆ 4 ಡಿಎಸ್​ಐ, 
* ನಿಸ್ತಂತು 26 ಪಿಎಸ್​ಐ, 
* ಕೆಎಸ್​ಆರ್​ಪಿಗೆ 40 ಆರ್​ಎಸ್​ಐಗಳ ನೇಮಕಾತಿ ನಡೆಯಲಿದೆ. 

ಅದೇ ರೀತಿ 2 ಸಾವಿರ ಸಿವಿಲ್ ಪೇದೆಗಳು, 1 ಸಾವಿರ ಎಪಿಸಿ ಮತ್ತು ಕೆಎಸ್​ಆರ್​ಪಿಗೆ 1 ಸಾವಿರ ಆರ್​ಪಿಸಿ ಹುದ್ದೆಗಳಿಗೆ 2020-21ರಲ್ಲಿ ಹಂತ ಹಂತವಾಗಿ ನೇಮಕಾತಿ ನಡೆಯಲಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Latest Videos
Follow Us:
Download App:
  • android
  • ios