Asianet Suvarna News Asianet Suvarna News

ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ನೀಡಿದ ಬಿಎಸ್‌ವೈ

* ಬಿಎಸ್​ ಯಡಿಯೂರಪ್ಪ ಪದತ್ಯಾಗಕ್ಕೂ ಮುನ್ನ ಸರ್ಕಾರಿ ನೌಕರರಿಗೆ ಬಂಪರ್​ ಉಡುಗೊರೆ
* ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯ ಆದೇಶ ಹೊರಡಿಸಿ ಪಟ್ಟದಿಂದ ಕೆಳಗಿಳಿದ ಬಿಎಸ್‌ವೈ
* ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ 

Karnataka Government Hikes State Govt Employees Dearness Allowance rbj
Author
Bengaluru, First Published Jul 26, 2021, 6:09 PM IST
  • Facebook
  • Twitter
  • Whatsapp

ಬೆಂಗಳೂರು, (ಜು.26):  ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.

ಹೌದು...ಮಹತ್ವದ ಬೆಳವಣಿಗೆಯಲ್ಲಿ ಇಂದು (ಸೋಮವಾರ) ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ) ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ.

ನಾಯಕತ್ವ ಬದಲಾವಣೆ ಸುದ್ದಿ ಮಧ್ಯೆ ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ನೀಡಿದ ಸಿಎಂ

ಈ ಹಿಂದೆ ಇದ್ದ ಶೇ 11.15 ತುಟ್ಟಿಭತ್ಯೆಯನ್ನು 21.50ಕ್ಕೆ  ಹೆಚ್ಚಿಸಿ ರಾಜ್ಯ ಸರ್ಕಾರ ಇಂದು (ಜು.26) ಆದೇಶ ಹೊರಡಿಸಿದ್ದು, ಜು. 1ರಿಂದಲೇ ಪರಿಷ್ಕೃತ ತುಟ್ಟಿಭತ್ಯೆ ದರಗಳು ಅನ್ವಯವಾಗಲಿವೆ. 

ನಾಯಕತ್ವ ಬದಲವಾಣೆ ಚರ್ಚೆ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜುಲೈ 20ರಂದು  ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಅದರಂತೆ ಇದೀಗ ತಾವು ಪದತ್ಯಾಗ ಮಾಡುವ ಮುನ್ನ ಈ ಆದೇಶಕ್ಕೆ ಸಹಿ ಹಾಕಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರವೂ ಕೂಡ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ನೀಡಿತ್ತು. ಅದರ ಬೆನ್ನಲ್ಲೇ ಈಗ ರಾಜ್ಯ ಸರ್ಕಾರದಲ್ಲೂ ತುಟ್ಟಿ ಭತ್ಯ ಹೆಚ್ಚಳವಾಗಿದೆ.

Follow Us:
Download App:
  • android
  • ios