ನಿಮ್ಹಾನ್ಸ್ನಲ್ಲಿ ಸೋಷಿಯಲ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್ ಸೋಷಿಯಲ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ
ಬೆಂಗಳೂರು, (ಆ.02): ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ ಸೋಷಿಯಲ್ ಸೈಂಟಿಸ್ಟ್ ಹುದ್ದೆ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾಜಿಕ ಕಾರ್ಯ ವಿಷಯದಲ್ಲಿ ಎಂಎಸ್ಡಬ್ಲು ಮತ್ತು ಎಂಫಿಲ್ ಆಗಿರಬೇಕು ಅಥವಾ ಕ್ಲಿನಿಕಲ್ ಸೈಕಾಲಜಿ ವಿಷಯದಲ್ಲಿ ಎಂಎ ಮತ್ತು ಎಂಫಿಲ್ ಆಗಿರಬೇಕು.
ವಿವಿಧ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ
ವಯೋಮಿತಿ: ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ.
ವೇತನ ಶ್ರೇಣಿ: ಮಾಸಿಕವಾಗಿ 40 ಸಾವಿರ ರೂ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್/ ಸಿವಿ ಮತ್ತು ಅಭ್ಯರ್ಥಿ ಈ ಹುದ್ದೆಗೆ ಹೊಂದಿರುವ ಅರ್ಹತೆ ಕುರಿತು ವಿವರಿಸುವ ಕವರಿಂಗ್ ಲೆಟರ್ ಬರೆದು virologynimhans@gmail.com ಈ ವಿಳಾಸಕ್ಕೆ ಆಗಸ್ಟ್ 14 ರೊಳಗಾಗಿ ಕಳುಹಿಸಬೇಕು.
ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು https://nimhans.ac.in ಸಂಪರ್ಕಿಸಬಹುದು.