ಕೆಎಎಸ್‌ ಎಡವಟ್ಟು: ಮರುಪರೀಕ್ಷೆ ಅಭ್ಯರ್ಥಿಗಳಿಗೆ ಕೃಪಾಂಕ?

ಕೆಲವು ಪ್ರಶೋತ್ತರಗಳನ್ನು ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಅನಗತ್ಯವಾಗಿ ಸಂಕೀರ್ಣಗೊ ಳಿಸಲಾಗಿದೆ. ಇದರಿಂದ ಕನ್ನಡ ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿಯೂ ಪ್ರಶ್ನೆ ಓದಿಕೊಳ್ಳುವುದು ಅನಿವಾರ್ಯ. ಎರಡು ಬಾರಿ ಪ್ರಶ್ನೆ ಓದುವುದರಿಂದ ಸಮಯ ವ್ಯರ್ಥವಾಗುವ ಜೊತೆಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಆಗುವುದಿಲ್ಲ. ಇದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಗದೆ ಅನ್ಯಾಯವಾಗುತ್ತದೆ. ಇಂಗ್ಲಿಷ್ ಮಾಧ್ಯಮದವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ. 

Grace Marks to KAS Re Exam Candidates in Karnataka grg

ಬೆಂಗಳೂರು(ಜ.01): ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ ಅನೇಕ ಲೋಪ ದೋಷಗಳ ಜೊತೆಗೆ ಪ್ರಶ್ನೆಗಳನ್ನು ಸೃಷ್ಟಿ ಮಾಡುವಲ್ಲಿಯೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಎಡವಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರ ಬೇಜವಾಬ್ದಾರಿತನಕ್ಕೆ ಅನೇಕ ಪ್ರಶ್ನೆಗಳಿಗೆ ಕೃಪಾಂಕಗಳನ್ನು ನೀಡಲೇಬೇಕಾದ ಅನಿವಾರ್ಯತೆಗೆ ಕೆಪಿಎಸ್‌ಸಿ ಸಿಲುಕಿದೆ. 

ಕೆಲವು ಪ್ರಶೋತ್ತರಗಳನ್ನು ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಅನಗತ್ಯವಾಗಿ ಸಂಕೀರ್ಣಗೊ ಳಿಸಲಾಗಿದೆ. ಇದರಿಂದ ಕನ್ನಡ ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿಯೂ ಪ್ರಶ್ನೆ ಓದಿಕೊಳ್ಳುವುದು ಅನಿವಾರ್ಯ. ಎರಡು ಬಾರಿ ಪ್ರಶ್ನೆ ಓದುವುದರಿಂದ ಸಮಯ ವ್ಯರ್ಥವಾಗುವ ಜೊತೆಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಆಗುವುದಿಲ್ಲ. ಇದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಗದೆ ಅನ್ಯಾಯವಾಗುತ್ತದೆ. ಇಂಗ್ಲಿಷ್ ಮಾಧ್ಯಮದವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ. 

ಕೆಪಿಎಸ್‌ಸಿ: 50 ತಪ್ಪಾಗಿದ್ದರೂ ಆರೇ ತಪ್ಪಾಗಿವೆ ಎಂದು ಹೇಳಲು ಅಧಿಕಾರಿಗಳ ಯತ್ನ, ಹಿಗ್ಗಾಮುಗ್ಗಾ ಜಾಡಿಸಿದ ಸಿದ್ದು..!

ಪ್ರಶ್ನೆಗಳಲ್ಲಿ ಲೋಪ: 

ಪ್ರಶ್ನೆ ಪತ್ರಿಕೆಯಲ್ಲಿ ಈ ನಾಲ್ಕರಲ್ಲಿ 'ಯಾವ ಹೇಳಿಕೆ ಸರಿ ಇಲ್ಲ' ಎಂಬ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಉದಾಹರಣೆಗೆ ಎ. ರಾಜ್ಯೋತ್ಸವ ಪ್ರಶಸ್ತಿಗಳು ಕರ್ನಾಟಕ ಸರ್ಕಾರದ ಅತಿ ಉನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ನವೆಂಬರ್‌ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರದಾನ ಮಾಡುವುದು. ಬಿ. ಪ್ರಶಸ್ತಿಯು 1 ಲಕ್ಷನಗದು, 20 ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ಸಿ. ಸಾಧಕರನ್ನು ಗುರುತಿಸಲು ಐವರು ಸದಸ್ಯರ ಸಮಿತಿ ರಚಿಸಲಾಗುತ್ತದೆ.

ಈ ವರ್ಷ 69 ಜನರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಈ ನಾಲ್ಕರಲ್ಲಿ ಮೂರು ಹೇಳಿಕೆಗಳು ತಪ್ಪಾಗಿದ್ದು, ಒಂದು ಮಾತ್ರ ಸರಿ ಇದೆ. ಇದಕ್ಕೆ ಸರಿ ಉತ್ತರ ನೀಡಲು ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು, ಅದರಲ್ಲಿ ಸರಿ ಉತ್ತರ 'ಎ, ಬಿ ಮತ್ತು ಸಿ' ಆಯ್ಕೆಯನ್ನೇ ಮತ್ತೊಂದು ಪ್ರಶ್ನೆಯಲ್ಲಿ ಯಾವ ಭಾರತೀಯ ನಗರಗಳು ಯುನೆಸ್ಕೋದ ಸೃಜನಾತ್ಮಕ ನಗರಗಳ ನೆಟ್‌ವರ್ಕ್‌ನಲ್ಲಿ ಸೇರಿವೆ? ಆಯ್ಕೆಗಳು: . ಗ್ವಾಲಿರ್ಯ-ಸಂಗೀತ, ಬಿ. ಕೊಜಿಕೋಡ್ -ಸಾಹಿತ್ಯ, ಸಿ. ಚೆನ್ನೈ-ಸಂಗೀತ, ಡಿ. ವಾರಣಾಸಿ-ಸಾಹಿತ್ಯ. ಈ ನಾಲ್ಕರಲ್ಲಿ ಮೂರು ಆಯ್ಕೆಗಳು ಸರಿಯಿವೆ. 'ಸಿ' ಆಯ್ಕೆ ಮಾತ್ರ ಮಾತ್ರ ತಪ್ಪಿದೆ. ಈ ಪ್ರಶ್ನೆಗೆಸರಿ ಉತ್ತರ ನೀಡಲು ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು, ಅದರಲ್ಲಿ ಸರಿ ಉತ್ತರ ಆಗುವ 'ಎ, ಬಿ ಮತ್ತು ಡಿ' ಎನ್ನುವ ಆಯ್ಕೆಯನ್ನೇ ನೀಡಿಲ್ಲ. ಹೀಗೆ, ಪ್ರಶ್ನೆ ಪತ್ರಿಕೆ ಸೆಟ್‌ಮಾಡುವಲ್ಲಿ ಅನೇಕಕಡೆಗಳಲ್ಲಿ ಕೆಪಿಎಸ್‌ಸಿ ನಿರ್ಲಕ್ಷ್ಯತನ ತೋರಿದೆ.

KPSC ಮರು ಪರೀಕ್ಷೆಯಲ್ಲೂ ಮುಗ್ಗರಿಸಿದ ಎಡವಟ್ಟು ಸರ್ಕಾರ; ಆಕಾಂಕ್ಷಿಗಳ ಭವಿಷ್ಯ ಡೋಲಾಯಮಾನ!

ಪ್ರಶ್ನೆಗಳನ್ನು ಹೈಲೈಟ್ ಮಾಡಿಲ್ಲ!:

ಅಭ್ಯರ್ಥಿಗಳು ಪ್ರಶ್ನೆಯನ್ನು ಅರಿತುಕೊಳ್ಳುವ ಮಾನಸಿಕ ಸಾಮರ್ಥ್ಯವನ್ನು ಅಳೆಯಲು 'ಸರಿಯಿದೆ', 'ಸರಿಯಿಲ್ಲ', 'ತಪ್ಪು' ಮತ್ತು 'ಸರಿ' ಎಂಬ ಪ್ರಶ್ನೆಗಳನ್ನು ಕೇಳಿ ಬಹು ಆಯ್ಕೆಗಳನ್ನು ನೀಡಲಾಗಿದೆ.  ಇಂತಹ ಪ್ರಶ್ನೆಗಳಲ್ಲಿ ಸರಿಯಿದೆ', 'ಸರಿಯಿಲ್ಲ', 'ತಪ್ಪು' ಮತ್ತು 'ಸರಿ' ಎಂಬುದನ್ನು ದಪ್ಪ ಅಕ್ಷರದಲ್ಲಿ ಮುದ್ರಿಸಬೇಕು (ಬೋಲ್ಡ್ ಲೆರ್ಟ) ಎಂದು ಕೆಲವು ಪ್ರಕರಣಗಳಲ್ಲಿ ದೇಶದ ಬೇರೆ ಬೇರೆ ನ್ಯಾಯಾಲಯಗಳು ಆದೇಶ ನೀಡಿವೆ. ಆದರೆ, ಈ ಪತ್ರಿಕೆಗಳಲ್ಲಿ ಕೆಲವು ಪ್ರಶ್ನೆಗಳನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸಿದ್ದರೆ, ಮತ್ತೆ ಕೆಲವು ಕಡೆ ಹಾಗೆಯೇ ಬಿಡುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಲಾಗಿದೆ. ಕೆಪಿಎಸ್‌ಸಿಯ ಈ ಬೇಜವಾಬ್ದಾರಿಗೆ ಅಭ್ಯರ್ಥಿಗಳು, ಬೋಧಕ ವರ್ಗದವರು ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ಬಗ್ಗೆ ಕೆಪಿಎಸ್ಸಿ ಸದಸ್ಯರೇ ಆಕ್ರೋಶ 

ಬೆಂಗಳೂರು: ಪ್ರಶ್ನೆಪತ್ರಿಕೆಗಳಲ್ಲಿ ಪದೇ ಪದೆ ತಪ್ಪುಗಳುಮರಕುಳಿಸುತ್ತಿರುವುದರಿಂದ ಕೆಪಿಎಸ್‌ ಸಿಗೆ ಕೆಟ್ಟ ಹೆಸರು ಬರುತ್ತಿದೆ. ಈ ರೀತಿ ತಪ್ಪುಗಳಾದರೆ ಅಭ್ಯರ್ಥಿಗಳಿಗೆ, ಸರ್ಕಾರಕ್ಕೆ, ಜನರಿಗೆ ನಾವು ಏನೆಂದು ಉತ್ತರಿಸಬೇಕು? ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರು, ಪರೀಕ್ಷಾ ನಿಯಂತ್ರಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios