ಕೆಪಿಎಸ್‌ಸಿ ನೇಮಕಾತಿ: ಮುಖ್ಯ ಪರೀಕ್ಷೆಯ ಅಂಕಗಳಲ್ಲಿ ಇಳಿಕೆ
ಗೆಜೆಟೆಡ್ ಪ್ರೊಬರಷನರಿ ಹುದ್ದೆಗಳಿಗೆ (ಗ್ರೂಪ್ ಎ.ಬಿ) ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್) ನಡೆಸುವ ಮುಖ್ಯ ಪರೀಕ್ಷೆಯ ಇಟ್ಟು ಅಂಕಗಳಲ್ಲಿ ಕೊಂಚ ಇಳಿಕೆ ಮಾಡಿದೆ.
ಬೆಂಗಳೂರು, (ಜೂನ್. 07) : ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆಸುವ ಮುಖ್ಯ ಪರೀಕ್ಷೆ ಅಂಕವನ್ನು ಇಳಿಕೆ ಮಾಡಲಾಗಿದೆ.
ಗೆಜೆಟೆಡ್ ಪ್ರೊಬೇಷನರಿ (ಗ್ರೂಪ್ 'ಎ' ಮತ್ತು 'ಬಿ') ಹುದ್ದೆಗಳ ನೇಮಕಾತಿಯನ್ನು ನಡೆಸುತ್ತಿದೆ. ಈ ನೇಮಕಾತಿಯ ಮುಖ್ಯ ಪರೀಕ್ಷೆಯ ಒಟ್ಟು ಅಂಕ 1,250ಕ್ಕೆ ಇಳಿಕೆ ಮಾಡಿ ಕೆಪಿಎಸ್‌ಸಿ ಆದೇಶ ಹೊರಡಿಸಿದೆ.
ವಿವಿಧ ಹುದ್ದೆಗೆ ಅರ್ಜಿ ಹಾಕಿದವರಿಗೆ ಕೆಪಿಎಸ್‌ಸಿಯಿಂದ ಮಹತ್ವದ ಅಧಿಸೂಚನೆ..!
200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ನಡೆಯುತ್ತಿತ್ತು. ಇದನ್ನು 50ಕ್ಕೆ ಇಳಿಕೆ ಮಾಡಲಾಗಿದೆ. ಸಂದರ್ಶನದಲ್ಲಿ ಅಭ್ಯರ್ಥಿಗಳಿಸಿದ ಅಂಕ ಶೇ 80 ದಾಟಿದರೆ ಅಥವ ಶೇ 40ಕ್ಕಿಂತ ಕಡಿಮೆಯಾದರೆ ಸಂದರ್ಶನ ಮಂಡಳಿ ಸದಸ್ಯರು ಕಾರಣ ದಾಖಲಿಸಬೇಕಾಗುತ್ತದೆ.
ಇದುವರೆಗೆ 2 ಐಚ್ಛಿಕ ವಿಷಯಗಳು ಸೇರಿದಂತೆ 7 ವಿಷಯಗಳಲ್ಲಿ ಮುಖ್ಯ ಪರೀಕ್ಷೆ ನಡೆಯುತ್ತಿತ್ತು. ಇನ್ನು ಕೇವಲ 5 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಐಚ್ಛಿಕ ವಿಷಯಗಳ 250 ಅಂಕಗಳ ಎರಡು ಪತ್ರಿಕೆಗಳನ್ನು ಕೈಬಿಡಲಾಗುತ್ತಿದೆ.
ಒಟ್ಟು 1,750 ಅಂಕಗಳಿಗೆ ನಡೆಯುತ್ತಿದ್ದ ಮುಖ್ಯ ಪರೀಕ್ಷೆ 500 ಅಂಕಗಳು ಕಡಿತಗೊಳ್ಳಲಿದ್ದು, ಈಗ ಒಟ್ಟು ಅಂಕ 1,250 ಆಗಿರಲಿದೆ. ಈ ಬಗ್ಗೆ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್‌ಸಿ ವೆಬ್ ಸೈಟ್ ನೋಡಬಹುದಾಗಿದೆ.