ಸಶಸ್ತ್ರ ಮೀಸಲು ಪೊಲೀಸ್ ಪರೀಕ್ಷೆಯಲ್ಲೂ ಅಕ್ರಮ? ಪರೀಕ್ಷೆ ಬರೆದು 1 ಗಂಟೆ ತಡವಾಗಿ ಹೊರಬಂದ ಅಭ್ಯರ್ಥಿಗಳು!
ರಾಜ್ಯಾದ್ಯಂತ ಭಾನುವಾರ ನಡೆದ ಸಶಸ್ತ್ರ ಮೀಸಲು ಪಡೆಯ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೋಣೆಯಿಂದ 1 ಗಂಟೆ ತಡವಾಗಿ ಹೊರಗೆ ಬಂದಿದ್ದಾರೆ.
ಬೆಂಗಳೂರು (ಜ.28): ರಾಜ್ಯಾದ್ಯಂತ ಭಾನುವಾರ ನಡೆದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪರೀಕ್ಷೆಯಲ್ಲಿಯೂ ಭಾರಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು 12.30ಕ್ಕೆ ಪರೀಕ್ಷೆ ಮುಗಿದರೂ ಒಂದು ಗಂಟೆ ತಡವಾಗಿ ಹೊರಗೆ ಬಂದಿದ್ದಾರೆ. ಜೊತೆಗೆ, ಅವರ ಹಾಲ್‌ಟಿಕೆಟ್ ಹಾಗೂ ಒಎಂಆರ್‌ನಲ್ಲಿ ನಮೂದಿಸಿದ ನೋಂದಣಿ ಸಂಖ್ಯೆಯೂ ಕೂಡ ಬದಲಾಗಿದ್ದು, ಅಕ್ರಮ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ನಡೆದ ರಾಜ್ಯ ಸಶಸ್ತ್ರ ಮೀಸಲು ಕಾನ್ಸ್ ಟೇಬಲ್ ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲದಿಂದ ಅಭ್ಯರ್ಥಿಗಳು ಆತಂಕಕ್ಕೆ ಈಡಾಗಿದ್ದಾರೆ. ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪರೀಕ್ಷೆಯು 12.30ಕ್ಕೆ ಮುಗಿದ ತಕ್ಷಣ ಅಭ್ಯರ್ಥಿಗಳು ಹೊರಬರಬೇಕಿತ್ತು. ಆದರೆ, ಈ ಕೇಂದ್ರದಲ್ಲಿ 1.20ರವರೆಗೆ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಲ್ಲೇ ಇದ್ದರು. ಆದರೆ, ಇಲ್ಲಿಯೂ ಕೂಡ ಪರೀಕ್ಷೆಯನ್ನು ಬರೆದು ಹೊರಗೆ ಬಂದ ಅಭ್ಯರ್ಥಿಗಳ ಓಎಂಆರ್ ಶೀಟ್ ಅದಲು ಬದಲು ಆಗಿದೆ. ಇನ್ನು ಹಾಲ್ ಟಿಕೆಟ್ ನಂಬರ್ ಮತ್ತು ಓಎಂಆರ್ ಶೀಟ್ ನಂಬರ್ ಅದಲು ಬದಲಾಗಿರುವುದು ಕಂಡುಬಂದಿದೆ. ಹೀಗಾಗಿ, ಪರೀಕ್ಷೆಯನ್ನು ಬರೆದು ನಾವು ಪೊಲೀಸ್ ಆಗುತ್ತೇವೆ ಎಂದು ಕನಸು ಕಟ್ಟಿಕೊಂಡ ನೂರಾರು ಅಭ್ಯರ್ಥಿಗಳಲ್ಲಿ ಆತಂಕ ಎದುರಾಗಿದೆ.
ಅಗ್ನಿವೀರ ನೇಮಕಕ್ಕೆ ಆನ್‌ಲೈನ್ ಪರೀಕ್ಷೆ, ಫೆಬ್ರವರಿ 6ರೊಳಗೆ ಅರ್ಜಿ ಸಲ್ಲಿಸಲು ಸೂಚನೆ
ಪರೀಕ್ಷಾ ಕೇಂದ್ರದಲ್ಲಿ ನಡೆದ ಗೊಂದಲದಿಂದಾಗಿ ಪರೀಕ್ಷಾ ಕೇಂದ್ರಕ್ಕೆ ನೇಮಕಾತಿ ವಿಭಾಗ ಡಿಐಜಿ ಮಾರ್ಟಿನ್,ಡಿಜೆ ಕಮಲ್ ಪಂತ್ ಆಗಮಿಸಿದ್ದಾರೆ. ಅಭ್ಯರ್ಥಿಗಳಲ್ಲಿದ್ದ ಗೊಂದಲ ನಿವಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದ ಕಮಲ್ ಪಂತ್ ಹೇಳಿದ್ದಾರೆ. ಅಭ್ಯರ್ಥಿಗಳಲ್ಲಿ ಗೊಂದಲ ಆಗಿದ್ದು ನಿಜ, ಓಎಂಆರ್ ರೋಲ್ ನಂಬರ್ ಹಾಗೂ ಹಾಲ್ ಟಿಕೆಟ್ ರೋಲ್ ನಂಬರ್‌ಗೆ ಸಂಬಂಧ ಇಲ್ಲ. ಓಎಂಆರ್ ನಲ್ಲಿ ಮಾರ್ಕ್ ಮಾಡಲಾದ ನಂಬರ್ ಗಳನ್ನು ಮಾತ್ರ ರೀಡ್ ಮಾಡಲಾಗುತ್ತೆ ಎಂದು ಭರವಸೆ ನೀಡಿದ್ದಾರೆ.