SDA ನೇಮಕಾತಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ: ಚಿಂತೆ ಬಿಟ್ಟು ಅರ್ಜಿ ಹಾಕಿ
ಎಸ್‌ಡಿಎ ನೇಮಕಾತಿಗೆ ಅರ್ಜಿ ಹಾಕಿಲ್ಲ ಎಂದು ಚಿಂತೆ ಮಾಡ್ಬೇಡಿ. ಅರ್ಜಿ ಸಲ್ಲಿಕೆ ಅಂತಿಮ ದಿನಾಂಕವನ್ನು ಕರ್ನಾಟಕ ಲೋಕಸೇವಾ ಆಯೋಗ ವಿಸ್ತರಿಸಿದೆ.
ಬೆಂಗಳೂರು, (ಏ.06): ದ್ವಿತಿಯ ದರ್ಜೆ ಸಹಾಯಕ ಹುದ್ದೆಗಳ (ಎಸ್‌ಡಿಎ) ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಕರ್ನಾಟಕ ಲೋಕಸೇವಾ ಆಯೋಗ ಏ.30ರವರೆಗೂ ವಿಸ್ತರಿಸಿದೆ.
ಫೆ.29ರಂದು ಉಳಿಕೆ ಮೂಲ ವೃಂದ ಹಾಗೂ ಹೈದರಾಬಾದ್ ಕರ್ನಾಟಕ ಮೀಸಲು ಸೇರಿ ಸೇರಿ ಒಟ್ಟು 1,279 ಎಸ್‌ಡಿಎ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು.
1279 ದ್ವಿತೀಯ ದರ್ಜೆ ಹುದ್ದೆ ಭರ್ತಿಗೆ KPSC ಅಧಿಸೂಚನೆ ಪ್ರಕಟ
ಮಾರ್ಚ್ 9ರಿಂದ ಏಪ್ರಿಲ್ 9ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಹಾಗೂ ಶುಲ್ಕ ಪಾವತಿಗೆ ಏ.13ರವರೆಗೆ ಅವಕಾಶ ನೀಡಿತ್ತು. ಆದರೆ ಕೊರೋನಾ ವೈರಸ್ ನ ಹಾವಳಿಯಿಂದಾಗಿ ಸದ್ಯ ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ ಕೆಪಿಎಸ್‌ಸಿ ಮುಂದಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತಷ್ಟು ದಿನಗಳ ವರೆಗೆ ವಿಸ್ತರಿಸಿದೆ.
ದ್ವಿತಿಯ ದರ್ಜೆ ಸಹಾಯಕ ಹುದ್ದೆಗಳ (ಎಸ್‌ಡಿಎ) ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಏ.30ರವರೆಗೂ ವಿಸ್ತರಿಸಿ, ಶುಲ್ಕ ಪಾವತಿಸಲು ಮೇ 2ರವರೆಗೆ ಅವಕಾಶ ಕಲ್ಪಿಸಿದೆ.
ಹೆಚ್ಚಿನ ಮಾಹಿತಿಗಾಗಿ http://kpsc.kar.nic.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.