ಪಿಂಚಣಿ ನೀಡದೇ ಇರುವುದನ್ನು ಖಂಡಿಸಿ ನಿವೃತ್ತ ಗುತ್ತಿಗೆ ಪೌರ ಕಾರ್ಮಿಕರು ಬುಧವಾರ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಹೊಟ್ಟೆಮೇಲೆ ತಣ್ಣೀರು ಬಟ್ಟೆಹಾಕಿಕೊಂಡು ಹುಲ್ಲು ತಿನ್ನುತ್ತಾ ಪ್ರತಿಭಟನೆ ನಡೆಸಿದರು.

ಬೆಂಗಳೂರು (ಆ.10) :  ಪಿಂಚಣಿ ನೀಡದೇ ಇರುವುದನ್ನು ಖಂಡಿಸಿ ನಿವೃತ್ತ ಗುತ್ತಿಗೆ ಪೌರ ಕಾರ್ಮಿಕರು ಬುಧವಾರ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಹೊಟ್ಟೆಮೇಲೆ ತಣ್ಣೀರು ಬಟ್ಟೆಹಾಕಿಕೊಂಡು ಹುಲ್ಲು ತಿನ್ನುತ್ತಾ ಪ್ರತಿಭಟನೆ ನಡೆಸಿದರು.

ಪಿಂಚಣಿ ನೀಡಲು ಪಾಲಿಕೆ ಹಾಗೂ ನಿವೃತ್ತ ನೌಕರರ ಹೆಸರಿನಲ್ಲಿ .10 ಲಕ್ಷ ಠೇವಣಿ ಇಟ್ಟು ಬರುವ ಬಡ್ಡಿ ಹಣವನ್ನು ನೌಕರರಿಗೆ ನೀಡಬೇಕು, ಪಿಂಚಣಿದಾರರು ಮೃತಪಟ್ಟನಂತರ ಆ ಹಣ ಬಿಬಿಎಂಪಿಗೆ ವಾಪಸ್‌ ಬರಬೇಕೆಂದು 2018ರಲ್ಲಿ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನಿಸಿ, ಆದೇಶಿಸಲಾಗಿತ್ತು. ಆದರೆ ಆರು ವರ್ಷ ಕಳೆದರೂ ಸಹ ಯಾರೊಬ್ಬರ ಹೆಸರಿನಲ್ಲಿಯೂ ಹಣ ಠೇವಣಿ ಇಡದಿರುವುದನ್ನು ಖಂಡಿಸಿ ನಿವೃತ್ತ ಪೌರ ಕಾರ್ಮಿಕರು ಪ್ರತಿಭಟಿಸಿದರು.

ಟ್ರಾಫಿಕ್‌ ಸಿಗ್ನಲ್‌ ಬ್ಯಾಟರಿ ಕಳ್ಳತನ; ಖದೀಮನ ಬೆನ್ನಟ್ಟಿ ಹಿಡಿದ ಪೊಲೀಸ್

2018ರಿಂದ ಈವರೆಗೆ ಒಟ್ಟು 1200ಕ್ಕೂ ಅಧಿಕ ಗುತ್ತಿಗೆ ಪೌರಕಾರ್ಮಿಕರು ನಿವೃತ್ತಿ ಹೊಂದಿದ್ದಾರೆ. ಆದೇಶವಾಗಿ ಆರು ವರ್ಷ ಕಳೆದಿದೆ. ಈವರೆಗೆ ಯಾರೊಬ್ಬರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಗುತ್ತಿಗೆ ಪೌರಕಾರ್ಮಿಕರು ಮೃತಪಟ್ಟರೆ .10 ಲಕ್ಷ ಪರಿಹಾರ ನೀಡುವುದು ಮತ್ತು ಅಂತ್ಯ ಸಂಸ್ಕಾರಕ್ಕೆ .20 ಸಾವಿರ ನೀಡುವಂತೆ ಆದೇಶ ಮಾಡಲಾಗಿತ್ತು. ಆದರೆ ಈ ಸೌಲಭ್ಯ ಗುತ್ತಿಗೆ ಪೌರಕಾರ್ಮಿಕರಿಗೆ ಲಭ್ಯವಾಗುತ್ತಿದೆ. ಆದರೆ, ಮುಖ್ಯ ಆಯುಕ್ತರು ಮತ್ತು ನಿವೃತ್ತ ಪೌರಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಜಂಟಿ ಖಾತೆ ತೆರೆದು .10 ಲಕ್ಷ ಠೇವಣಿ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಬೆಂಗಳೂರು ನಗರದ ಅಧ್ಯಕ್ಷ ಮುನಿರಾಜು ಪ್ರತಿಭಟನೆ ವೇಳೆ ತಿಳಿಸಿದರು.

ಅಂಗವಿಕಲ ಆಟೋ ಚಾಲಕನಿಗೆ .23,500 ವಂಚಿಸಿದ ಯುವತಿ!

ಸಂಘದಿಂದ ಬಿಬಿಎಂಪಿಯ ಆಡಳಿತ ವಿಭಾಗದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ ಮಾಡಲಾಯಿತು. ಈ ಬಗ್ಗೆ ಮುಖ್ಯ ಆಯುಕ್ತರೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.