Asianet Suvarna News Asianet Suvarna News

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮೈಸೂರು-200 ಅಪ್ರೆಂಟಿಸ್ ನೇಮಕಾತಿ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮೈಸೂರು ವಿಭಾಗದಲ್ಲಿ 2023-24 ಅಪ್ರೆಂಟಿಸ್‌ಶಿಪ್  ಕಾಯಿದೆ 1973 ಅಡಿಯಲ್ಲಿ ಗ್ರ್ಯಾಜುಯೇಟ್‌, ಟೆಕ್ನಿಷಿಯನ್ ಅಪ್ರೆಂಟಿಸ್ ಮತ್ತು ನಾನ್-ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

Chamundeshwari Electricity Supply Corporation Mysore-200 Apprentice Recruitment gow
Author
First Published Jan 17, 2024, 3:53 PM IST

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸಿಇಎಸ್‌ಸಿ) ಮೈಸೂರು ವಿಭಾಗದಲ್ಲಿ 2023-24 ಅಪ್ರೆಂಟಿಸ್‌ಶಿಪ್ (ತಿದ್ದುಪಡಿ) ಕಾಯಿದೆ 1973 ಅಡಿಯಲ್ಲಿ ಗ್ರ್ಯಾಜುಯೇಟ್‌, ಟೆಕ್ನಿಷಿಯನ್ ಅಪ್ರೆಂಟಿಸ್ ಮತ್ತು ನಾನ್-ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸಿಇಎಸ್‌ಸಿ) ಮೈಸೂರು ವಿಭಾಗದಲ್ಲಿ 2023-24 ಅಪ್ರೆಂಟಿಸ್‌ಶಿಪ್ (ತಿದ್ದುಪಡಿ) ಕಾಯಿದೆ 1973 ಅಡಿಯಲ್ಲಿ ಗ್ರ್ಯಾಜುಯೇಟ್‌, ಟೆಕ್ನಿಷಿಯನ್ ಅಪ್ರೆಂಟಿಸ್ ಮತ್ತು ನಾನ್-ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು. ಆಸಕ್ತ ಎಲ್ಲಾ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ: 200 ಅಪ್ರೆಂಟಿಸ್ ಹುದ್ದೆ

1. ಗ್ರ್ಯಾಜುಯೇಟ್‌ ಟೆಕ್ನಿಷಿಯನ್ ಅಪ್ರೆಂಟಿಸ್‌ ವಿಭಾಗ: 80 ಹುದ್ದೆ

*ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ – 77ಹುದ್ದೆ

* ಸಿವಿಲ್ ಇಂಜಿನಿಯರಿಂಗ್ ವಿಭಾಗ -03 ಹುದ್ದೆ

2. ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ ವಿಭಾಗ – 55 ಹುದ್ದೆ

* ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ – 51 ಹುದ್ದೆ

* ಸಿವಿಲ್ ಇಂಜಿನಿಯರಿಂಗ್ ವಿಭಾಗ -04 ಹುದ್ದೆ

3. ನಾನ್-ಇಂಜಿನಿಯರಿಂಗ್ ಅಪ್ರೆಂಟಿಸ್ ವಿಭಾಗ - 65 ಹುದ್ದೆ

* ಬಿ.ಕಾಂ ಅಭ್ಯರ್ಥಿಗಳಿಗೆ -30 ಹುದ್ದೆ

* ಬಿಬಿಎ ಅಭ್ಯರ್ಥಿಗಳಿಗೆ -10 ಹುದ್ದೆ

* ಬಿಸಿಎ ಅಭ್ಯರ್ಥಿಗಳಿಗೆ - 10 ಹುದ್ದೆ

* ಬಿ.ಎ ಅಭ್ಯರ್ಥಿಗಳಿಗೆ- 07 ಹುದ್ದೆ

* ಬಿ.ಎಸ್ಸಿ ಅಭ್ಯರ್ಥಿಗಳಿಗೆ -08 ಹುದ್ದೆ

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-12-2023

ನಾಟ್ಸ್ ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-01-2024

ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯ ಘೋಷಣೆಯ ದಿನಾಂಕ: 24-01-2024

ದಾಖಲಾತಿ ಪರಿಶೀಲನೆ ದಿನಾಂಕ: 31-01-2024 ರಿಂದ 02-02-2024

ಶೈಕ್ಷಣಿಕ ವಿದ್ಯಾರ್ಹತೆ:

ಅ. ಪದವೀಧರ ಅಪ್ರೆಂಟಿಸ್‌ಗಳಿಗೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಬಿ.ಇ/ ಬಿ-ಟೆಕ್‌ ಪದವಿಯನ್ನು ಪಡೆದಿರಬೇಕು.

ಆ. ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ಗಳಿಗೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಕಾಲೇಜು/ಸಂಸ್ಥೆಯಿಂದ 3 ವರ್ಷದ ಡಿಪ್ಲೊಮಾ ಪಡೆದಿರಬೇಕು.

ಇ. ನಾನ್-ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌ಗಳಿಗೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಎ/ ಬಿ.ಎಸ್ಸಿ/ಬಿ.ಕಾಂ/ಬಿ.ಬಿ.ಎ ಅಥವಾ ಬಿ.ಸಿ.ಎ ಪದವಿಯನ್ನು ಪಡೆದಿರಬೇಕು.

ಅರ್ಹತೆಯ ಮಾನದಂಡ:

೧. ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಇ. ಪದವಿ / ಬಿ.ಟೆಕ್ ಪದವಿ / ಡಿಪ್ಲೋಮಾ ಪ್ರಮಾಣ ಪತ್ರವನ್ನು ಪಡೆದಿರಬೇಕು.

೨. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಎ/ ಬಿ.ಎಸ್ಸಿ/ಬಿ.ಕಾಂ/ಬಿ.ಬಿ.ಎ ಅಥವಾ ಬಿ.ಸಿ.ಎ ಪದವಿಯನ್ನು ಪಡೆದಿರಬೇಕು.

೩. ಅಭ್ಯರ್ಥಿಯು ಎಂಜಿನಿಯರಿಂಗ್ ಪದವಿಯನ್ನು ಮಾರ್ಚ್ 2019, 2020, 2021, 2022 ಮತ್ತು 2023 ಅವಧಿಯಲ್ಲಿ ಮಾತ್ರ ಪೂರ್ಣಗೊಳಿಸಿರಬೇಕು ಹಾಗೂ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದಿರಬೇಕು.

೪. ಅಪ್ರೆಂಟಿಸ್‌ಶಿಪ್ ಆಕ್ಟ್ 1961 ಅಡಿಯಲ್ಲಿ ಈಗಾಗಲೇ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿ ಒಳಗಾದ ಅಭ್ಯರ್ಥಿಗಳು ಅಥವಾ ಪ್ರಸ್ತುತ ತರಬೇತಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

೫. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ತರಬೇತಿಯ ಅವಧಿ:

ಅಪ್ರೆಂಟಿಸ್‌ಶಿಪ್ (ತಿದ್ದುಪಡಿ) ಕಾಯಿದೆ 1973 ರ ಪ್ರಕಾರ ಅಪ್ರೆಂಟಿಸ್‌ಶಿಪ್ ತರಬೇತಿಯು ಒಂದು ವರ್ಷದ ಅವಧಿಯದ್ದಾಗಿರುತ್ತದೆ.

ಮಾಸಿಕ ಸ್ಟೈಪೆಂಡ್ :

1. ಗ್ರ್ಯಾಜುಯೇಟ್‌ ಟೆಕ್ನಿಷಿಯನ್ ಅಪ್ರೆಂಟಿಸ್‌ ಹುದ್ದೆಗೆ : ರು. 9000

2. ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ ಹುದ್ದೆಗೆ – ರು. 8000

3. ನಾನ್-ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್‌ ಹುದ್ದೆಗೆ – ರು.9000

ಆಯ್ಕೆ ವಿಧಾನ:

೧.ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್ (ದಕ್ಷಿಣ ಪ್ರದೇಶ ) ಆನ್‌ಲೈನ್ ಅಪ್ಲಿಕೇಶನ್ ಡೇಟಾದಿಂದ ಅಭ್ಯರ್ಥಿಗಳು ಸಲ್ಲಿಸಿದ ಮಾಹಿತಿಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಪ್ರಕ್ರಿಯೆಯನ್ನು ಮಾಡುತ್ತದೆ.

೨. ಅಭ್ಯರ್ಥಿಗಳು ತಾವು ಆಯ್ಕೆ ಬಯಸುವ ಹುದ್ದೆಗೆ ಅನುಗುಣವಾಗಿ ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

೩. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ನೋಂದಾಯಿತ ಇ-ಮೇಲ್ ಐಡಿ ಮೂಲಕ ಮಾಹಿತಿ ತಿಳಿಸಲಾಗುತ್ತದೆ.

೪. ದಾಖಲಾತಿ ಪರಿಶಿಲನೆಗಾಗಿ ಅಭ್ಯರ್ಥಿಗಳು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಜನರಲ್ ಮ್ಯಾನೇಜರ್, ಎ ಮತ್ತು ಎಚ್ಆರ್ ವಿಭಾಗ, ಕಾರ್ಪೊರೇಟ್ ಕಛೇರಿ, # 29, ವಿಜಯನಗರ 2ನೇ ಹಂತ, ಹಿನಕಲ್, ಮೈಸೂರು-570017 ಕ್ಕೆ ಹಾಜರಿರತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ವೀಕ್ಸಿಸಲು ಕೋರಲಾಗಿದೆ.

Follow Us:
Download App:
  • android
  • ios