Asianet Suvarna News Asianet Suvarna News

ಒಂದೇ ಪರೀಕ್ಷೆಗೆ ಬೆಳಗ್ಗೆ ಒಂದು, ಮಧ್ಯಾಹ್ನವೊಂದು ಕೇಂದ್ರ: ಕೆಪಿಎಸ್‌ಸಿ ಎಡವಟ್ಟಿಗೆ ಕಂಗಾಲಾದ ಅಭ್ಯರ್ಥಿಗಳು.!

ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡ ಅಭ್ಯರ್ಥಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಏಕೆಂದರೆ, ಅಭ್ಯರ್ಥಿಯೊಬ್ಬರಿಗೆ ಮೊದಲ ಪತ್ರಿಕೆಯ ಪರೀಕ್ಷೆಯು ವಿವಿ ಪುರದ ಪರೀಕ್ಷಾ ಕೇಂದ್ರದಲ್ಲಿದ್ದರೆ, ಮಧ್ಯಾಹ್ನದ ಪತ್ರಿಕೆಯನ್ನು ಯಲಹಂಕದ ಪರೀಕ್ಷಾ ಕೇಂದ್ರದಲ್ಲಿ ನೀಡಲಾಗಿದೆ. ಇದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಎಡವಟ್ಟು ಮಾಡಲಾಗಿದೆ. 

Candidates Faces Problems For KPSC Mistake in KAS Prelims Exam in Karnataka grg
Author
First Published Sep 7, 2024, 12:08 PM IST | Last Updated Sep 7, 2024, 12:08 PM IST

ಬೆಂಗಳೂರು(ಸೆ.07): ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಅಧ್ವಾನದ ಬಳಿಕ ಕರ್ನಾಟಕ ಲೋಕಸೇವಾ ಆಯೋಗ ಮತ್ತೊಂದು ಎಡವಟ್ಟು ಮಾಡಿದೆ. ನೇಮಕಾತಿ ಪರೀಕ್ಷೆಗೆ ಬೆಳಗ್ಗೆಯ ಪರೀಕ್ಷೆಗೆ ಒಂದು ಪರೀಕ್ಷಾ ಕೇಂದ್ರ ನೀಡಿದ್ದರೆ, ಮಧ್ಯಾಹ್ನದ ಪತ್ರಿಕೆಗೆ ಮತ್ತೊಂದು ಪರೀಕ್ಷಾ ಉಪ ಕೇಂದ್ರದಲ್ಲಿ ನೀಡಲಾಗಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ - ಬಿ ಹುದ್ದೆಗಳ ನೇಮಕಾತಿಗೆ ಸೆ.14 ಮತ್ತು ಸೆ.15ರಂದು ಪರೀಕ್ಷೆ ನಿಗದಿಪಡಿಸಿ ಸೆ.5ರಂದು ಪ್ರದೇಶ ಪತ್ರಗಳನ್ನು ಕೆಪಿಎಸಿ ಬಿಡುಗಡೆ ಮಾಡಿದೆ. 

ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡ ಅಭ್ಯರ್ಥಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಏಕೆಂದರೆ, ಅಭ್ಯರ್ಥಿಯೊಬ್ಬರಿಗೆ ಮೊದಲ ಪತ್ರಿಕೆಯ ಪರೀಕ್ಷೆಯು ವಿವಿ ಪುರದ ಪರೀಕ್ಷಾ ಕೇಂದ್ರದಲ್ಲಿದ್ದರೆ, ಮಧ್ಯಾಹ್ನದ ಪತ್ರಿಕೆಯನ್ನು ಯಲಹಂಕದ ಪರೀಕ್ಷಾ ಕೇಂದ್ರದಲ್ಲಿ ನೀಡಲಾಗಿದೆ. ಇದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಎಡವಟ್ಟು ಮಾಡಲಾಗಿದೆ. 

Breaking: ಕೆಪಿಎಸ್‌ ಮರು ಪರೀಕ್ಷೆಗೆ ಸಿಎಂ ಸೂಚನೆ, ಕೊನೆಗೂ ಹೋರಾಟಕ್ಕೆ ಸಂದ ಜಯ

ಈ ಕುರಿತು ಜಾಲತಾಣ 'ಎಕ್ ನಲ್ಲಿ ಪೋಸ್ ಮಾಡಿರುವ ಸಾಗರ್‌ ಎಂಬುವರು, ಕೆಪಿಎಸ್‌ಸಿ ಗಮನ ಸೆಳೆದಿದ್ದಾರೆ. ಈ ಆಧಾನದ ಕುರಿತು ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಭ್ಯರ್ಥಿಗಳ ಆಕ್ಷೇಪ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಕೆಪಿಎಸ್‌ಸಿ, ಪ್ರವೇಶಪತ್ರ ಡೌನ್ ಲೋಡ್ ಕೊಳ್ಳುವುದನ್ನು ಸ್ಥಗಿತಗೊಳಿಸಿದೆ. ಮಾಡಿ ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಕೆಪಿಎಸ್‌ಸಿ, ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಪರೀಕ್ಷಾ ಉಪಕೇಂದ್ರಗಳ ಹಂಚಿಕೆಯಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ, ಪ್ರವೇಶಪತ್ರ ಡೌನ್‌ಲೋಡ್ ಸ್ಥಗಿತಗೊಳಿಸಲಾಗಿದೆ. ಪರಿಹರಿಸಿದ ಬಳಿಕ ಹೊಸದಾಗಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲಿಸಲಾಗುತ್ತದೆ ಎಂದು ತಿಳಿಸಿದೆ.

Latest Videos
Follow Us:
Download App:
  • android
  • ios