Asianet Suvarna News Asianet Suvarna News

BMRCL Recruitment 2023: ನಮ್ಮ ಮೆಟ್ರೋದಲ್ಲಿ ಹಲವು ಹುದ್ದೆಗಳು, 1,65,000 ರೂ ವರೆಗೂ ವೇತನ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ವಿವಿಧ 14 ಹುದ್ದೆಗಳು ಖಾಲಿ ಇದ್ದು,  ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 17 ಕೊನೆಯ ದಿನವಾಗಿದೆ. 

BMRCL RECRUITMENT 2023 notification for various post gow
Author
First Published Jan 14, 2023, 6:33 PM IST

ಬೆಂಗಳೂರು (ಜ.14): ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ( BMRCL) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.   ಜನರಲ್ ಮ್ಯಾನೇಜರ್, ಹೆಚ್ಚುವರಿ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಗುತ್ತಿಗೆ/ನಿಯೋಜನೆ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. BMRCL ನೇಮಕಾತಿ ಅಧಿಸೂಚನೆಯ ಪ್ರಕಾರ, ಒಟ್ಟು 14 ಖಾಲಿ ಹುದ್ದೆಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ರೂ. 165000 ರೂ ವೇತನ ದೊರೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 17 ಕೊನೆಯ ದಿನವಾಗಿದೆ. 

ಒಟ್ಟು 14 ಹುದ್ದೆಗಳ ಮಾಹಿತಿ ಇಂತಿದೆ
ಜನರಲ್ ಮ್ಯಾನೇಜರ್ - 1 ಹುದ್ದೆ
ಹೆಚ್ಚುವರಿ ಜನರಲ್ ಮ್ಯಾನೇಜರ್ - 2 ಹುದ್ದೆಗಳು
ಉಪ ಜನರಲ್ ಮ್ಯಾನೇಜರ್ - 1 ಹುದ್ದೆ
ಸಹಾಯಕ ಜನರಲ್ ಮ್ಯಾನೇಜರ್ - 3 ಹುದ್ದೆಗಳು
ಮ್ಯಾನೇಜರ್ - 2 ಹುದ್ದೆಗಳು
ಸಹಾಯಕ ವ್ಯವಸ್ಥಾಪಕ - 5 ಹುದ್ದೆಗಳು

ಶೈಕ್ಷಣಿಕ ಅರ್ಹತೆ: ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ (ಸಿಎ) / ಕಾಸ್ಟ್ ಅಕೌಂಟೆಂಟ್ (ಸಿಎಂಎ) ನಂತಹ ವೃತ್ತಿಪರ ಅರ್ಹತೆಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ (ನಿಯಮಿತ ಪೂರ್ಣ ಸಮಯದ ಕೋರ್ಸ್) ಪದವಿ ಪಡೆದಿರಬೇಕು. 

ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರೋರೈಲ್ ಕಂಪನಿ/ಪಿಎಸ್‌ಯುನಲ್ಲಿ ಫೈನಾನ್ಸ್ ಮತ್ತು ಅಕೌಂಟ್‌ಗಳನ್ನು ನಿರ್ವಹಿಸುವಲ್ಲಿ ಕನಿಷ್ಠ 20 ವರ್ಷಗಳ ಅನುಭವದ ಒಟ್ಟು ಪೋಸ್ಟ್ ಅರ್ಹತಾ ಕಾರ್ಯನಿರ್ವಾಹಕ ಸೇವೆಯನ್ನು ಹೊಂದಿರಬೇಕು.  

ಹೆಚ್ಚುವರಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರೊರೈಲ್ ಕಂಪನಿ/ಪಿಎಸ್‌ಯುನಲ್ಲಿ ಹಣಕಾಸು ಮತ್ತು ಖಾತೆಗಳನ್ನು ನಿರ್ವಹಿಸುವಲ್ಲಿ 17 ವರ್ಷಗಳ ಅನುಭವಕ್ಕಿಂತ ಕಡಿಮೆಯಿಲ್ಲದ ಒಟ್ಟು ಪೋಸ್ಟ್ ಅರ್ಹತಾ ಕಾರ್ಯನಿರ್ವಾಹಕ ಸೇವೆಯನ್ನು ಹೊಂದಿರಬೇಕು.

ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 15 ವರ್ಷಗಳಿಗಿಂತ ಕಡಿಮೆಯಿಲ್ಲದ ಒಟ್ಟು ಪೋಸ್ಟ್-ಕ್ವಾಲಿಫಿಕೇಶನ್ ಎಕ್ಸಿಕ್ಯೂಟಿವ್ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಯು ಪ್ರಸ್ತುತ ನಿವ್ವಳ 6 ವರ್ಷಗಳಿಗಿಂತ ಕಡಿಮೆ ಅವಧಿಗೆ ಮ್ಯಾನೇಜರ್ (ಎಫ್) ಆಗಿ ಕಾರ್ಯನಿರ್ವಹಿಸಬೇಕು.

ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ವರ್ಷಗಳಿಗಿಂತ ಕಡಿಮೆಯಿಲ್ಲದ ಒಟ್ಟು ಪೋಸ್ಟ್ ಅರ್ಹತಾ ಕಾರ್ಯನಿರ್ವಾಹಕ ಸೇವೆಯನ್ನು ಹೊಂದಿರಬೇಕು. ಅಭ್ಯರ್ಥಿಯು ಪ್ರಸ್ತುತ 4 ವರ್ಷಗಳಿಗಿಂತ ಕಡಿಮೆಯಿಲ್ಲದೆ ಮ್ಯಾನೇಜರ್ (ಎಫ್) ಆಗಿ ಕಾರ್ಯನಿರ್ವಹಿಸುತ್ತಿರಬೇಕು.

ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 8 ವರ್ಷಗಳಿಗಿಂತ ಕಡಿಮೆಯಿಲ್ಲದ ಒಟ್ಟು ಪೋಸ್ಟ್ ಅರ್ಹತಾ ಕಾರ್ಯನಿರ್ವಾಹಕ ಸೇವೆಯನ್ನು ಹೊಂದಿರಬೇಕು. ಅಭ್ಯರ್ಥಿಯು ಪ್ರಸ್ತುತ 4 ವರ್ಷಗಳಿಗಿಂತ ಕಡಿಮೆಯಿಲ್ಲದೆ ಸಹಾಯಕ ವ್ಯವಸ್ಥಾಪಕರಾಗಿ (ಎಫ್) ಕಾರ್ಯನಿರ್ವಹಿಸುತ್ತಿರಬೇಕು.

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 4 ವರ್ಷಗಳಿಗಿಂತ ಕಡಿಮೆಯಿಲ್ಲದ ಒಟ್ಟು ಪೋಸ್ಟ್ ಅರ್ಹತಾ ಕಾರ್ಯನಿರ್ವಾಹಕ ಸೇವೆಯನ್ನು ಹೊಂದಿರಬೇಕು/ಪ್ರಸ್ತುತ 5 ವರ್ಷಗಳಿಗಿಂತ ಕಡಿಮೆಯಿಲ್ಲದ ಯಾವುದೇ ಮೆಟ್ರೋ ರೈಲು/ಪಿಎಸ್‌ಯು ಕಂಪನಿಯಲ್ಲಿ ಹಿರಿಯ ಕಾರ್ಮಿಕರ ಮಟ್ಟದಲ್ಲಿ ಕೆಲಸ ಮಾಡುತ್ತಿರಬೇಕು.

ವಯೋಮಿತಿ:  ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಠ ಈ ಕೆಳಗೆ ನಮೂದಿಸಿದ ವಯೋಮಿತಿಯ ಒಳಗಿರಬೇಕು.
ಜನರಲ್ ಮ್ಯಾನೇಜರ್ - 55 ವರ್ಷಗಳು
ಹೆಚ್ಚುವರಿ ಜನರಲ್ ಮ್ಯಾನೇಜರ್ - 50 ವರ್ಷಗಳು
ಉಪ ಜನರಲ್ ಮ್ಯಾನೇಜರ್ - 45 ವರ್ಷಗಳು
ಸಹಾಯಕ ಜನರಲ್ ಮ್ಯಾನೇಜರ್ - 40 ವರ್ಷಗಳು
ಮ್ಯಾನೇಜರ್ - 40 ವರ್ಷಗಳು
ಸಹಾಯಕ ವ್ಯವಸ್ಥಾಪಕ - 35 ವರ್ಷಗಳು

Assistant Professor Merit list: ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಮೆರಿಟ್‌ ಪಟ್ಟಿ

ವೇತನ ವಿವರ:  ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ ವೇತನ ದೊರೆಯಲಿದೆ.
ಜನರಲ್ ಮ್ಯಾನೇಜರ್ -  1,65,000 ರೂ
ಹೆಚ್ಚುವರಿ ಜನರಲ್ ಮ್ಯಾನೇಜರ್ -  1,50,000 ರೂ
ಉಪ ಜನರಲ್ ಮ್ಯಾನೇಜರ್ - 1,40,000 ರೂ
ಸಹಾಯಕ ಜನರಲ್ ಮ್ಯಾನೇಜರ್ -  85,000 ರೂ
ಮ್ಯಾನೇಜರ್ - 75,000 ರೂ
ಸಹಾಯಕ ವ್ಯವಸ್ಥಾಪಕ -  50,000 ರೂ

KPTCL Recruitment Scam: ಅರ್ಧ ಶತಕ ಪೂರೈಸಿದ ಬಂಧಿತರ ಸಂಖ್ಯೆ!

ಅರ್ಜಿ ಸಲ್ಲಿಸಬೇಕಾದ ವಿಳಾಸ: ಅರ್ಜಿಗಳನ್ನು ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಈ ಕೆಳಗೆ ನಮೂದಿಸಿರುವ ವಿಳಾಸಕ್ಕೆ ಕಳುಹಿಸಬೇಕು.
ಜನರಲ್ ಮ್ಯಾನೇಜರ್ (HR),
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
III ಮಹಡಿ, BMTC ಕಾಂಪ್ಲೆಕ್ಸ್, K.H. ರಸ್ತೆ,
ಶಾಂತಿನಗರ, ಬೆಂಗಳೂರು - 560027

General Manager (HR),
Bangalore Metro Rail Corporation Limited,
III Floor, BMTC Complex, K.H. Road,
Shanthinagar, Bengaluru – 560027

Follow Us:
Download App:
  • android
  • ios