ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಖಾಲಿ ಇರುವ ವಿಜ್ಞಾನಿಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ. ಆಸಕ್ತ ಎಂಜಿನಿಯರಿಂಗ್ ಪದವೀಧರರು ಬಿಐಎಸ್‌ನ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು ಜೂನ್ 25 ಕೊನೆಯ ದಿನವಾಗಿದೆ.

ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಬಾಡಿ ಆಫ್ ಇಂಡಿಯಾದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ನಿಗದಿತ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 

ಐಬಿಎಸ್ “ಎಂಜಿನಿಯರಿಂಗ್ ಪದವೀಧರರಿಗೆ ಸೈಂಟಿಸ್ಟ್ ಬಿ ಉದ್ಯೋಗ” ನೇಮಕಾತಿಯನ್ನ ಘೋಷಿಸಿದ್ದು, ಒಟ್ಟು 28 ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳುವುದಾಗಿ ಹೇಳಿದೆ. ಅರ್ಜಿ ಸಲ್ಲಿಸಲು ಜೂನ್ 25 ಕೊನೆಯ ದಿನಾಂಕವಾಗಿರುತ್ತದೆ.

ಬಿಐಎಸ್ ಸೈಂಟಿಸ್ಟ್ ಬಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಿದ್ಧರಿರುವವರು ಬಿಐಎಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ಅರ್ಜಿಯನ್ನು ಸಲ್ಲಿಸಬಹುದು. ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ (ಗೇಟ್) ಸ್ಕೋರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಯು, ಬರೋಬ್ಬರೀ ಲಕ್ಷದ ಹತ್ತಿರ ಅಂದ್ರೆ ಮಾಸಿಕ 87,525 ರೂಪಾಯಿ ವೇತನ ಪಡೆಯಲಿದ್ದಾರೆ. ಇದು ಭರ್ಜರಿ ಸಂಬಳ ನೀಡುವ ಉದ್ಯೋಗವಾಗಿದೆ ಎಂದು ಹೇಳಬಹುದು.

ನೀಟ್ ಪರೀಕ್ಷೆಯನ್ನೂ ರದ್ದು ಮಾಡಲು ತಮಿಳುನಾಡು ಒತ್ತಾಯ

ನಿರ್ದಿಷ್ಟಪಡಿಸಿದ ವಿಭಾಗಗಳಲ್ಲಿ ಸೈನ್ಸ್‌-ಬಿ ಬಿ ಹುದ್ದೆಗೆ ಪ್ರಕಾಶಮಾನವಾದ ಹಾಗೂ ಯುವ ಕ್ರಿಯಾತ್ಮಕ ಅಭ್ಯರ್ಥಿಗಳಿಗೆ ಬಿಐಎಸ್ ಅತ್ಯುತ್ತಮ ವೃತ್ತಿ ಅವಕಾಶಗಳನ್ನು ನೀಡುತ್ತದೆ. ಈ ಹುದ್ದೆಗಳು ಏಳನೇ ಕೇಂದ್ರ ವೇತನ ಆಯೋಗದ ಪ್ರಕಾರ ವೇತನ ಮಟ್ಟ-10ರಂತೆ ಭತ್ಯೆಗಳು ಅನ್ವಯವಾಗುತ್ತವೆ. 

ಅಭ್ಯರ್ಥಿಯು ಹುದ್ದೆಗೆ ಸೇರುವ ಸಮಯದಲ್ಲಿ ಒಟ್ಟು ಸಂಬಳವು ದೆಹಲಿಯಲ್ಲಿ ಅಂದಾಜು 87,525 ಆಗಿರುತ್ತದೆʼಎಂದು ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ. ಈ ಉದ್ಯೋಗವಕಾಶಗಳು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ.

ಇನ್ಸ್‌ಟ್ರುಮೆಂಟ್‌ ಇಂಜಿನಿಯರ್‌ 2 ಹುದ್ದೆಗಳು, ಎನ್‌ವಿರಾನ್‌ಮೆಂಟಲ್‌ ಇಂಜಿನಿಯರಿಂಗ್‌ 2 ಹುದ್ದೆಗಳು, ಸಿವಿಲ್‌ ಇಂಜಿನಿಯರಿಂಗ್‌ 13 ಹುದ್ದೆಗಳು, ಕೆಮಿಸ್ಟ್ರಿ 7 ಹುದ್ದೆಗಳು, ಟೆಕ್ಸ್‌ಟೈಲ್‌ ಇಂಜಿನಿಯರಿಂಗ್‌ 4 ಹುದ್ದೆಗಳು ಖಾಲಿಯಿದ್ದು, ಗೇಟ್‌ಸ್ಕೋರ್‌ ಆಧಾರದ ಮೇಲೆ ಸೂಕ್ತ ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. 

ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅತ್ಯಗತ್ಯ ಶೈಕ್ಷಣಿಕ ಅರ್ಹತೆಯನ್ನ ಹೊಂದಿರಬೇಕು. ಸಿವಿಲ್‌ ಇಂಜಿನಿಯರಿಂಗ್‌, ಇನ್ಸ್‌ಟ್ರುಮೆಂಟೇಷನ್ ಇಂಜಿನಿಯರಿಂಗ್‌ ಹಾಗೂ ಎನ್‌ವಿರಾನ್‌ಮೆಂಟಲ್‌ ಇಂಜಿನಿಯರಿಂಗ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. 

ಒಟ್ಟು ಕನಿಷ್ಠ 60 ಶೇಕಡಾ ಅಂಕಗಳೊಂದಿಗೆ ಉತ್ತೀಣರಾಗಿರಬೇಕು. ಇನ್ನು ಕೆಮಿಸ್ಟ್ರಿ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಕ್ಯಾಂಡಿಡೇಟ್ಸ್‌ ನ್ಯಾಚುರಲ್‌ ಸೈನ್ಸ್‌ಅಥವಾ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 

3322 ಅಪ್ರೆಂಟಿಸ್ ಹುದ್ದೆಗಳಿಗೆ ದಕ್ಷಿಣ ಮಧ್ಯೆ ರೈಲ್ವೆ ಅರ್ಜಿ ಆಹ್ವಾನ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನ ಅಧಿಕೃತ ವೆಬ್‌ಸೈಟ್‌ bis.gov.inಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಮೋಡ್‌ ಮೂಲಕ ಅಭ್ಯರ್ಥಿಗಳು ಅರ್ಜಿಯ ಶುಲ್ಕವನ್ನು ಪಾವತಿಸಬಹುದು. ಅಭ್ಯರ್ಥಿಗಳು ಮರು ಪಾವತಿಸಲಾಗದ 100 ರೂ. ಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಇನ್ನು ಎಸ್ಸಿ / ಎಸ್ಟಿ / ಮಾಜಿ ಸೈನಿಕರು ಕೆಟಗರಿಯ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.

ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದಂದು ಅಂದರೆ 2021 ರ ಜೂನ್ 25ರೊಳಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 30 ವರ್ಷಗಳನ್ನು ಮೀರಬಾರದು. ಇದಲ್ಲದೆ, 2019/2020/2021ರಲ್ಲಿ ಮಾನ್ಯವಾಗಿರೋ ಗೇಟ್ ಸ್ಕೋರ್ ಹೊಂದಿರುವುದು ಕಡ್ಡಾಯವಾಗಿದೆ. ಮಾನ್ಯವಾಗಿರುವ ಗೇಟ್ ಅಂಕಗಳು ಮತ್ತು ವೈಯಕ್ತಿಕ ಸಂದರ್ಶನವನ್ನ ಆಧರಿಸಿ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್‌ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳ ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಈ ದೇಶದಲ್ಲಿ ‘ಮಾನಸಿಕ ಆರೋಗ್ಯ ರಜೆ’ ಸಿಗಲಿದೆ ಗೊತ್ತಾ?