Asianet Suvarna News Asianet Suvarna News

ಬೆಂಗಳೂರು: ಪದವೀಧರರಿಂದ ಜಿಲ್ಲಾ ಸಂಯೋಜಕರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಫೆ.26 ಕೊನೆ ದಿನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ  'ಮಿಷನ್ ಶಕ್ತಿ' ಯೋಜನೆಯಡಿಯಲ್ಲಿ  ಜಿಲ್ಲಾ ಸಂಯೋಜಕರು ಹುದ್ದೆಗಳಿಗೆ ಪದವೀಧರರಿಂದ ಆರ್ಜಿ ಆಹ್ವಾನಿಸಲಾಗಿದೆ.

Bengaluru Women and Children Department Recruitment for District Coordinator post sat
Author
First Published Feb 12, 2024, 7:32 PM IST

ಬೆಂಗಳೂರು (ಫೆ.12): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ  'ಮಿಷನ್ ಶಕ್ತಿ' ಯೋಜನೆಯಡಿಯಲ್ಲಿ  ಜಿಲ್ಲಾ ಸಂಯೋಜಕರು, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕರು, ಹಣಕಾಸು, ಸಾಕ್ಷರತೆ ಮತ್ತು ಅಕೌಂಟೆಟ್ ನಲ್ಲಿ ತಜ್ಞರು ಮತ್ತು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಹ ಜಿಲ್ಲಾ ಸಂಯೋಜಕರು  ಹುದ್ದೆಗಳಿಗೆ  ಹೊರ ಗುತ್ತಿಗೆ ಆಧಾರದ ಮೇಲೆ  ಅರ್ಹ ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ವಿದ್ಯಾರ್ಹತೆ : ಜಿಲ್ಲಾ ಸಂಯೋಜಕರು ಹುದ್ದೆಗೆ ಸಮಾಜ ವಿಜ್ಞಾನ, ಜೀವನ ವಿಜ್ಞಾನ, ಪೋಷಣೆ, ಆರೋಗ್ಯ ನಿರ್ವಹಣೆ, ಸಮಾಜ ಸೇವೆ ಹಾಗೂ ಗ್ರಾಮೀಣ ನಿರ್ವಹಣೆ ಸ್ನಾತಕೋತ್ತರ ಪದವಿ ಹೊಂದಿರಬೇಕು. ಸರ್ಕಾರಿ ಅಥವಾ  ಸ್ವಯಂ ಸೇವಾಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕರು ಹುದ್ದೆಗೆ ಸಮಾಜ ವಿಜ್ಞಾನ, ಜೀವನ ವಿಜ್ಞಾನ, ಪೋಷಣೆ, ಆರೋಗ್ಯ ನಿರ್ವಹಣೆ, ಸಮಾಜ ಸೇವೆ ಹಾಗೂ ಗ್ರಾಮೀಣ ನಿರ್ವಹಣೆ ಸ್ನಾತಕೋತ್ತರ ಪದವಿ ಹೊಂದಿರಬೇಕು. ಸರ್ಕಾರಿ ಅಥವಾ  ಸ್ವಯಂ ಸೇವಾಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. 

ಬೆಂಗಳೂರು: ಸ್ಕೂಟರ್ ಕೀ ಕಿತ್ತುಕೊಂಡ ಟ್ರಾಫಿಕ್ ಪೊಲೀಸ್ ಕೈ ಕಚ್ಚಿದ ವಾಹನ ಸವಾರ

ಹಣಕಾಸು, ಸಾಕ್ಷರತೆ ಮತ್ತು ಅಕೌಂಟೆಟ್ ನಲ್ಲಿ ತಜ್ಞರು ಹುದ್ದೆಗೆ ಅರ್ಥಶಾಸ್ತ್ರ, ಬ್ಯಾಕಿಂಗ್  ಮತ್ತು ಇತರ ವಿಭಾಗಗಳಲ್ಲಿ  ಪದವಿ ಹೊಂದಿರಬೇಕು. ಸರ್ಕಾರಿ ಅಥವಾ  ಸ್ವಯಂ ಸೇವಾಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಹ ಜಿಲ್ಲಾ ಸಂಯೋಜಕರು ಹುದ್ದೆಗೆ ಕಂಪ್ಯೂಟರ್ ನಲ್ಲಿ ಕೆಲಸ  ಮಾಡುವ ಜ್ಞಾನದೊಂದಿಗೆ ಪದವಿ ಹೊಂದಿರಬೇಕು. ಸರ್ಕಾರಿ  ಅಥವಾ ಸ್ವಯಂ ಸೇವಾಸಂಸ್ಥೆಗಳಲ್ಲಿ  ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು ಹಾಗೂ ಕಂಪ್ಯೂಟರ್ ಬಳಕೆಯಲ್ಲಿ, ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್ ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ಬಿಡದಿಗೆ ಮೆಟ್ರೋ ರೈಲು ವಿಸ್ತರಣೆಗೆ ಡಿಪಿಆರ್ ರೆಡಿಯಾಗ್ತಿದೆ, ಗ್ರೇಟರ್ ಬೆಂಗಳೂರಿಗೂ ಸೇರಿಸ್ತೇವೆ; ಡಿ.ಕೆ. ಶಿವಕುಮಾರ

ಅರ್ಜಿ ನಮೂನೆಗಳಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ  ಸಂಸ್ಥೆಗಳ ಸಂರ್ಕೀಣ, ಡಾ. ಎಂ. ಹೆಚ್ ಮರೀಗೌಡ ರಸ್ತೆ, ಬೆಂಗಳೂರು ಇಲ್ಲಿ ಪಡೆದು  ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 26 ರಂದು  ಸಂಜೆ 5:30 ರೊಳಗೆ  ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26578688 ಅನ್ನು  ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios