Asianet Suvarna News Asianet Suvarna News

BBMP Recruitment 2023: ಬಿಬಿಎಂಪಿಯಲ್ಲಿ 3000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ  ವತಿಯಿಂದ ಅನೇಕ ಹುದ್ದೆಗಳಿಗೆ ಈ ಬಾರಿ ನೇಮಕಾತಿ ನಡೆಯಲಿದ್ದು, ಹುದ್ದೆಗಳು ಗ್ರೂಪ್‌ ಡಿ ವಿಭಾಗಗಳದ್ದಾಗಿದೆ. ಒಟ್ಟು 3,673 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಕೆಗೆ ಜನವರಿ 30ರಂದು ಕೊನೆಯ ದಿನವಾಗಿದೆ.

BBMP Recruitment notification for more than 3000 posts gow
Author
First Published Jan 23, 2023, 12:23 PM IST

ಬೆಂಗಳೂರು (ಜ.23): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಅನೇಕ ಹುದ್ದೆಗಳಿಗೆ ಈ ಬಾರಿ ನೇಮಕಾತಿ ನಡೆಯಲಿದ್ದು, ಹುದ್ದೆಗಳು ಗ್ರೂಪ್‌ ಡಿ ವಿಭಾಗಗಳದ್ದಾಗಿದೆ. ಅಧಿಸೂಚನೆಯನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿರುವ ನೇಮಕಾತಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಹುದ್ದೆಗಳ ಮಾಹಿತಿ ಹೀಗಿದೆ: ಒಟ್ಟು 3,673 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಗ್ರೂಪ್‌ ಡಿ ವಿಭಾಗ ಅಂದರೆ ಪೌರಕಾರ್ಮಿಕ ಹುದ್ದೆಗಳಾಗಿವೆ. ಈ ಪೈಕಿ ಕಲ್ಯಾಣ ಕರ್ನಾಟಕ ಕಲ್ಯಾಣ ಕರ್ನಾಟಕ ವಿಭಾಗಕ್ಕೆ 430 ಹುದ್ದೆಗಳು ಹಾಗೂ ಉಳಿಕೆ ಮೂಲ ವೃಂದಕ್ಕೆ 3243 ಹುದ್ದೆಗಳು ಆಗಿವೆ. ಕನಿಷ್ಠ ವಿದ್ಯಾರ್ಹತೆ ಕುರಿತು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಯ ಗರಿಷ್ಠ ವಯಸ್ಸು ಬಿಬಿಎಂಪಿ ನೇಮಕಾತಿ ನಿಯಮವಾಳಿ ಪ್ರಕಾರ 55 ಅಥವಾ ಅದರೊಳಗಿರಬೇಕು.

ದಾಖಲೆಗಳು, ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಜೊತೆಗೆ ದಾಖಲೆಗಳಾಗಿ ಯಾವುದಾದರೂ ಗುರುತಿನ ಚೀಟಿ (ಆಧಾರ್‌ಕಾರ್ಡ್‌, ವೋಟರ್‌ಐಡಿ ಇತ್ಯಾದಿ), ಜಾತಿ ಪ್ರಮಾಣ ಪತ್ರ, ಇತ್ಯಾದಿ ಪ್ರಮುಖ ದಾಖಲೆಗಳನ್ನು(ಇದ್ದರೆ ಮಾತ್ರ) ನಕಲು ಪ್ರತಿಗಳಾಗಿ ಸಲ್ಲಿಸಬೇಕು. ಅರ್ಜಿಯನ್ನು ಅಭ್ಯರ್ಥಿಯು ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಸಹಿತ ಕಳುಹಿಸಬಹುದು.

ಆಯ್ಕೆ ವಿಧಾನ, ವೇತನ: ಅಭ್ಯರ್ಥಿಯ ಆಯ್ಕೆಯು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಮಾನದಂಡದ ಪ್ರಕಾರವೇ ನಡೆಯಲಿದೆ. ಹೊಸದಾಗಿ ಆಯ್ಕೆಯಾದ ಪೌರಕಾರ್ಮಿಕರಿಗೆ ತಿಂಗಳಿಗೆ 17,000 ರುಪಾಯಿಂದ 28,950 ರುಪಾಯಿ ವೇತನ ದೊರೆಯಲಿದೆ.

ಆಫ್‌ಲೈನ್‌ ಅರ್ಜಿ ಸಲ್ಲಿಕೆ: ಆಫ್‌ಲೈನ್‌ ಅರ್ಜಿ ಸಲ್ಲಿಸಲು ವಿಳಾಸ ನೀಡಲಾಗಿದ್ದು, ಅದು ಇಂತಿದೆ: ಸಹಾಯಕ ಕಾರ್ಯನಿರ್ವಾಹ ಎಂಜಿನಿಯರ್‌ (ಘನತ್ಯಾಜ್ಯ ನಿರ್ವಹಣೆ), ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು

*ಅರ್ಜಿ ಸಲ್ಲಿಕೆಗೆ ಜನವರಿ 30ರಂದು ಕೊನೆಯ ದಿನ

*ಬಿಬಿಎಂಪಿ ನಿಯಮಾನುಸಾರ ನೇಮಕಾತಿ

* ಹೆಚ್ಚಿನ ಮಾಹಿತಿಗೆ https://site.bbmp.gov.in/Recruitment.html

ಎನ್‌ಐಎಯಲ್ಲಿ ವಿವಿಧ ಹುದ್ದೆ: ರಾಷ್ಟ್ರೀಯ ತನಿಖಾ ಸಂಸ್ಥೆಯು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಅಧಿಸೂಚನೆಯನ್ನು ಹೊರಡಿಸಲಾಗಿದೆ. ನೇಮಕಾತಿ ಮಾಹಿತಿಗಳನ್ನು ಕೆಳಗಡೆ ನೀಡಲಾಗಿದೆ.

380 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ವಿಗ್ಗಿ: ಸಂಸ್ಥೆಯ ಸಿಇಒ ಬರೆದ ಭಾವುಕ ಪತ್ರ ಇಲ್ಲಿದೆ

ಹುದ್ದೆಗಳ ವಿವರ ಹೀಗಿದೆ: ಹುದ್ದೆಗಳ ನಿರ್ದಿಷ್ಟಸಂಖ್ಯೆಗಳ ಕುರಿತು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸ್ಪೋಟಕ ತಜ್ಞ ಹಾಗೂ ಸೈಬರ್‌ ಫೆäರೆನ್ಸಿಕ್‌ ಎಕ್ಸಾಮಿನರ್‌, ಫಿಂಗರ್‌ಪ್ರಿಂಟ್‌ ಎಕ್ಸ್‌ಪರ್ಚ್‌ ಹಾಗೂ ಅಪರಾಧ ದೃಶ್ಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಯು ರಸಾಯನಶಾಸ್ತ್ರದಲ್ಲಿ ಬಿಎಸ್ಸಿ ಅಥವಾ ಎಂಎಸ್ಸಿ/ಸೈಬರ್‌ ಫೆäರೆನ್ಸಿಕ್‌ನಲ್ಲಿ ಎಂಜಿನಿಯರಿಂಗ್‌, ಫಿಂಗರ್‌ ಫೆäರೆನ್ಸಿಕ್‌ನಲ್ಲಿ ಎಂಎಸ್ಸಿ/ಬಿಎಸ್ಸಿ, ಬಯೋಟೆಕ್ನಾಲಜಿ ಹಾಗೂ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕಿದೆ.

ಮೈಕ್ರೋಸಾಫ್ಟ್​ನಲ್ಲಿ 21 ವರ್ಷ ಕೆಲಸ ಮಾಡಿದ್ದ ಉದ್ಯೋಗಿಯ ವಜಾ, ಭಾವನಾತ್ಮಕ ಪತ್ರ ವೈರಲ್

ಆಯ್ಕೆ ವಿಧಾನ, ವೇತನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕವಾಗಿ 44,900 ರುಪಾಯಿಯಿಂದ 1,77,500 ರುಪಾಯಿ ವೇತನ ದೊರೆಯಲಿದೆ. ಅರ್ಜಿ ಸಲ್ಲಿಸಲು ಮಾಚ್‌ರ್‍ 10ರಂದು ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ https://www.nia.gov.in/recruitment-notice.htm ಭೇಟಿ ನೀಡಿ.

Follow Us:
Download App:
  • android
  • ios