27 ಯೋಜನೆಗಳ ಪೈಕಿ ₹100 ಕೋಟಿ ಮೇಲ್ಪಟ್ಟ ಎರಡು ಯೋಜನೆಗಳು ಮಗಾ ಪ್ರಾಜೆಕ್ಟ್‌ಗಳಾಗಿವೆ. ಒಂದು ಹಂಪಿಯಲ್ಲಿ ತಾಜ್ ಸಮೂಹ ಸಂಸ್ಥೆ 99 ಹಾಸಿಗೆ ಸಾಮರ್ಥ್ಯದ ಬೃಹತ್ ಹೋಟೆಲ್ ನಿರ್ಮಿಸಲಿದೆ. ಮತ್ತೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಸಜ್ಜಿತ ಏರ್ ಡೋಮ್ ನಿರ್ಮಾಣ ಮಾಡಲಾಗುತ್ತದೆ: ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ 

ಬೆಂಗಳೂರು(ಫೆ.05): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಸಜ್ಜಿತ ಏರ್‌ಡೋಂ, ಹಂಪಿಯಲ್ಲಿ ತಾಜ್ ಹೋಟೆಲ್ ಸಮೂಹದ ಬೃಹತ್ ಹೋಟೆಲ್ ನಿರ್ಮಾಣವೂ ಸೇರಿ 793 ಕೋಟಿ ಮೊತ್ತದ 27 ಖಾಸಗಿ ಹೂಡಿಕೆ ಯೋಜನೆಗಳಿಗೆ ಪ್ರವಾಸೋದ್ಯಮ ಇಲಾಖೆಯ ಉನ್ನತಮಟ್ಟದ ಸಮಿತಿ ಮಂಗಳವಾರ ಒಪ್ಪಿಗೆ ನೀಡಿದೆ.

ವಿಧಾನಸೌಧದಲ್ಲಿ ನಡೆದ ಈ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಪ್ರವಾಸೋದ್ಯಮ ನೀತಿ 2020-26ರ ಅನ್ವಯ ಈ ಎಲ್ಲಾ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. 28 ಅರ್ಜಿಗಳು ಸಲ್ಲಿಕೆಯಾಗಿದ್ದು 27ಕ್ಕೆ ಅನುಮತಿ ನೀಡಲಾಗಿದೆ. ಒಪ್ಪಿಗೆ ನೀಡಿರುವ ಎಲ್ಲವೂ ಖಾಸಗಿ ಹೂಡಿಕೆಯಾಗಿದ್ದು, 4000 ನೇರ ಉದ್ಯೋಗಾವಕಾಶ ಸೃಷ್ಟಿ ನಿರೀಕ್ಷಿಸಲಾಗಿದೆ ಎಂದರು.

ವಾರಕ್ಕೆ 70 ತಾಸು ದುಡಿಮೆ ಪ್ರಸ್ತಾವ ಇಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

27 ಯೋಜನೆಗಳ ಪೈಕಿ ₹100 ಕೋಟಿ ಮೇಲ್ಪಟ್ಟ ಎರಡು ಯೋಜನೆಗಳು ಮಗಾ ಪ್ರಾಜೆಕ್ಟ್‌ಗಳಾಗಿವೆ. ಒಂದು ಹಂಪಿಯಲ್ಲಿ ತಾಜ್ ಸಮೂಹ ಸಂಸ್ಥೆ 99 ಹಾಸಿಗೆ ಸಾಮರ್ಥ್ಯದ ಬೃಹತ್ ಹೋಟೆಲ್ ನಿರ್ಮಿಸಲಿದೆ. ಮತ್ತೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಸಜ್ಜಿತ ಏರ್ ಡೋಮ್ ನಿರ್ಮಾಣ ಮಾಡಲಾಗುತ್ತದೆ. ಸಭೆ, ಸಮ್ಮೇಳನ ಇತ್ಯಾದಿ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣಗೊಳ್ಳಲಿದೆ ಎಂದರು.

ಉಳಿದಂತೆ 12 ಪ್ರೀಮಿಯಂ ಹೋಟೆಲ್‌ಗಳು, 13 ಸಾಮಾನ್ಯ ದರ್ಜೆ ಹೋಟೆಲ್, 1 ರಸ್ತೆ ಬದಿಯ ಸೌಕರ್ಯ, 1 ವೆಲೈಸ್ ಸೆಂಟರ್‌ಸೇರಿದೆ. ಸಭೆಯಲ್ಲಿ ಸಬ್ಸಿಡಿ ವಿಚಾರವನ್ನೂ ಇತ್ಯರ್ಥ ಪಡಿಸಲಾಗಿದೆ. ಹೊಸ ನೀತಿಗೆ ಅನುಗುಣವಾಗಿಯೇ ಸಬ್ಸಿಡಿ ನಿಗದಿಪಡಿಸಲಾಗಿದೆ. ಕನಿಷ್ಠ ಹೂಡಿಕೆ 5 ಕೋಟಿ ಇದ್ದು, ಯೋಜ ನೆಗಳಿಗೆ ಕನಿಷ್ಠ ಶೇ.15, ಗರಿಷ್ಠ 2 ಕೋಟಿ ಸಬ್ಸಿಡಿ ನೀಡಲಾಗುತ್ತದೆ. 10 ಕೋಟಿ ಮೇಲ್ಪಟ್ಟ ಹೂಡಿಕೆಗೆ ಕನಿಷ್ಠ ಶೇ.15 ಅಥವಾ ಕ5 ಕೋಟಿ ವರೆಗೆ ಸಬ್ಸಿಡಿ ನೀಡಲಾಗುತ್ತದೆ ಎಂದು ವಿವರಿಸಿದರು.

ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ

ಹಂಪಿ ಉತ್ಸವ ಧ್ವನಿ-ಬೆಳಕಿಗೆ ಹಣಕ್ಕಾಗಿ ಪತ್ರ

ಹೊಸಪೇಟೆ: ಹಂಪಿ ಉತ್ಸವದ ಜೀವಾಳವಾಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಈ ಬಾರಿಯ ಉತ್ಸವದಲ್ಲೂ ನಡೆಯಲಿದ್ದು, ಅನುದಾನ ಕೋರಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ವಿಜಯನಗರ ಜಿಲ್ಲಾಡಳಿತ ಪತ್ರ ಬರೆದಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ಕಚೇರಿಯಿಂದ ಕೇಂದ್ರಕ್ಕೆ ರವಾನೆಯಾಗಿದೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆ, ವಿಜಯ ನಗರ ನೆಲದ ಕಥನವನ್ನು ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಕಟ್ಟಿಕೊಡುತ್ತದೆ. ಹಂಪಿ ಗಜಶಾಲೆ ಆವರಣದಲ್ಲಿ 12 ಕಿರು ವೇದಿಕೆಗಳನ್ನು ನಿರ್ಮಾಣ ಮಾಡಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ 110 ಕಲಾವಿದರು ಪಾಲ್ಗೊಳಲಿದ್ದಾರೆ. ಜೊತೆಗೆ ಒಂದು ಆನೆ ಭಾಗಿಯಾಗಲಿದೆ. ತಂತ್ರಜ್ಞರು ಇತರ ಸಿಬ್ಬಂದಿ ಸೇರಿ ಒಟ್ಟು 130 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಂಪಿ ಉತ್ಸವ ಫೆಬ್ರವರಿ 28, ಮಾರ್ಚ್ 1,2 ರಂದು 3 ದಿನ ನಡೆಯಲಿದೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಫೆಬ್ರವರಿ 28ರಿಂದ ಮಾರ್ಚ್ 6ರ ವರೆಗೆ ಏಳು ದಿನಗಳವರೆಗೆ ನಡೆಯಲಿದೆ.