PSI Exam Scam: ಪಿಎಸೈ ಪರೀಕ್ಷೆ ಅಕ್ರಮ ಶಂಕೆ, ಯಾದಗಿರಿ ವ್ಯಕ್ತಿ ಸೂತ್ರಧಾರಿಯೇ?

*  ಸರ್ಕಾರಿ ನೌಕರಿ ಕೊಡಿಸುವ ಜಾಲ
*  ತಲಾ ಒಂದು ಹುದ್ದೆ 30 ಲಕ್ಷ ರು.ಗೆ ಮಾರಾಟದ ಗುಸುಗುಸು
*  ಮರುಮೌಲ್ಯಮಾಪನಕ್ಕೆ ‘ಇನ್ ಸರ್ವೀಸ್’ ಅಭ್ಯರ್ಥಿಗಳ ಮನವಿ
 

Allegation of PSI Exam Scam in Karnataka grg

ಆನಂದ್ ಎಂ. ಸೌದಿ

ಯಾದಗಿರಿ(ಜ.28): ಪೊಲೀಸ್ ಸಬ್‌ಇನ್ಸಪೆಕ್ಟರ್ (PSI Civil) ನೇಮಕಾತಿ ಪರೀಕ್ಷೆಯಲ್ಲಿ(Exam) ಭಾರಿ ಅಕ್ರಮ ನಡೆದಿದೆ ಎಂಬ ಆರೋಪಗಳು ಇಲ್ಲೀಗ ಪ್ರತಿಧ್ವನಿಸುತ್ತಿವೆ. ಜ.19 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಯಾದ ನಂತರ ಇಂತಹ ಅನುಮಾನಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ರಾಜ್ಯದಾದ್ಯಂತ 545 ಹುದ್ದೆಗಳಿಗಾಗಿ ಕಳೆದ ವರ್ಷ (2021) ಅಕ್ಟೋಬರ್ 4 ರಂದು ಪರೀಕ್ಷೆಯಲ್ಲಿ ಅಕ್ರಮದ ಶಂಕೆ ಮೂಡಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆ ವ್ಯಕ್ತಿ ಭಾಗಿಯಾಗಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಆಯ್ಕೆ ಪಟ್ಟಿ ಬಿಡುಗಡೆ ನಂತರ ಪರೀಕ್ಷೆ-1 ಮತ್ತು ಪರೀಕ್ಷೆ-2 ರಲ್ಲಿ ಕೆಲವೆಡೆಯ ಅಭ್ಯರ್ಥಿಗಳು(Candidates) ಪಡೆದುಕೊಂಡ ಅಂಕಗಳು ಅಕ್ರಮದ(Scam) ವಾಸನೆಗೆ ಕಾರಣವಾಗಿದೆ. ಅದರಲ್ಲೂ, ಕಲಬುರಗಿ(Kalaburagi) ಜಿಲ್ಲೆಯ ಅಫಜಲ್ಪೂರ ತಾಲೂಕುವೊಂದರಲ್ಲೇ ಹೆಚ್ಚಿನ ಸಂಖ್ಯೆಯ (43ಕ್ಕೂ ಹೆಚ್ಚು ಎನ್ನಲಾಗಿದೆ) ಅಭ್ಯರ್ಥಿಗಳು ಆಯ್ಕೆಯಾಗಿರುವುದು ಅನುಮಾನ ಮೂಡಿಸಿದೆ ಎಂದು ಹೆಸರೇಳಲಿಚ್ಛಿಸದ ನೊಂದ ಅಭ್ಯರ್ಥಿಯೊಬ್ಬರು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿದ್ದಾರೆ. ಆಯ್ದ ಒಂದಿಷ್ಟು ಅಭ್ಯರ್ಥಿಗಳಿಗೆ ಈ ನೌಕರಿ ಕೊಡಿಸಲೆಂದೇ ಜಾಲವೊಂದು ಕೆಲಸ ಮಾಡಿದೆ. ಪ್ರತಿ ಹುದ್ದೆಗೆ ಸುಮಾರು 30 ಲಕ್ಷ ರು.ಗಳವರೆಗೆ ಹಣದ ವ್ಯವಹಾರ ನಡೆದಿರಬಹುದು ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.

Allegation of PSI Exam Scam in Karnataka grg

KAS Recruitment: 2011ರ ಕೆಎಎಸ್‌ ನೇಮಕಾತಿ ರಕ್ಷಣೆಗೆ ಸಂಪುಟ ನಿರ್ಧಾರ: ಮಾಧುಸ್ವಾಮಿ

ಯಾದಗಿರಿ(Yadgir) ಜಿಲ್ಲೆಯವರೊಬ್ಬರು ಇಂತಹುದ್ದೊಂದು ಜಾಲದ ಸೂತ್ರಧಾರಿಯಾಗಿದ್ದಾರೆ. ಈ ಹಿಂದೆಯೂ ಪೊಲೀಸ್ ಕಾನ್ಸಟೇಬಲ್ ಹಾಗೂ ಎಫ್.ಡಿ.ಸಿ./ಎಸ್.ಡಿ.ಸಿ. ಪರೀಕ್ಷೆಗಳಲ್ಲಿ ಇಂತಹ ಅಕ್ರಮ ಕೂಟ ರಚಿಸಿದ್ದರು ಎಂಬ ಮಾತುಗಳು ಖುದ್ದು ಪೊಲೀಸ್(Police) ವಲಯದಲ್ಲೇ ಕೇಳಿ ಬರುತ್ತಿವೆ. ಆಯ್ಕೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಬಹುದು ಎಂದು ಬಹುವಾಗಿ ನಂಬಿದ್ದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಭಾರೀ ನಿರಾಸೆಯಾಗಿದೆ. ಯುಪಿಎಸ್ಸಿ ಮಾದರಿಯಲ್ಲಿ ತೆಗೆಯಲಾದ ಭಾರಿ ಜಟಿಲ ಪ್ರಶ್ನೆಪತ್ರಿಕೆಯೆಂದೇ ವಿಶ್ಲೇಷಿಸಲಾಗಿತ್ತು. ಆದರೆ, ಪರೀಕ್ಷೆ-1 ಹಾಗೂ ಪರೀಕ್ಷೆ-2 ರಲ್ಲಿ ಅನುಮಾನಾಸ್ಪದರು ಗಳಿಸಿದ ಅಂಕಗಳ ತಾಳೆ ಮಾಡಿದಾಗ ಈ ಶಂಕೆ ಮೂಡುತ್ತಿದೆ ಅನ್ನೋದು ನೊಂದ ಅಭ್ಯರ್ಥಿಗಳ ಮಾತು.

ಇನ್ ಸರ್ವೀಸ್ ಅಭ್ಯರ್ಥಿಗಳ ಅಳಲು:

ಈ ಮಧ್ಯೆ ಸೇವಾ ನಿರತ (In Service) ಪ್ರತಿಭಾವಂತ ಅಭ್ಯರ್ಥಿಗಳೂ ಸಹ ಸಂಬಂಽತ ಮೇಲಧಿಕಾರಿಗಳಿಗೆ (ಎಡಿಜಿಪಿ-ನೇಮಕಾತಿ, ತರಬೇತಿ) ಮನವಿ ಪತ್ರ ಸಲ್ಲಿಸಿದ್ದು, ತಮ್ಮ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಮಾಡಬೇಕೆಂದು ಕೋರಿದ್ದಾರೆ. ಪರೀಕ್ಷೆಗಳನ್ನು ಚೆನ್ನಾಗಿ ಬರೆದಿದ್ದರೂ ಆಯ್ಕೆಯಾಗದಿರುವುದು ನೋವು ಮೂಡಿಸಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ವಾಟ್ಸಾಪ್(WhatsApp) ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ(Social Media) ನೇಮಕಾತಿ(Recruitment) ಅಕ್ರಮದ ಆರೋಪಗಳ ಕುರಿತು ಸಂದೇಶಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಕೆಲವು ಕೋಚಿಂಗ್ ಸೆಂಟರ್‌ಗಳ ಪಾತ್ರವೂ ಇದರಲ್ಲಿದ್ದು, ಬ್ಲೂಟೂತ್ ಬಳಸಿಯೋ ಅಥವಾ ಒಂದೇ ಕೋಣೆಯಲ್ಲಿ ಆಯ್ದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ಕಾರ್ಯ ನಡೆದಿರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ.

Jobs Recruitment ಕರ್ನಾಟಕದಲ್ಲಿ ಪಶು ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಸಂಪುಟ ಅನುಮೋದನೆ

ಟವರ್ ಲೊಕೇಶನ್, ಕಾಲ್ ರಿಕಾರ್ಡ್ ಡೀಟೇಲ್ಸ್ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ತಿಂಗಳುಗಳ ಕಾಲದ ವಾಟ್ಸಾಪ್ ಚಾಟ್, ಮುದ್ರಿತ ಸಂಭಾಷಣೆಗಳ ಬಗ್ಗೆ ವಿಸ್ಕೃತ ತನಿಖೆ ನಡೆಸಿದರೆ ಸತ್ಯ ಹೊರಬರಬಹುದು ಅನ್ನೋದು ಹುದ್ದೆ ವಂಚಿತ, ಪ್ರತಿಭಾವಂತ ಅಭ್ಯರ್ಥಿಗಳ ಅಂಬೋಣ.

ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ: ಸಿಎಂಗೆ ಶಾಸಕ ರಾಜೂಗೌಡ ಪತ್ರ

ಯಾದಗಿರಿ: ಪೊಲೀಸ್ ಇಲಾಖೆ(Police Department) ಹೊರಡಿಸಿರುವ 542 ಸಬ್‌ಇನ್ಸಪೆಕ್ಟರ್‌ಗಳ (ಪಿಎಸೈ ಸಿವಿಲ್) ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ(Kalyana-Karnataka) (371ಜೆ) ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಈ ಕೂಡಲೇ ಸರಿಪಡಿಸುವಂತೆ ಮಾಜಿ ಸಚಿವ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಹಾಗೂ ಸುರಪುರದ ಶಾಸಕ ನರಸಿಂಹ ನಾಯಕ (ರಾಜೂಗೌಡ)(Narasimha Naik) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. 
 

Latest Videos
Follow Us:
Download App:
  • android
  • ios