AHF Karnataka Recruitment 2022: ಬರೋಬ್ಬರಿ 1419 ಹುದ್ದೆಗಳಿಗೆ ಅರ್ಜಿ ಆಹ್ವಾನ
ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಜನವರಿ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನವನ್ನು ಸದ್ಯದಲ್ಲೇ ಪ್ರಕಟಗೊಳ್ಳಲಿದೆ.
ಬೆಂಗಳೂರು(ಜ.21): ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆ (Animal Husbandry and Fisheries Department) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 1419 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ahf.karnataka.gov.in ಗೆ ಭೇಟಿ ನೀಡಬಹುದು.
ಒಟ್ಟು 1419 ಹುದ್ದೆಗಳ ಮಾಹಿತಿ:
ಮೀನುಗಾರಿಕೆ ಸಹಾಯಕ ನಿರ್ದೇಶಕರು - 188 ಹುದ್ದೆಗಳು
ಪ್ರಥಮ ದರ್ಜೆ ಸಹಾಯಕರು - 95 ಹುದ್ದೆಗಳು
ಶೀಘ್ರಲಿಪಿಗಾರ - 11 ಹುದ್ದೆಗಳು
ದ್ವಿತೀಯ ದರ್ಜೆ ಸಹಾಯಕರು - 93 ಹುದ್ದೆಗಳು
ಡೇಟಾ ಎಂಟ್ರಿ ಅಸಿಸ್ಟೆಂಟ್ - 48 ಹುದ್ದೆಗಳು
ಚಾಲಕರು - 41 ಹುದ್ದೆಗಳು
ಮೀನುಗಾರಿಕೆ ಫೀಲ್ಡ್ ಮ್ಯಾನ್ - 475 ಹುದ್ದೆಗಳು
ಕ್ಲರ್ಕ್ - 2 ಹುದ್ದೆಗಳು
ಸೇವಕ - 187 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ: ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತರು ಹುದ್ದೆಗನುಸಾರವಾಗಿ ವಿದ್ಯಾಬ್ಯಾಸ ಮಾಡಿರಬೇಕು.
ಮೀನುಗಾರಿಕೆ ಸಹಾಯಕ ನಿರ್ದೇಶಕರು ಹುದ್ದೆಗಳಿಗೆ ಮೀನುಗಾರಿಕೆ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು.
ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
ಶೀಘ್ರಲಿಪಿಗಾರ ಹುದ್ದೆಗಳಿಗೆ ಹಿರಿಯ ಹಾಗೂ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ ದ್ವಿತೀಯ ಪಿಯುಸಿ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
ಡೇಟಾ ಎಂಟ್ರಿ ಅಸಿಸ್ಟೆಂಟ್ ಹುದ್ದೆಗಳಿಗೆ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣರಾಗಿರಬೇಕು.
ಚಾಲಕರು ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಮೀನುಗಾರಿಕೆ ಫೀಲ್ಡ್ ಮ್ಯಾನ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
ಕ್ಲರ್ಕ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಶೈಕ್ಷಣಿಕ ಅರ್ಹತೆ ಜೊತೆಗೆ ಮಾಂಸಹಾರಿ ಆಹಾರ ತಯಾರಿಕಾ ಜ್ಞಾನ ಇರಬೇಕು.
ಸೇವಕ ಹುದ್ದೆಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ದೇಶದ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ, ಮಹಿಳೆಯರೇ ಹೆಚ್ಚು!
ವಯೋಮಿತಿ: ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸುನಿಯಮಾನುಸಾರ ವಯೋಮಿತಿಯನ್ನು ಹೊಂದಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ,ಸಂದರ್ಶನ ಮತ್ತು ಮುಂಬಡ್ತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಕರ್ನಾಟಕದಲ್ಲಿ ಉದ್ಯೋಗ ದೊರೆಯಲಿದೆ.
Prasar Bharati Recruitment 2022: ಪ್ರಸಾರ ಭಾರತಿಯಲ್ಲಿನ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ವೇತನ ವಿವರ: ಪಶುಸಂಗೋಪನೆ ಮತ್ತು ಮೀನುಗಾರಿಗೆ ಇಲಾಖೆಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಹುದ್ದೆಗೆ ಅನುಸಾರ ವೇತನ ದೊರೆಯಲಿದೆ.
ಮೀನುಗಾರಿಕೆ ಸಹಾಯಕ ನಿರ್ದೇಶಕರು - ತಿಂಗಳಿಗೆ 40,900/- ರಿಂದ 78,200/-ರೂ
ಪ್ರಥಮ ದರ್ಜೆ ಸಹಾಯಕರು - ತಿಂಗಳಿಗೆ 27,650/- ರಿಂದ 52,650/-ರೂ
ಶೀಘ್ರಲಿಪಿಗಾರ - ತಿಂಗಳಿಗೆ 27,650/- ರಿಂದ 52,650-ರೂ
ದ್ವಿತೀಯ ದರ್ಜೆ ಸಹಾಯಕರು - ತಿಂಗಳಿಗೆ 21,400/- ರಿಂದ 42,000/-ರೂ
ಡೇಟಾ ಎಂಟ್ರಿ ಅಸಿಸ್ಟೆಂಟ್ - ತಿಂಗಳಿಗೆ 21,400/- ರಿಂದ 42,000/-ರೂ
ಚಾಲಕರು - ತಿಂಗಳಿಗೆ 21,400/- ರಿಂದ 42,000/-ರೂ
ಮೀನುಗಾರಿಕೆ ಫೀಲ್ಡ್ ಮ್ಯಾನ್ - ತಿಂಗಳಿಗೆ 18,600/- ರಿಂದ 32,600/-ರೂ
ಕ್ಲರ್ಕ್ - ತಿಂಗಳಿಗೆ 18,600/- ರಿಂದ 32,600/-ರೂ
ಸೇವಕ - ತಿಂಗಳಿಗೆ 17,000/- ರಿಂದ 28,950/-ರೂ