KSRTCಯಲ್ಲಿ 3745 ಹುದ್ದೆ ನೇಮಕಾತಿ: ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿ 3745 ಹುದ್ದೆಗಳ ನೇಮಕಾತಿ ದಿನಾಂಕವನ್ನ ವಿಸ್ತರಣೆ ಆದೇಶ ಹೊರಡಿಸಿದೆ. ಪರಿಷ್ಕೃತ ದಿನಾಂಕದ ವಿವರ ಈ ಕೆಳಗಿನಂತಿದೆ. 

745 driver and Conductor post KSRTC Application Date extended to March 30

ಬೆಂಗಳೂರು, (ಮಾ.18):3745 ಚಾಲಕ ಮತ್ತು ನಿರ್ವಾಹ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ದಿನಾಂಕವನ್ನು ಕೆಎಸ್‌ಆರ್‌ಟಿಸಿ ವಿಸ್ತರಣೆ ಮಾಡಿದೆ.

20 ಮಾರ್ಚ್ 2020 ಇದ್ದ  ಅರ್ಜಿ ಸಲ್ಲಿಕೆ ದಿನಾಂಕವನ್ನ 30/03/2020ರವರೆಗೆ ವಿಸ್ತರಣೆ ಮಾಡಲಾಗಿದೆ. ಇನ್ನು ಅರ್ಜಿ ಶುಲ್ಕ ಪಾವತಿಸಲು 02-04-2020ರವರೆಗೆ ಅವಕಾಶ ನೀಡಲಾಗಿದೆ.

KSRTC ನೇಮಕಾತಿ: 3745 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಈ ಮೂಲಕ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇನ್ನೂ ಯಾರು ಅರ್ಜಿ ಸಲ್ಲಿಸಿಲ್ಲವೋ ಅವರಿಗೆ ಇದೊಂದು ಅವಕಾಶ ಇದ್ದು, ಕೂಡಲೇ ಅರ್ಜಿ ಹಾಕಿ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಖಾಲಿ ಇರುವ ಚಾಲಕ ಮತ್ತು ಚಾಲಕ ಕಮ್ ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 

ವಿದ್ಯಾರ್ಹತೆ& ಇತರೆ ಅರ್ಹತೆಗಳು
* SSLC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
* ಭಾರಿ ಸರಕು ಸಾಗಾಣಿಕೆ ವಾಹನ ಚಾಲನಾ ಪರವಾನಗಿ ಹೊಂದಿ ಕನಿಷ್ಠ ಎರಡು ವರ್ಷಗಳಾಗಿರಬೇಕು. 
* ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಗಿ ಹಾಗೂ ಕರ್ನಾಟಕ ಪಿ. ಎಸ್. ವಿ ಬ್ಯಾಡ್ಜ್ ಹೊಂದಿರಬೇಕು.
* ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಮಾತ್ರ ಚಾಲ್ತಿಯಲ್ಲಿರುವ ನಿರ್ವಾಹಕ ಪರವಾನಗಿ ಮತ್ತು ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕು.

ವಯೋಮಿತಿ: 
* ಸಾಮಾನ್ಯ ವರ್ಗ-35 ವರ್ಷಗಳು
* 2A/2B/3A/3B-38 ವರ್ಷ
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ 1-40 ವರ್ಷಗಳು

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 500 ರೂ., ST/SC /ಪ್ರವರ್ಗ-1/ಮಾಜಿ ಸೈನಿಕರಿಗೆ 250 ರೂ.ಗಳ ಶುಲ್ಕ ನಿಗದಿಪಡಿಸಲಾಗಿದೆ.

ವೇತನ ಶ್ರೇಣಿ: ತರಬೇತಿ ಸಮಯದಲ್ಲಿ ಚಾಲಕ ಹುದ್ದೆಗೆ ಮಾಸಿಕವಾಗಿ 10,000 ಹಾಗೂ ಚಾಲಕ ಕಂ-ನಿರ್ವಹಕ ಹುದ್ದೆಗೆ 9,100. ಇನ್ನು 2 ವರ್ಷ ತರಬೇತಿ ಪೂರ್ಣಗೊಳಿಸಿದ ನಂತರ ಇಲಾಖೆ ಅನುಸಾರವಾಗಿ ವೇತನ ದೊರೆಯಲಿದೆ.

.ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios