ಬೆಂಗಳೂರು, [ಅ.10]: ರಾಜ್ಯದಲ್ಲಿ 2800 ಪೊಲೀಸರ ನೇಮಕಾತಿಗೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು,  2 ತಿಂಗಳ ಗಡುವು ನೀಡಿದೆ. 

ಹೈಕೋರ್ಟ್ ದಾಖಲಿಸಿದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

16000 ಪೊಲೀಸ್ ಪೇದೆ, 630 PSI ನೇಮಕಾತಿ: ಗೃಹ ಸಚಿವರ ಮಹತ್ವದ ಘೋಷಣೆ

ಡಿವೈಎಸ್ಪಿ, ಎಎಸ್ಐ ಹಾಗೂ ಮುಖ್ಯ ಪೇದೆಗಳ ಶ್ರೇಣಿಯ ಒಟ್ಟು 2868 ಹುದ್ದೆಗಳ ಭರ್ತಿ ಮಾಡುವಂತೆ ಸರ್ಕಾರಕ್ಕೆ ಎರಡು ತಿಂಗಳ ಗಡುವು ನೀಡಲಾಗಿದೆ.

ಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರ ಎರಡು ತಿಂಗಳೊಳಗೆ ಒಟ್ಟು 2868 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕಿದೆ. ಇದ್ರಿಂದ ಪೊಲೀಸ್ ಆಗುವ ಆಸಕ್ತ ಅಭ್ಯರ್ಥಿಗಳಿಗೆ ಇದೊಂದು ಸಂತಸ ಸಂಗತಿ.

ಜಾಬ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತೊಂದೆಡೆ ಹುದ್ದೆಗಳಿಗೆ ಮುಂಬಡ್ತಿ ಮೂಲಕ ಭರ್ತಿ ಮಾಡಿಕೊಳ್ಳಲಿದ್ದು, ಅವರ ಅರ್ಹತೆ, ಸೇವಾ ಹಿರಿತನ ಪರಿಶೀಲಿಸಲು ಕಾಲಾವಕಾಶ ನೀಡಬೇಕೆಂದು ಸರ್ಕಾರಿ ವಕೀಲ ಬಿ.ವಿ. ಕೃಷ್ಣ, ಮನವಿ ಮಾಡಿದ್ದಾರೆ.

ಎರಡು ವರ್ಷದೊಳಗೆ 16,000 ಪೊಲೀಸ್ ಪೇದೆಗಳು ಹಾಗೂ 630 ಪಿಎಸ್ಐಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಇತ್ತೀಚೆಗೆ ಕಲಬುರಗಿಯಲ್ಲಿ ನಡೆದಿದ್ದ ಪಿಎಸ್ಐ ಹಾಗೂ ಆರ್​​​ಎಸ್ಐ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ 6,000 ಪೇದೆಗಳ ಭರ್ತಿ ಚಾಲನೆಯಲ್ಲಿದೆ. ಈ ಕುರಿತು ಹೈಕೋರ್ಟ್​ಗೂ ಮಾಹಿತಿ ನಿಡಲಾಗಿದೆ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.