ತಾಲೂಕು ಮಟ್ಟದ 176 ಕೋಚ್‌ ಹುದ್ದೆಗಳನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತಾಲೂಕಿಗೆ ಒಬ್ಬರಂತೆ 235 ಕೋಚ್‌ ಹುದ್ದೆಗಳ ಸೃಜನೆಗೆ ಸಚಿವರ ನಿರ್ದೇಶನದಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.  ಹಲವು ಸುತ್ತಿನ ಸಭೆ, ಚರ್ಚೆಗಳು ನಡೆದ ಬಳಿಕ  176 ಕೋಚ್‌ ಕಂ. ಸಂಯೋಜಕರ ಹುದ್ದೆಗಳನ್ನು ಮಂಜೂರಾಗಿದೆ.

ಮಂಡ್ಯ (ಅ.20): ತಾಲೂಕು ಮಟ್ಟದ 176 ಕೋಚ್‌ ಹುದ್ದೆಗಳನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು. ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ತರಬೇತಿ ಸಿಗಬೇಕೆಂಬ ಉದ್ದೇಶದಿಂದ ಪ್ರತಿ ತಾಲೂಕಿಗೆ ಒಬ್ಬರಂತೆ 235 ಕೋಚ್‌ ಹುದ್ದೆಗಳ ಸೃಜನೆಗೆ ಸಚಿವರ ನಿರ್ದೇಶನದಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಲವು ಸುತ್ತಿನ ಸಭೆ, ಚರ್ಚೆಗಳು ನಡೆದ ಬಳಿಕ ಆರ್ಥಿಕ ಇಲಾಖೆ ಹಳೇ ತಾಲೂಕುಗಳನ್ನು ಪರಿಗಣಿಸಿ 176 ಕೋಚ್‌ ಕಂ. ಸಂಯೋಜಕರ ಹುದ್ದೆಗಳನ್ನು ಮಂಜೂರು ಮಾಡಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ಕ್ರೀಡಾ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತಾಲೂಕು ಮಟ್ಟದ ಹುದ್ದೆಗಳನ್ನು ಸೃಜಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಸರ್ಕಾರ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ವಿಶೇಷ ಫ್ರೋತ್ಸಾಹ ನೀಡುತ್ತಿದೆ. ಗ್ರಾಮೀಣ ಪ್ರತಿಭೆಗಳಿಗೂ ಸೂಕ್ತ ತರಬೇತಿ ಹಾಗೂ ಹೆಚ್ಚಿನ ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ತಾಲೂಕು ಮಟ್ಟದ ಕೋಚ್‌ ಗಳನ್ನು ನೇಮಕ ಮಾಡಲು ತೀರ್ಮಾನಿಸಿದ್ದು, 176 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

BESCOM RECRUITMENT 2022: ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ..? 400 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆಗಳಿಗಾಗಿ 12 ತರಬೇತುದಾರರ ಹುದ್ದೆಗಳನ್ನು ಸೃಜಿಸಲಾಗಿದೆ. ಸದ್ಯ ಮಂಜೂರಾಗಿರುವ 176 ಹುದ್ದೆಗಳನ್ನು ಹಳೆಯ ತಾಲೂಕುಗಳನ್ನು ಮಾತ್ರ ಪರಿಗಣಿಸಿ ರಚಿಸಲಾಗಿದೆ. ಈ ಹುದ್ದೆಗಳ ವೇತನ ಶ್ರೇಣಿಯು ಮಾಸಿಕವಾಗಿ 37,900 ರಿಂದ 70,850 ಇರಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಇನ್ನು ಮಂಜೂರಾಗಿರುವ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದ್ದಾರೆ.

KSP Constable Recruitment 2022: ವಿವಿಧ ಹುದ್ದೆಗಳಿಗೆ ತೃತೀಯ ಲಿಂಗಿಗಳಿಗೂ ಸೇರಿ ನೇಮಕಾತಿ

Scroll to load tweet…