ಕ್ರಿಕೆಟಿಗರು ಶತಕ ಸಿಡಿಸಿ, ವಿಕೆಟ್ ಪಡೆದು ಸಂಭ್ರಮಾಚರಣೆ ಮಾಡೋದು ಸಾಮಾನ್ಯ. ಕೆಲವೊಮ್ಮೆ ಕ್ರಿಕೆಟಿಗರ ಸಂಭ್ರಮ ಗಂಟೆ ಕಳೆದರು ನಿಲ್ಲೋದಿಲ್ಲ. ಆದರೆ ಪಾಕಿಸ್ತಾನ ವೇಗಿ ಹಸನ್ ಆಲಿ ಸಂಭ್ರಮಾಚರಣೆಯನ್ನ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಷ್ಟಕ್ಕೂ ಆಲಿ ಸಂಭ್ರಮಾಚರಣೆ ನಿಲ್ಲಿಸಿದ್ದೇಕೆ? ಇಲ್ಲಿದೆ ವೀಡಿಯೋ.

ಬುಲವಾಯೋ(ಜು.16): ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಗೆಲುವು ದಾಖಲಿಸಿ ಮುನ್ನಡೆ ಸಾಧಿಸಿತ್ತು. ಪಾಕಿಸ್ತಾನ ಭರ್ಜರಿ ಮೇಲುಗೈ ಸಾಧಿಸಿದಾಗ ವೇಗಿ ಹಸನ್ ಆಲಿ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಆದರೆ ಆಲಿ ಸಂಭ್ರಮ ಅರ್ಧಕ್ಕೆ ನಿಲ್ಲಿಸಿದರು.

ಜಿಂಬಾಬ್ವೆ ತಂಡದ ತರ್ಸಾಯ್ ಮಸಕಡ್ಜಾ ವಿಕೆಟ್ ಪಡೆದ ಹಸನ್ ಆಲಿ ಸಂಭ್ರಮಾಚರಣೆಗೆ ಮುಂದಾದರು. ಆದರೆ ಹಸನ್ ಆಲಿ ಮಸಲ್ ಸಮಸ್ಯೆಯಿಂದ ಸಂಭ್ರಮಾಚರಣೆ ಅರ್ಧಕ್ಕೆ ನಿಲ್ಲಿಸಿ ಮೈದಾನದಲ್ಲಿ ಕುಸಿದರು.

Scroll to load tweet…

;

ತಕ್ಷಣವೇ ಪಾಕ್ ಕ್ರಿಕೆಟಿಗರು ನೆರವಿಗೆ ಧಾವಿಸಿದರು. ಶೀಘ್ರದಲ್ಲೇ ಚೇತರಿಸಿಕೊಂಡ ಹಸನ್ ಆಲಿ ಮತ್ತೆ ಬೌಲಿಂಗ್‌ಗೆ ಮರಳಿದ್ದಾರೆ. ಆದರೆ ಹಸನ್ ಆಲಿ ಅರ್ಧಕ್ಕೆ ನಿಲ್ಲಿಸಿದ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.