2 ಏಕದಿನದಲ್ಲಿ ಒಂದೇ ರೀತಿ ಸ್ಕೋರ್: ಅಚ್ಚರಿ

First Published 14, Feb 2018, 8:12 PM IST
Zimbabwe thrash Afghanistan to level series
Highlights

ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಕೇವಲ 179 ರನ್‌ಗಳಿಗೆ ಆಲೌಟ್ ಆಗಿ, 154 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು

ಶಾರ್ಜಾ(ಫೆ.14): ಇಲ್ಲಿ ನಡೆಯುತ್ತಿರುವ ಜಿಂಬಾಬ್ವೆ-ಆಫ್ಘಾನಿಸ್ತಾನ ಏಕದಿನ ಸರಣಿ ಅಚ್ಚರಿಯೊಂದಕ್ಕೆ ಸಾಕ್ಷಿಯಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 335 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಕೇವಲ 179 ರನ್‌ಗಳಿಗೆ ಆಲೌಟ್ ಆಗಿ, 154 ರನ್‌ಗಳಿಂದ

ಸೋಲೊಪ್ಪಿಕೊಂಡಿತ್ತು. ಇದೇ ವೇಳೆ 2ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 335 ರನ್ ಗಳಿಸಿತು. ಇದಕ್ಕುತ್ತರವಾಗಿ ಆಫ್ಘಾನಿಸ್ತಾನ ಸರಿಯಾಗಿ 179 ರನ್‌ಗೆ ಆಲೌಟ್ ಆಗಿ 154 ರನ್ ಗಳ ಸೋಲೊಪ್ಪಿಕೊಂಡಿತು. ಒಂದೇ ಒಂದು ವ್ಯತ್ಯಾಸ ಎಂದರೆ, ಮೊದಲ ಪಂದ್ಯದಲ್ಲಿ ಜಿಂಬಾಬ್ವೆ 34.4 ಓವರ್‌ಗಳಲ್ಲಿ ಆಲೌಟ್ ಆಗಿತ್ತು. 2ನೇ ಪಂದ್ಯದಲ್ಲಿ ಆಫ್ಘನ್ 30.1 ಓವರ್‌ಗಳಲ್ಲಿ ಸರ್ವಪತನಗೊಂಡಿತ್ತು.

loader