ಬೀದೀಲಿ ಮಲಗಿದ ಜಿಂಬಾಬ್ವೆ ಆಟಗಾರರು!
- ಅರ್ಹತಾ ಪಂದ್ಯವನ್ನಾಡಲು ಟ್ಯುನೀಷಿಯಾಕ್ಕೆ ಬಂದಿದ್ದ ಜಿಂಬಾಬ್ವೆ ರಾಷ್ಟ್ರೀಯ ತಂಡ
- ವಸತಿ ಹಾಗೂ ಉಪಹಾರಕ್ಕಾಗಿ ನೀಡಿರುವ ಹೋಟೆಲ್ ಅಂತ್ಯಂತ ಕಳಪೆ: ಆರೋಪ
ಟ್ಯುನಿಸ್ (ಟ್ಯುನೀಷಿಯಾ): ರಗ್ಬಿ ವಿಶ್ವಕಪ್ ಅರ್ಹತಾ ಪಂದ್ಯವನ್ನಾಡಲು ಇಲ್ಲಿಗೆ ಬಂದಿದ್ದ ಜಿಂಬಾಬ್ವೆ ರಾಷ್ಟ್ರೀಯ ತಂಡದ ಆಟಗಾರರು ಬೀದಿಯಲ್ಲಿ ನಿದ್ರಿಸಿದ ಘಟನೆ ನಡೆದಿದೆ.
ವಸತಿ ಹಾಗೂ ಉಪಹಾರಕ್ಕಾಗಿ ತಮಗೆ ನೀಡಿರುವ ಹೋಟೆಲ್ ಅಂತ್ಯಂತ ಕಳಪೆ ಸೌಕರ್ಯ ಹೊಂದಿದೆ ಎಂದು ಆರೋಪಿಸಿ ಆಟಗಾರರು ಪ್ರತಿಭಟನೆ ನಡೆಸಿದ್ದಾರೆ.
ಇದಕ್ಕೂ ಮುನ್ನ ಆಟಗಾರರು ವೀಸಾ ಹಣ ಪಾವತಿಸಲು ವಿಫಲವಾದ ಕಾರಣ 6 ತಾಸು ವಿಮಾನ ನಿಲ್ದಾಣದಲ್ಲೇ ಕಳೆದಿತ್ತು.