ಕ್ಯಾಲೆಂಡರ್ ವರ್ಷವೊಂದರಲ್ಲಿ ಟಿ20 ಕ್ರಿಕೆಟ್'ನಲ್ಲಿ ಗರಿಷ್ಠ ವಿಕೆಟ್ ಕಿತ್ತ ದಾಖಲೆ ಪಾಕಿಸ್ತಾನದ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್(25 ವಿಕೆಟ್) ಹೆಸರಿನಲ್ಲಿದೆ. ಅಜ್ಮಲ್ 2012ರಲ್ಲಿ ಚುಟುಕು ಕ್ರಿಕೆಟ್'ನಲ್ಲಿ 25 ವಿಕೆಟ್ ಕಬಳಿಸಿದ್ದರು. ಇದೀಗ ಚಾಹಲ್ ಇನ್ನು 3 ವಿಕೆಟ್ ಕಬಳಿಸಿದರೆ ಪಾಕಿಸ್ತಾನದ ಕ್ರಿಕೆಟಿಗನ ದಾಖಲೆ ಅಳಿಸಿಹಾಕಬಹುದಾಗಿದೆ.

ನವದೆಹಲಿ(ಡಿ.24): ಟೀಂ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವಿನೂತನ ದಾಖಲೆ ಬರೆಯಲು ಸಿದ್ದರಾಗಿದ್ದಾರೆ.

ಚುಟುಕು ಕ್ರಿಕೆಟ್'ನಲ್ಲಿ ಈಗಾಗಲೇ ಗಮನಾರ್ಹ ಪ್ರದರ್ಶನ ತೋರಿರುವ ಚಾಹಲ್, ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ 8 ವಿಕೆಟ್ ಕಿತ್ತಿದ್ದಾರೆ. 2017ರಲ್ಲಿ ಟಿ20ಯಲ್ಲಿ ಚಾಹಲ್ 11 ಪಂದ್ಯಗಳಲ್ಲಿ 23 ವಿಕೆಟ್ ಕೀಳುವ ಮೂಲಕ ಪ್ರಸಕ್ತ ಸಾಲಿನಲ್ಲಿ ಗರಿಷ್ಠ ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. 2016ರಲ್ಲಿ ಅಶ್ವಿನ್ ಕೂಡ 23 ವಿಕೆಟ್ ಕಬಳಿಸಿದ್ದರು, ಚಾಹಲ್ ಇನ್ನೊಂದು ವಿಕೆಟ್ ಕಿತ್ತರು ಅಶ್ವಿನ್ ದಾಖಲೆ ಲೆಗ್'ಸ್ಪಿನ್ನರ್ ಪಾಲಾಗಲಿದೆ.