ವಿರಾಟ್ ಕೊಹ್ಲಿ ಕಾಲೆಳೆದ ಯುವರಾಜ್ ಸಿಂಗ್!
ಐಪಿಎಲ್ ಟೂರ್ನಿ ಬಳಿಕ ವಿಶ್ರಾಂತಿಗೆ ಜಾರಿದ ವಿರಾಟ್ ಕೊಹ್ಲಿ, ಹಳೆ ನೆನಪನ್ನ ಹಂಚಿಕೊಂಡಿದ್ದರು. ಆದರೆ ಇದೀಗ ಕೊಹ್ಲಿ ಸವಿನೆನಪನ್ನು ಕ್ರಿಕೆಟಿಗ ಯುವರಾಜ್ ಸಿಂಗ್ ಟ್ರೋಲ್ ಮಾಡಿದ್ದಾರೆ.
ಚಂಢೀಘಡ(ಮೇ.18): ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೂಡಿ ಗೋವಾಗೆ ತೆರಳಿದ್ದಾರೆ. ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಕ್ಕೂ ಮುನ್ನ ರಿಲ್ಯಾಕ್ಸ್ ಮೂಡ್‌ಗೆ ಜಾರಿರುವ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹಳೇ ನೆನಪನ್ನು ಸ್ಮರಿಸಿಕೊಂಡಿದ್ದರು. ಕೊಹ್ಲಿ ಫೋಟೋಗೆ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್ ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ : ಮೇ 22ರಂದು ಇಂಗ್ಲೆಂಡ್‌ಗೆ ಭಾರತ ತಂಡ ಪ್ರಯಾಣ
ಶುಕ್ರವಾರದ ಸವಿನೆನಪು, ಇದು ಯಾವ ನಗರ ಎಂದು ಹೇಳಬಲ್ಲಿರಾ ಎಂದು ಫೋಟೋ ಪೋಸ್ಟ್ ಮಾಡಿದ್ದರು. ಈ ಫೋಟೋಗೆ ಪ್ರತಿಕ್ರಿಯೆ ನೀಡಿರುವ ಯುವರಾಜ್, ಇದು ಮೇಲ್ನೋಟಕ್ಕೆ ಕೋಟ್‌ಕಾಪುರ ಎಂದಿದ್ದಾರೆ. ಇನ್ನು ಹರ್ಭಜನ್ ಸಿಂಗ್ ಇದಕ್ಕೆ ಏನು ಹೇಳ್ತಿರಾ ಎಂದು ಪ್ರತಿಕ್ರಿಸಿದ್ದಾರೆ.
ಇದನ್ನೂ ಓದಿ: ಧೋನಿ ಬಗ್ಗೆ ನಾನು 'ಹಾಗೆ' ಹೇಳಿಲ್ಲ..! ಉಲ್ಟಾ ಹೊಡೆದ ಸ್ಪಿನ್ನರ್
ಸದ್ಯ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಮೇ.21 ರಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಮೇ.22 ರಂದು ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರಯಾಣ ಬೆಳೆಸಲಿದ್ದಾರೆ. ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯ ಆಡಲಿದೆ.