ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಲು ಭಾರತ ಕ್ರಿಕೆಟ್‌ ತಂಡ ಮೇ 22ರಂದು ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಐಪಿಎಲ್‌ನಲ್ಲಿ ಬಿಡುವಿಲ್ಲದೆ ಆಡಿದ ಭಾರತೀಯ ಆಟಗಾರರು, ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ಗಾಯದ ಸಮಸ್ಯೆ ಕಾರಣ, ಐಪಿಎಲ್‌ನಿಂದ ಹೊರಬಿದ್ದಿದ್ದ ಆಲ್ರೌಂಡರ್‌ ಕೇದಾರ್‌ ಜಾಧವ್‌, ತಂಡ ಇಂಗ್ಲೆಂಡ್‌ಗೆ ಹೊರಡುವ ವೇಳೆಗೆ ಸಂಪೂರ್ಣವಾಗಿ ಗುಣಮುಖರಾಗುವ ನಿರೀಕ್ಷೆ ಇದೆ. ಆಯ್ಕೆ ಸಮಿತಿ ಸದಸ್ಯರು ಜಾಧವ್‌ ಫಿಟ್ನೆಸ್‌ ವರದಿಗೆ ಕಾಯುತ್ತಿದ್ದು, ಬದಲಿ ಆಟಗಾರನ ಆಯ್ಕೆಗೆ ಅಗತ್ಯ ಸಿದ್ಧತೆ ನಡೆಸಿದ್ದಾರೆ.

ಮೇ 24ರಿಂದ ಅಭ್ಯಾಸ ಪಂದ್ಯಗಳು ಆರಂಭಗೊಳ್ಳಲಿದ್ದು, ಮೇ 30ಕ್ಕೆ ಟೂರ್ನಿ ಆರಂಭಗೊಳ್ಳಲಿದೆ. ಭಾರತ ಜೂನ್‌ 5ಕ್ಕೆ ದ.ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದ್ದು, ಆ ವೇಳೆಗೆ ಜಾಧವ್‌ ಫಿಟ್ನೆಸ್‌ ಸಾಧಿಸಲಿದ್ದಾರೆ ಎಂದು ಬಿಸಿಸಿಐ ವೈದ್ಯರು ಭರವಸೆ ನೀಡಿದರೆ ಅವರನ್ನು ಇಂಗ್ಲೆಂಡ್‌ಗೆ ಕರೆದೊಯ್ಯಲು ತಂಡ ನಿರ್ಧರಿಸಿದೆ ಎನ್ನಲಾಗಿದೆ.

ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.