ಫಿಫಾ ವಿಶ್ವಕಪ್ ಗೆಲುವಿನ ಭವಿಷ್ಯ ನುಡಿದ ಯುವರಾಜ್ ಸಿಂಗ್

Yuvraj Singh predicts the winner of the FIFA World Cup
Highlights

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಯಾರು ಚಾಂಪಿಯನ್ ಪಟ್ಟ ಅಲಂಕರಿಸುತ್ತಾರೆ ಅನ್ನೋ ಪ್ರಶ್ನೆಗೆ ನಾವು ಕಾಯಲೇಬೇಕು. ಆದರೆ ಟೀಮ್ಇಂಡಿಯಾ ಆಲ್‌ರೌಂಡರ್ ಯುವರಾಜ್ ಸಿಂಗ್ ಫಿಫಾ ಗೆಲುವಿನ ಕುರಿತು ಭವಿಷ್ಯ ನುಡಿದಿದ್ದಾರೆ. ಇಲ್ಲಿದೆ ಯುವಿ ಭವಿಷ್ಯ

ಚಂಡಿಘಡ(ಜೂ.16): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಯಾರು ಚಾಂಪಿಯನ್ ಆಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಇದೀಗ ಟೀಮ್ಇಂಡಿಯಾ ಆಲ್‌ರೌಂಡರ್ ಯುವರಾಜ್ ಸಿಂಗ್ ಫಿಫಾ ವಿಶ್ವಕಪ್ ಗೆಲ್ಲೋ ತಂಡ ಯಾವುದು ಅನ್ನೋದನ್ನ ಹೇಳಿದ್ದಾರೆ.

ಯುವರಾಜ್ ಸಿಂಗ್ ಭವಿಷ್ಯದ ಪ್ರಕಾರ, ಫ್ರಾನ್ಸ್ ತಂಡ ಈ ಬಾರಿ ಫಿಫಾ ವಿಶ್ವಕಪ್ ಟ್ರೋಫಿ ಗೆಲ್ಲಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಬ್ರೆಜಿಲ್ ಸ್ಟಾರ್ ಪ್ಲೇಯರ್ ನೇಯ್ಮಾರ್ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆಯಲಿದ್ದಾರೆ ಎಂದು ಯುವಿ ಭವಿಷ್ಯ ನುಡಿದಿದ್ದಾರೆ.

 

 

ಫ್ರಾನ್ಸ್ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಫಿಫಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಯುವರಾಜ್ ಸಿಂಗ್ ಫ್ರಾನ್ಸ್ ವಿಶ್ವಕಪ್ ಗೆಲ್ಲಲಿದೆ ಎಂದಿರೋದು ಟೂರ್ನಿಯ ಕುತೂಹವನ್ನ ಹೆಚ್ಚಿಸಿದೆ.

ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ವಿರುದ್ಧ ಫ್ರಾನ್ಸ್ ತಂಡಕ್ಕೆ ರೋಚಕ ಜಯ


 

loader