ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ವಿರುದ್ಧ ಫ್ರಾನ್ಸ್ ತಂಡಕ್ಕೆ ರೋಚಕ ಜಯ

FIFA 2018 Paul Pogba, Antoine Griezmann give France 2-1 win over Australia
Highlights

ಫಿಫಾ ವಿಶ್ವಕಪ್ ಪಂದ್ಯ ದಿನೇ ದಿನೇ ರೋಚಕ ಘಟ್ಟ ತಲುಪುತ್ತಿದೆ. ಇಂದು ನಡೆದ ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಈ ರೋಚಕ ಪಂದ್ಯದಲ್ಲಿ ಫ್ರಾನ್ಸ್ ಗೆಲುವು ಸಾಧಿಸಿದ್ದು ಹೇಗೆ? ಇಲ್ಲಿದೆ ವಿವರ

ರಷ್ಯಾ(ಜೂ.16): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಫ್ರಾನ್ಸ್ ನಿರೀಕ್ಷೆಯಂತೆ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಫ್ರಾನ್ಸ್ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ಪಂದ್ಯ ಆರಂಭವಾಗುತ್ತಿದ್ದಂತೆ ಫ್ರಾನ್ಸ್ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದರೆ ಆಸ್ಟ್ರೇಲಿಯಾ ಡಿಫೆಂಡರ್‌ಗಳನ್ನ ವಂಚಿಸಿ ಗೋಲು ಸಿಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲಾರ್ಧ ಗೋಲುಗಳಿಲ್ಲದೆ ಅಂತ್ಯಗೊಂಡಿತು.

ದ್ವಿತಿಯಾರ್ಧದಲ್ಲಿ ಫ್ರಾನ್ಸ್ ಗೋಲಿನ ಖಾತೆ ತೆರೆಯಿತು. 58ನೇ ನಿಮಿಷದಲ್ಲಿ ಆಂಡೋನಿ ಗ್ರೇಝ್‌ಮಾನ್ ಪೆನಾಲ್ಟಿ ಅವಕಾಶ ಉಪಯೋಗಿಸಿ ಗೋಲು ಬಾರಿಸಿದರು. ಇದರ ಬೆನ್ನಲ್ಲೇ, ಆಸ್ಟ್ರೇಲಿಯಾದ ಮಿಲೆ ಜೆಡಿನಾಕ್ ಗೋಲು ಬಾರಿಸಿ ಸಮಭಲಗೊಳಿಸಿದರು. ಆದರೆ 80ನೇ ನಿಮಿಷದಲ್ಲಿ ಪೌಲ್ ಪೊಗ್ಬಾ ಸಿಡಿಸಿದ ಗೋಲಿನ ನೆರವಿನಿಂದ ಫ್ರಾನ್ಸ್ 2-1 ಅಂತರದಲ್ಲಿ ಪಂದ್ಯ ಗೆದ್ದಿಕೊಂಡಿತು. 
 

loader