ಪಂಜಾಬ್ ಕ್ರಿಕೆಟ್ ತಂಡದ ಆಟಗಾರ ಮನನ್ ವೋಹ್ರಾ ಅವರ ಸಹೋದರಿ ಮದುವೆ ಸಂದರ್ಭದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಅಪ್ಪ-ಮಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಚಂಡೀಘಡ(ಅ.03): ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಅವರ ತಂದೆ ಯೋಗ್‌ರಾಜ್ ನಡುವಿನ ಮುನಿಸಿಗೆ ತೆರೆ ಬಿದ್ದಂತೆ ಕಾಣುತ್ತಿದೆ.
ಪಂಜಾಬ್ ಕ್ರಿಕೆಟ್ ತಂಡದ ಆಟಗಾರ ಮನನ್ ವೋಹ್ರಾ ಅವರ ಸಹೋದರಿ ಮದುವೆ ಸಂದರ್ಭದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಅಪ್ಪ-ಮಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಯೋಗ್ ರಾಜ್ ವಿರೋಧದ ನಡುವೆಯೂ ಯುವರಾಜ್ ಸಿಂಗ್ ಮದುವೆಯನ್ನು ಡೇರಾದ ಆಶ್ರಮದಲ್ಲಿ ನಡೆಸಲಾಗಿತ್ತು. ಇದರಿಂದ ಬೇಸರಗೊಂಡ ಯೋಗ್ ರಾಜ್, ಮಗನ ಮದುವೆಗೆ ಗೈರಾಗಿದ್ದರು. ಇದಾದ ಬಳಿಕ ಅಪ್ಪ- ಮಗನ ನಡುವಿನ ಸಂಬಂಧದಲ್ಲಿ ಬಿರುಕು ಏರ್ಪಟ್ಟಂತೆ ಕಂಡುಬಂದಿತ್ತು.