ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾಗಿರೋ ಯುವರಾಜ್ ಸಿಂಗ್ ಹಾಗೂ ಇರ್ಫಾನ್ ಫಠಾಣ್ ದಿಢೀರ್ ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿಯಲ್ಲಿ ವಿಶೇಷತೆ ಏನಿಲ್ಲ. ಆದರೆ ಅಭಿಮಾನಿಯೊರ್ವನ ಟ್ವೀಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಇವರ ಭೇಟಿ ಟ್ರೆಂಡ್ ಆಗಿದೆ. ಈ ಕುರಿತ ವಿವರ ಇಲ್ಲಿದೆ.

ಮುಂಬೈ(ಜು.22): ಟೀಂ ಇಂಡಿಯಾ ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ವೇಗಿ ಇರ್ಫಾನ್ ಪಠಾಣ್ ಇಬ್ಬರು ಅತ್ಯುತ್ತಮ ಗೆಳೆಯರು. ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾದಲ್ಲಿ ಯುವಿ ಹಾಗೂ ಪಠಾಣ್ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡವರು.

2007 ಟಿ20 ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಹಾಗೂ ಇರ್ಫಾನ್ ಪಠಾಣ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ ಸದ್ಯ ಇಬ್ಬರೂ ಕೂಡ ಟೀಂ ಇಂಡಿಯಾಲ್ಲಿ ಇಲ್ಲ. ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರಾಗಿರೋ ಯುವಿ ಹಾಗೂ ಇರ್ಫಾನ್ ಇತ್ತೀಚೆಗೆ ಭೇಟಿಯಾಗಿದ್ದಾರೆ.

Scroll to load tweet…

ಭೇಟಿ ಬಳಿಕ ಇರ್ಫಾನ್ ಪಠಾಣ್ ಸಾಮಾಜಿಕ ಜಾಲತಾಣದಲ್ಲಿ ಫೋಟ್ ಅಪ್‌ಲೋಡ್ ಮಾಡಿದ್ದಾರೆ. ಯುವಿ ಹಾಗೂ ಪಠಾಣ್ ಬೇಟಿ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. 

Scroll to load tweet…

ಇರ್ಫಾನ್ ಈ ಹಿಂದೆ ಹುಡುಗಿ ಹೆಸರನ್ನ ಯುವಿಗೆ ಸಂದೇಶ ಕಳುಹಿಸಿದ ಹಾಸ್ಯ ಘಟನೆಯನ್ನ ಅಭಿಮಾನಿಗಳು ನೆನಪಿಸಿದ್ದಾರೆ. ಹೀಗಾಗಿ ಇರ್ಫಾನ್ ಪಠಾಣ್ ಜೊತೆಗೆ ಎಚ್ಚರಿಕೆಯಿಂದರಬೇಕು ಎಂದು ಅಭಿಮಾನಿಗಳು ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ. ಅಭಿಮಾನಿಯೊರ್ವ ಟ್ವೀಟ್‌ಗೆ ಪಠಾಣ್ ಕೂಡ ನಗುವಿನ ಪ್ರತಿಕ್ರಿಯೆ ನೀಡಿದ್ದಾರೆ.

Scroll to load tweet…