ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಎರಡನೇ ಆಟಗಾರ ಎನ್ನುವ ಕುಖ್ಯಾತಿಗೆ ಪಠಾಣ್ ಪಾತ್ರವಾಗಿದ್ದಾರೆ. ಈ ಮೊದಲು ಡೆಲ್ಲಿ ಮೂಲದ ಯುವ ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್ 2013ರಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು 18 ತಿಂಗಳುಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು.

ಬರೋಡ(ಜ.09): ಟೀಂ ಇಂಡಿಯಾ ಆಲ್ರೌಂಡರ್ ಯೂಸೂಫ್ ಪಠಾಣ್ ಉದ್ದೀಪನಾ ಮದ್ದು ಸೇವನಾ ಪರೀಕ್ಷೆಯಲ್ಲಿ ವಿಫಲವಾಗಿದ್ದಾರೆ.

2017-18ನೇ ಸಾಲಿನಲ್ಲಿ ಬರೋಡ ತಂಡವನ್ನು ಪ್ರತಿನಿಧಿಸಿ ಆಂಧ್ರಪ್ರದೇಶ ವಿರುದ್ಧ ಏಕೈಕ ಪಂದ್ಯವನ್ನಾಡಿದ್ದ ಯೂಸೂಫ್, ಉದ್ದೀಪನಾ ಮದ್ದು ಸೇವಿಸಿರುವುದು ಸಾಭೀತಾದ ಹಿನ್ನಲೆಯಲ್ಲಿ ಮುಂಬರುವ ಟೂರ್ನಿಗಳಿಗೆ ಯೂಸೂಫ್ ಅವರನ್ನು ಆಯ್ಕೆ ಮಾಡಬೇಡಿ ಎಂದು ಬಿಸಿಸಿಐ ಬರೋಡ ಕ್ರಿಕೆಟ್ ಸಂಸ್ಥೆಗೆ ಸೂಚಿಸಿದೆ.

ಅಕ್ಟೋಬರ್'ನಲ್ಲಿ ಆಂಧ್ರ ವಿರುದ್ಧ ನಡೆದ ಪಂದ್ಯದಲ್ಲಿ ಯೂಸೂಫ್ ಪಠಾಣ್ ಕೇವಲ 4 ರನ್ ಗಳಿಸಿದ್ದರು ಇನ್ನೂ ಬೌಲಿಂಗ್'ನಲ್ಲಿ ಯಾವುದೇ ವಿಕೆಟ್ ಪಡೆಯಲು ಯಶಸ್ವಿಯಾಗಿರಲಿಲ್ಲ. ಯೂಸೂಫ್ ಪಠಾಣ್ ಬ್ರೊಜೀಟ್ ಎಂಬ ನಿಷೇಧಿತ ಮದ್ದು ಸೇವಿಸಿದ್ದಾರೆ ಎಂದು ವರದಿಯಾಗಿದೆ.

ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಎರಡನೇ ಆಟಗಾರ ಎನ್ನುವ ಕುಖ್ಯಾತಿಗೆ ಪಠಾಣ್ ಪಾತ್ರವಾಗಿದ್ದಾರೆ. ಈ ಮೊದಲು ಡೆಲ್ಲಿ ಮೂಲದ ಯುವ ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್ 2013ರಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು 18 ತಿಂಗಳುಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು. ಯೂಸೂಫ್ ಭಾರತ ಪರ 57 ಏಕದಿನ ಹಾಗೂ 22 ಟಿ20 ಪಂದ್ಯಗಳನ್ನಾಡಿದ್ದಾರೆ. ಯೂಸೂಫ್ ಪಠಾಣ್ 2007 ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ.

ಕಳೆದ ವರ್ಷ ಅರ್ಜುನ ಪದಕ ವಿಜೇತ, ಭಾರತ ಫುಟ್ಬಾಲ್ ತಂಡದ ಗೋಲ್ ಕೀಪರ್ ಸುಬ್ರಾತ್ ಪಾಲ್ ಕೂಡ ಇದೇ ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು.